ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?


ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?

ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ  ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು!                                     ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ  ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು,  ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು  ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ!             ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ  ಸೂರ್ಯಸ್ಪಷ್ಟ. ರಾಜಕೀಯದ್ದು!            ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ  ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!)       ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ  ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ.  ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ.             ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು  ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ!               ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು.           ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ  ರಂಗನಾಥ ಮಿಶ್ರ  ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು   ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು?                    ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು.  ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ  ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ  ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ.        ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು  ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ.

:ರಘೋತ್ತಮ ಹೊ. ಬ

ಚಾನಮರಾಜನಗರ

ಮೊ; 9481189116

Advertisements

2 Responses to ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?

  1. Babu C M says:

    Really good,please make aware of all these things to our ppl especially in south region….our ppl still believes in congress eventhough they have got nothing from cong party right from the beginning….
    We should guide our ppl in the right way to get rule from cong…

    • babu very nice your comment is inspiring one . i will spend my whole life in spreading babasahebs ideology and i will make my best effort to serve my ppl the real history and the real taste of ambedkarism thanks once again babu cm. raghothama ho. ba chamarajanagar. raghothama16hb@gmail.com

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: