ಸರ್ವರಿಗೂ ಶಿಕ್ಷಣ ನೀಡುವುದರ ಮೂಲಕ ಮಾತ್ರ ಅಂಬೇಡ್ಕರ್ ಕನಸಿನ ಭಾರತ ನಿರ್ಮಿಸಲು ಸಾಧ್ಯ – ಶಂಶೀರ್ ಬುಡೋಳಿಸಕಲೇಶಪುರ: ಮೇ ೭ : ಬಾಬಾ ಸಾಹೇಬ್ ಅಂಬೇಡ್ಕರ್ ಕಂಡ ಕನಸಿನ ಭಾರತವನ್ನು ನಿರ್ಮಿ ಸಲು ಸರ್ವರಿಗೂ ಕಡ್ಡಾಯ ಶಿಕ್ಷಣ ನೀಡುವುದರ ಮೂಲಕ ಮಾತ್ರ ಸಾಧ್ಯ ಎಂದು ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆಯ ಉಪ ಸಂಪಾದಕ ಶಂಶೀರ್ ಬುಡೋಳಿ ಹೇಳಿದರು.
ಸಕಲೇಶಪುರ ನಗರದ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ಆಝಾದ್ ಯುವಕ ಸಂಘ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಶಾಲಾ ವಿದ್ಯಾರ್ಥಿ ಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತಿದ್ದ ಅವರು ಜಾತಿ ವ್ಯವಸ್ಥೆಯಲ್ಲಿ ಸಿಕ್ಕು ನಲುಗಿ ಹೋಗಿದ್ದ ಸ್ವಾತಂತ್ರ್ಯಾ ಪೂರ್ವ ಭಾರತದಲ್ಲಿ ಅಂಬೇಡ್ಕರ್ ಒಬ್ಬ ಸಮಾನತೆಯ ಹರಿಕಾರರಾಗಿ ಜನ್ಮ ತಾಳಿದರು. ಅವರು ಶೋಷಿತರ ಪರವಾಗಿ ನಡೆಸಿದ ಅವಿರತ ಹೋರಾಟದ ಫಲವಾಗಿ ಇಂದು ಭಾರತದಲ್ಲಿ ಶೋಷಿತರು ಮತ್ತು ದಮನಿತರು ಹಾಗೂ ಅಲ್ಪಸಂಖ್ಯಾತರು ಸಮಾನತೆಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಧೀಮಾನ್ ಎಸ್.ಎನ್. ಮಲ್ಲಪ್ಪ ಅಂಬೇಡ್ಕರ್ ಕೇವಲ ದಲಿತ ಸಮುದಾಯದ ನಾಯಕರಾಗಿರದೆ ರಾಷ್ಟ್ರದ ನಾಯಕರಾಗಿದ್ದಾರೆ. ಅವರು ನೀಡಿದ ಸಂವಿಧಾನದ ಕಾರಣ ಇಂದು ಭಾರತದಲ್ಲಿ ಪುರೋಹಿತಶಾಹಿ ವ್ಯವಸ್ಥೆ ನಿರ್ನಾಮವಾಗಲು ಸಾಧ್ಯವಾಯಿತು.
ಇಂತಹ ರಾಷ್ಟ್ರ ನಾಯಕನ ಜನ್ಮ ದಿನಾಚರಣೆಯನ್ನು ಕೇವಲ ಸರ್ಕಾರ ಮತ್ತು ದಲಿತರು ಆಚರಿ ಸದೆ ಎಲ್ಲಾ ಸಮುದಾಯದ ಜನರು ಆಚರಿಸುವಂತಾಗಬೆಕೆಂದು ಹೇಳಿದರು. ಈ ನಿಟ್ಟಿನಲ್ಲಿ ಆಝಾದ್ ಯುವಕ ಸಂಘ ಹಮ್ಮಿಕೊಂಡ ಅಂಬೇಡ್ಕರ್ ಜನ್ಮದಿನಾಚರಣೆ ಮತ್ತು ಉಚಿತ ಶಾಲಾ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು ಇಂತಹ ಸಮಾಜಸೇವಾ ಕಾರ್ಯಕ್ರಮಗಳು ಇನ್ನು ಮಂದೆಯೂ ನಡೆಯಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಹಝರತ್ ಮಹಬೂಬ್ ಸುಭಾನಿ ನೂರಾನೀ ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಎಸ್.ಎಂ. ಮಹಮ್ಮದ್ (ಚೈಬಾವು) ರವರನ್ನು ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತರಾದ ಸಕಲೇಶಪುರ ನಗರ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಶ್ರೀ ದೀಪಕ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಪಿ. ಕಾಂತ್‌ರಾಜ್, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘಟಕದ ಅಧ್ಯಕ್ಷರಾದ ಡಿ.ಸಿ.ಸಣ್ಣಸ್ವಾಮಿ, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಡಿ.ಹೆಚ್.ಆದಂ, ವಿಶ್ವ ಕನ್ನಡಿಗರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾದ ಅಶ್ರಫ್ ಮಂಜ್ರಾಬಾದ್,ಬರಹಗಾರ ಅಕ್ಬರ್ ಜುನೈದ್, ಎ.ಪಿ.ಎಂ.ಸಿ.ಮಾಜಿ ನಿರ್ದೇಶಕ ಸಲೀಂ ಅಬ್ದುಲ್ಲಾ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಬೂಬ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಂದಿಕೃಪ ರಾಜು, ಸರಳ ಸಾಮೂಹಿಕ ವಿವಾಹ ಸಮಿತಿಯ ಅಧ್ಯಕ್ಷ ಕೊಲ್ಲಹಳ್ಳಿ ಇಬ್ರಾಹಿಂ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದರು. ಅಝಾದ್ ಯುವಕ ಸಂಘದ ಅಧ್ಯಕ್ಷ ಕಶ್ವ ಸುಲೈಮಾನ್ ಕಾರ್ಯ‍ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜನಾಬ್ ಸುಲೈಮಾನ್ ಕುಡುಗರಹಳ್ಳಿ ಸ್ವಾಗತಿಸಿದರೆ ಜನಾಬ್ ನಿಝಾರ್ ಮಂಜ್ರಾಬಾದ್ ಧನ್ಯವಾದ ಸಮರ್ಪಿಸಿದರು. ಜನಾಬ್ ತಸೀಫ್ ಕಾರ್ಯಕ್ರಮ ನಿರೂಪಿಸಿದರು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: