ದ್ವೇಷಕ್ಕೆ ದಾರಿಯಾದ ಪ್ರೀತಿ


ಕಳೆದ 15 ವರ್ಷಗಳಿಂದ ಶಾಂತವಾಗಿದ್ದ ಕೊಳ್ಳೇಗಾಲ ಪಟ್ಟಣ ದಿಢೀರನೆ ಬೂದಿ ಮುಚ್ಚಿದ ಕೆಂಡದಂತಾಗಿದೆ.  ಆದರೆ ಇಂತಹ ದಿಢೀರ್ ಹಿಂಸೆಗೆ ‘ ಪ್ರೇಮ ಪ್ರಕರಣ’ ವೊಂದು ಕಾರಣವಾಗಿದ್ದು ಮಾತ್ರ ದುರಂತ. ಜನರನ್ನು ಒಂದು ಮಾಡಬೇಕಾಗಿದ್ದ ಪ್ರೀತಿ, ಪ್ರೇಮ, ದ್ವೇಷಕ್ಕೆ ದಾರಿಯಾದದ್ದು ನೋವಿನ ಸಂಗತಿಯೇ ಸರಿ.

ಆಸ್ಟ್ರೇಲಿಯಾ ಅಮೇರಿಕಾ, ಇಂಗ್ಲೆಂಡ್ ಮುಂತಾದ  ದೇಶಗಳಲ್ಲಿ ವೀಸಾ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರು ಆಸ್ಟ್ರೇಲಿಯಾದಲ್ಲಿ ದೌರ್ಜನ್ಯವಾದಾಗ ಅದನ್ನು ಜನಾಂಗೀಯ ಹಲ್ಲೆ ಎಂದು ಖಂಡಿಸಿದ್ದಾರೆ. ಆದರೆ ತಾವು ದಿನಬೆಳಗಾದರೆ  ನೋಡುವ ತಿರುಗಾಡುವ ಬೀದಿಗಳಲ್ಲಿರುವ ಜನರ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯವಾಗದಿರುವುದು ಈ ದೇಶದ ದುರಂತ.

ಒಂದು ಜಾತಿ ಬೀದಿಯಿಂದ ಮತ್ತೊಂದು ಜಾತಿಯ ಬೀದಿಗೆ ವೀಸಾ ನಿರಾಕರಣೆಯ ಅಘೋಷಿತ ವಿಕೃತ ಶಾಸನ ಎಲ್ಲರ ಮನಸ್ಸುಗಳನ್ನು ಆಕ್ರಮಿಸಿರುವುದೇ ಇದಕ್ಕೆ ಕಾರಣ. ಮಡಿ ಮೈಲಿಗೆಯನ್ನು ಅತ್ಯಂತ ವ್ಯವಸ್ಥಿತವಾಗಿ ಆಚರಿಸಿಕೊಂಡು ಬಂದಿರುವ ಈ ಜನ ಜಾತಿ ವಿಚಾರ ಬಂದಾಗ ಸ್ವಲ್ಪವೂ ನಾಚಿಕೆ, ಮಾನ, ಮಯರ್ಾದೆ ಇಲ್ಲದೆ ವತರ್ಿಸುತ್ತಿರುವುದು ಸೋಜಿಗ.

ಕೊಳ್ಳೇಗಾಲ ವ್ಯಾಪಾರ ಕೇಂದ್ರವಾಗಿ ಹೆಸರು ಮಾಡಿರುವಷ್ಟೇ ಮಾಟ ಮಂತ್ರಗಳಿಗೂ ಕುಖ್ಯಾತವಾಗಿದೆ.  ಪಟ್ಟಣದ ನಾಲ್ಕು ಪ್ರಬಲ ಕೋಮುಗಳಾದ ಹೊಲೆಯ, ನಾಯಕ, ದೇವಾಂಗ ಮತ್ತು ಮುಸ್ಲಿಂಗಳ ಮಧ್ಯೆ ದಶಕಗಳ ಹಿಂದೆ ಸಾಮಾನ್ಯವೆನಿಸಿದ್ದ ಕಾದಾಟಕ್ಕೆ 15 ವರ್ಷಗಳಿಂದ ವಿರಾಮ ಸಿಕ್ಕಿತ್ತು. (1994 ರಿಂದೀಚೆಗೆ ಒಂದೇ ಒಂದು ಗಲಭೆ ಆಗಿರಲಿಲ್ಲ) ತಾಲ್ಲೋಕಿನ ಜನ ಸಂಖ್ಯೆಯಲ್ಲಿ ಕಡಿಮೆ ಸ್ಥಾನ ಹೊಂದಿದ್ದರೂ ಸಹ ಆಥರ್ಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಪ್ರಬಲರಾಗಿರುವ ದೇವಾಂಗ ಸಮುದಾಯ 1992 ರಿಂದೀಚೆಗೆ ಉದಾರೀಕರಣ ನೀತಿ ಜಾರಿಗೆ ಬಂದ ನಂತರ ರೇಷ್ಮೆ ಉತ್ಪಾದನೆ ಮೇಲೆ ಉಂಟಾದ ದುಷ್ಪರಿಣಾಮದಿಂದ ಆಥರ್ಿಕವಾಗಿ ದುರ್ಬಲವಾಯಿತು. ಆದರೆ ತನ್ನ ಸಾಮಾಜಿಕ ಹಿರಿತನವನ್ನದು ಕಳೆದುಕೊಳ್ಳಲು ಸಿದ್ದವಿಲ್ಲವೆನ್ನುವುದಕ್ಕೆ ಜಾತಿ ವ್ಯವಸ್ಥೆಯ ಜಿಗುಟುತನವೇ ಕಾರಣ.

ದೇಶದಲ್ಲಿರುವ 6000 ಕ್ಕೂ ಹೆಚ್ಚು ಜಾತಿಗಳಲ್ಲಿ ಕೆಲವರು ಮೇಲರಿಮೆಯಿಂದ ಬೀಗುತ್ತಿದ್ದರೆ ಹಲವರು ಕೀಳರಿಮೆಯಿಂದ ನರಳುತ್ತಿದ್ದಾರೆ.  ಜಾತಿಯ ಹಮ್ಮು  ಒಂದು ರೀತಿಯ ಮಧ್ಯ ಸೇವನೆ ಮಾಡಿದಂತೆ. ಸ್ಕಾಚ್ ವಿಸ್ಕಿ ಕುಡಿದು ತಾನು ಶ್ರೇಷ್ಠ ಎಂದು ಬೀಗುವವರು, ಕಳ್ಳಬಟ್ಟಿ / ಹೆಂಡ ಕುಡಿದವರನ್ನು ಕನಿಷ್ಠ ಎಂದು ತಿಳಿಸಿದಂತಿದೆ ಈ ಮನಸ್ಥಿತಿ.
ಕನ್ನಡ ನಾಡಿನ ಖ್ಯಾತ  ಚಿಂತಕರಾದ ಶ್ರೀ.ಶಂಕರ ಮೊಕಾಶಿ  ಪುಣೇಕರರವರು ತಮ್ಮ Harijan Contribution to Medeival Thoughts ಎಂಬ ಕೃತಿಯಲ್ಲಿ ‘ದೇವಲ’ ಮಹಷರ್ಿ ಹರಿಜನ ಸಮುದಾಯಕ್ಕೆ ಸೇರಿದವನೆಂದು ಬರೆದಿದ್ದಾರೆ.  ಆದರೆ ಈ ದೇವಲ ಮಹಷರ್ಿಯನ್ನು ತಮ್ಮ ಆರಾಧ್ಯ ದೈವವೆಂದು ತಿಳಿದಿರುವ ದೇವಾಂಗ ಸಮುದಾಯ ತನ್ನ ಸಮಾಜದ ಹೆಣ್ಣುಮಗಳೊಬ್ಬಳು ಹೊಲೆಯ ಸಮಾಜದ ಗಂಡೊಂದನ್ನು ಪ್ರೀತಿಸಿ ಲಗ್ನವಾದುದ್ದಕ್ಕೆ ಹಿಂಸೆಗೆ ಮುಂದಾಗಿದ್ದು ದುರಂತವೇ ಸರಿ.

ಜಾತಿಬೇಲಿಯನ್ನು ದಾಟಿ ಅಂತರ್ ಜಾತಿ ವಿವಾಹ ನಡೆದರೆ ಜಾತಿ ವ್ಯವಸ್ಥೆಯ ಬಿಗಿ ಕಡಿಮೆಯಾಗುತ್ತದೆಂದು ಸಮಾಜ ಶಾಸ್ತ್ರಜ್ಞರಾದ ಎಂ.ಎನ್.ಶ್ರೀನಿವಾಸ ಮತ್ತು ಎಂ.ಎಸ್. ಘುರ್ಯೆ ಮುಂತಾದವರು ಅಭಿಪ್ರಯಿಸಿದ್ದಾರೆ.  ಕೆಲವರಾದರೂ ಪರಸ್ಪರ ಪ್ರೀತಿಸಿ ಲಗ್ನವಾಗುವುದರ ಮೂಲಕ ದಿಟ್ಟತನದಿಂದ ಜಾತಿ ವ್ಯವಸ್ಥೆಯನ್ನು ಮೀರಿ  ನಿಂತಿರುವುದಕ್ಕೆ ಎಲ್ಲಾ ಜಾತಿಗಳ ಪ್ರಜ್ಞಾವಂತರು ಸಂತೋಷದಿಂದ  ಹರಸವುದರ ಮೂಲಕ ಮಾನವತಾ ವಾದಿಗಳಾಗಬೇಕು.  ಆದರೆ ಅದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡು ಹಿಂಸೆಗೆ ಮುಂದಾಗಿರುವುದು ನಾಗರೀಕತೆಯಿಂದ ಅನಾಗರೀಕ ಸ್ಥಿತಿಯತ್ತ ಹೆಜ್ಜೆ ಹಾಕಿದಂತಾಗುತ್ತದೆ.   ದೇವಾಂಗರ ಹೋಟೆಲ್ಗಳಲ್ಲಿ ದೇವಾಂಗರು ಮಾತ್ರ ತಿನ್ನುವಂತಾದರೆ,  ಕೋಮಟಿಗಳ ಬಟ್ಟೆ ಅಂಗಡಿಗಳಲ್ಲಿ ಕೋಮಟಿಗಳು ಮಾತ್ರ ಖರೀದಿಸುವಂತಾದರೆ, ಮುಸ್ಲಿಂರ ಚಪ್ಪಲಿ ಅಂಗಡಿಗಳಲ್ಲಿ ಮುಸ್ಲಿಂರು ಮಾತ್ರ ಚಪ್ಪಲಿ ಖರೀದಿಸುವಂತಾದರೆ ಏನಾಗಬಹುದು.  ಆಥರ್ಿಕ ಚಟುವಟಿಕೆಗೆ ಅತ್ಯಂತ ಉತ್ಸಾಹದಿಂದ  ಜಾತಿ, ಧರ್ಮಗಳ ಬೇಲಿ ದಾಟುವ ಜನ ಸಾಮಾಜಿಕ ವಿಚಾರ ಬಂದಾಗ ಕಪ್ಪೆಚಿಪ್ಪಿನೊಳಗೆ ಅವಿತುಕೊಳ್ಳುವುದೇಕೆ? ಚುನಾವಣೆಗಳಲ್ಲಿ ಓಟು ಬೇಕಾದಾಗ ಯಾರ ಕಾಲನ್ನಾದರೂ ಹಿಡಿಯಲು ಹೋಗುವ ಇವರು, ಕುಡಿತ, ಜೂಜು ಸಿನಿಮಾ ಮುಂತಾದೆಡೆ ಯಾರನ್ನೂ ನೋಡದೆ ಮುನ್ನುಗ್ಗುವ ಇವರು ‘ಪ್ರೀತಿ’ ವಿಚಾರ ಬಂದಾಗ ಕ್ರೂರಿ’ಗಳಾಗುತ್ತಿರುವುದು ಇವರು ಮನುಷ್ಯರೋ ಮೃಗಗಳೋ ಎನ್ನುವ ಅನುಮಾನ ಮೂಡಿಸುತ್ತದೆ.  ಕೊಳ್ಳೇಗಾಲ ಪಟ್ಟಣದ ಎಲ್ಲಾ ಜಾತಿಗಳಲ್ಲೂ ಇಂಥಹ ಜಾತಿವಾದಿಗಳಿರುವಂತೆ, ಮಾನವತಾ ವಾದಿಗಳೂ ಇದ್ದಾರೆ.  ಶ್ರೀಮಂತರಿರುವಂತೆ ಬಡವರೂ ಇದ್ದಾರೆ.  ಅಕ್ರಮ ಸಂಬಂಧಗಳು, ಸೂಳೆಗಾರಿಕೆ ಎಲ್ಲಾ ಜಾತಿಗಳಲ್ಲೂ ಇದೆ.  ಯಾರೂ ಸಹ ನೈತಿಕವಾಗಿ ಶ್ರೇಷ್ಠರಲ್ಲ.  ಬಟ್ಟೆ ಅಂಗಡಿಗಳಲ್ಲಿ ನಡೆಯುವ ಹೆಣ್ಣು ಮಕ್ಕಳ ಶೋಷಣೆ ಹೊರಬಂದಿಲ್ಲ.  ಇದಕ್ಕೆ ಜಾತಿ ಎಂದೂ ಅಡ್ಡಿಯಾಗಿಲ್ಲ.  ಆದರೆ ಇದನ್ನು ಪ್ರಶ್ನಿಸುವ ತಾಕತ್ತು, ಕಾಳಜಿ ಒಬ್ಬನೇ ಒಬ್ಬ  ಚುನಾಯಿತ ಪ್ರತಿನಿಧಿಗಾಗಲೀ, ಸಂಘ ಸಂಸ್ಥೆಗಳ ಲೀಡರ್ಗಳಿಗಾಗಲೀ ಇಲ್ಲ.  ಆದರೆ ಜಾತಿ ವಿಚಾರ ಬಂದಾಗ ಇವರು ಇಲ್ಲದ ವೀರಾವೇಷ ತೋರಿಸುತ್ತಾರೆ.  ಶ್ರೀ.ಶಂಕರ್ ರಂತಹ ಸಜ್ಜನ, ಸ್ನೇಹಜೀವಿ, ಜನಪ್ರತಿನಿಧಿಯ ಹೃದಯದಲ್ಲೂ ಜಾತಿ ವಿಷ ಕ್ರಿಯಾಶೀಲವಾಗಿರುವುದು ಅಸಹ್ಯ ಹುಟ್ಟಿಸುತ್ತದೆ.
ಇಂತಹ ಜಾತಿವಾದಿ ಹೋರಾಟಗಳಿಂದ ಜನಾಂಗದ ಕೆಲವರಲ್ಲಿ  ಹೀರೋಗಳಾಗಬಹುದಾದರೂ, ಅದೇ ಜಾತಿಯ ಬಹು ಸಂಖ್ಯಾತ ಜನರಿಂದ ಬಹಿರಂಗವಾಗಲ್ಲದಿದ್ದರೂ ಆಂತರಿಕವಾಗಿ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಜಾತಿವಾದಿಯಾದ ಎಲ್ಲಾ ನಾಯಕರೂ ಕಸದ ಬುಟ್ಟಿ ಸೇರಿರುವುದು ಇತಿಹಾಸದ ದಾಖಲೆ.
ಅತ್ಯಂತ ಮಡಿವಂತರ ಕೇಂದ್ರಸ್ಥಾನಗಳಲ್ಲೊಂದಾದ  ಉಡುಪಿಯಲ್ಲಿ ಕೆಲ ತಿಂಗಳ ಹಿಂದೆ ಬ್ರಾಹ್ಮಣ Tourist Guide ಒಬ್ಬ ವಿದೇಶಿ ಹುಡುಗಿಯೊಬ್ಬಳ್ಳನ್ನು ಪ್ರೀತಿಸಿದಾಗ ಅವರ ಮದುವೆಯನ್ನು ಅವನ ಬಂದು ಬಳಗದವರು ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸಿದರು.
ವಿದೇಶಿಯರನ್ನು ಸೊಸೆಯಾಗಿ ಸ್ವೀಕರಿಸಲು ಮುಂದಾದ ನಮ್ಮ ದೇಶದ ಜನ ಹೊಲೆಯನೊಬ್ಬನನ್ನು ಅಳಿಯನಾಗಿ ಸ್ವೀಕರಿಸಬಾರದೇಕೆ? (ಇದಕ್ಕೆ ಹುಡುಗಿಯ ಮನೆಯವರಿಂದ ಯಾವುದೇ ವಿರೋಧವಿಲ್ಲದೆ ಮದುವೆಯಾಗಿರುವುದು ಗಮನಿಸಬೇಕಾದ ಅಂಶ. ಕನಿಷ್ಠ ಆ ಒಂದು ಕುಟುಂಬವಾದರೂ ಜಾತ್ಯಾತೀತವಾಗಿರುವುದು ಅಭಿನಂದನಾರ್ಹ)
ದೇವಾಂಗ ಹೆಣ್ಣು ಮಗಳನ್ನು ತಮ್ಮ ಸೊಸೆಯಾಗಿ ಸ್ವೀಕರಿಸಿದ ಹೊಲೆಯ ಜನಾಂಗದಂತೆ ದೇವಾಂಗ ಸಮಾಜವು ಇದನ್ನು ಒಪ್ಪಿ ನವಸಮಾಜದ ನಿಮರ್ಾಣಕ್ಕೆ ನಾಂದಿ ಹಾಡಬಾರದೇಕೆ?

ನಾಗಸಿದ್ದಾರ್ಥ ಹೊಲೆಯಾರ್

ಚಾಮರಾಜನಗರ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: