ಬುದ್ಧನೆಡೆಗೆ.. ಮರಳಿ ಮನೆಗೆ: ಮೈಸೂರಿನಲ್ಲಿ ಬೃಹತ್ ಸಮಾವೇಶ


2006 ಬುದ್ಧನೆಡೆಗೆ.. ಮರಳಿ ಮನೆಗೆ: ಮೈಸೂರಿನಲ್ಲಿ ಬೃಹತ್ ಸಮಾವೇಶ

old news: Monday, 27 November 2006

ಮೈಸೂರು: ಸುಮಾರು ೧೫ ಸಾವಿರ ದಲಿತ ಯುವಜನರು ಪಾಲ್ಗೊಂಡಿದ್ದ ರಾಜ್ಯಮಟ್ಟದ `ಬುದ್ಧನೆಡೆಗೆ..ಮರಳಿ ಮನೆಗೆ’ ಸಮಾವೇಶವು ನ.೨೬ ಮೈಸೂರಿನಲ್ಲಿ ಜರುಗಿತು.

ಮೈಸೂರು ವಿಶ್ವವಿದ್ಯಾನಿಲಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೊಧನಾ ಹಾಗೂ ವಿಸ್ತರಣಾ ಕೇಂದ್ರ ಬೌದ್ಧ ಧಮ್ಮ ದೀಕ್ಷಾ ಸಮಿತಿಯವರು ಸಂಯುಕ್ತವಾಗಿ ಈ ಸಮಾವೇಶವನ್ನು ಆಯೋಜಿಸಿದ್ದರು.  ಸಮಾವೇಶವನ್ನು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಗೋಪಾಲ್ ಗುರು ಉದ್ಘಾಟಿಸಿ ಮಾತನಾಡುತ್ತಾ ಬೌದ್ಧ ಧರ್ಮ ಮನುಷ್ಯ ಕೇಂದ್ರಿತವಾಗಿದ್ದು, ದೇವರಿಗಿಂತ, ಮಾನವೀಯತೆ ಧರ್ಮದ ತಿರುಳಾಗಿದೆ. ಸಮಾನತೆ ಮತ್ತು ಸ್ವಾವಲಂಬನೆಯನ್ನು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

`ಮರಳಿ ಮನೆಗೆ’ ಕೃತಿಯನ್ನು ಬಿಡುಗಡೆ ಮಾಡಿದರು. ಮಾತನಾಡಿದ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಎಲ್. ಹನುಮಂತಯ್ಯ ಧರ್ಮ ಮತ್ತು ರಾಜಕಾರಣ ಒಂದಾಗಿರುವುದರಿಂದ ಸಮಾಜದಲ್ಲಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಪುರೋಹಿತಶಾಹಿ ವ್ಯವಸ್ಥೆ ಇದಕ್ಕೆ ಕಾರಣವಾಗಿದ್ದು ರಾಜಕೀಯ ಧ್ರುವೀಕರಣವಾಗುವರೆಗೆ ಇದರ ವಿರುದ್ಧ ಹೋರಾಟ ಅಗತ್ಯ ಎಂದು ಅಭಿಪ್ರಾಯಪಟ್ಟರು.  ಧರ್ಮವಿರುವುದು ಮಾನವ ಕಲ್ಯಾಣಕ್ಕಾಗಿಯೇ ಹೊರತು ಆತ್ಮದ ಉಳಿವಿಗಲ್ಲ ಎಂದ ಅವರು, ನ್ಯಾಯಪರತೆ, ಸ್ವಾತಂತ್ರ್ಯ ಮತ್ತು ಬಿಡುಗಡೆಯ ಅಸ್ತ್ರವಾಗಿರುವ ಬೌದ್ಧ ಧರ್ಮವನ್ನು ಡಾ. ಅಂಬೇಡ್ಕರ್ ಪುನರುತ್ಥಾನ ಮಾಡಿದ್ದಷ್ಟೇ ಅಲ್ಲದೆ ಪುನರ್ ವ್ಯಾಖ್ಯಾನ ಕೂಡ ನೀಡಿದರು ಎಂದು ಹನುಮಂತಯ್ಯ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಸುವರ್ಣ ವರ್ಷಾಚರಣೆ ಸಮಿತಿ ಅಧ್ಯಕ್ಷ ಹಾಗು ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.   ಸಾಹಿತಿ ದೇವನೂರು ಮಹಾದೇವ, ಮಾಜಿ ಸಚಿವ ಡಾ. ಜೆ. ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: