ಕಾಶ್ಮೀರ ಸಮಸ್ಯೆ: ಅಂಬೇಡ್ಕರ್ ಮಾರ್ಗದಲ್ಲಿದೆ ಪರಿಹಾರ


ಭಾರತದ ಭೂಪಟದಲ್ಲಿ ಕಾಶ್ಮೀರ ಹೇಗೆ ಕಾಣುತ್ತದೆ ? ಉತ್ತರ ಸ್ಪಷ್ಟ. ಮಕುಟದ ಹಾಗೆ .ಆದರೆ ಆ ಮಕುಟ ಒರಿಜಿನಲ್ಲಾಗಿ ಹಾಗೆಯೇ ಇದೆಯೇ? ಖಂಡಿತ ಇಲ್ಲ. ಹಾಗೆ ಇರುವಹಾಗೆ ತೋರಿಸಲಾಗುತ್ತಿದೆ! ಹಾಗಿದ್ದರೆ ವಾಸ್ತವವಾಗಿ ಆ ಮಕುಟ  ಹೇಗಿದೆ? ಒಂದು ಭಾಗ ಪಾಕ್ ಆಕ್ರಮಿತ ಕಾಶ್ಮೀರದ ರೂಪದಲ್ಲಿ ಪಾಕಿಸ್ತಾನಕ್ಕೆ ಸೇರಿದೆ . ಮತ್ತೊಂದು ಭಾಗ ಅಕ್ಸಾಯ್ ಚಿನ್ ರೂಪದಲ್ಲಿ ಚೀನಾಕ್ಕೆ ಸೇರಿದೆ. ಉಳಿದ ಒಂದು ಭಾಗ ಮಾತ್ರ ಜಮ್ಮು ಕಾಶ್ಮೀರ ರೂಪದಲ್ಲಿ ಭಾರತದ ಜೊತೆ ಇದೆ .
ಛೆ!  ಇದೆಂತಹ ಅಪಮಾನ? ಕಾಶ್ಮೀರದ ಉಳಿದೆರಡು ಭಾಗಗಳನ್ನು ಪಾಕ್ ಮತ್ತು ಚೀನಾಕ್ಕೆ ನಾವು ಕಳೆದುಕೊಂಡಿದ್ದೇವೆಯೇ? ಖಂಡಿತ ಇಲ್ಲ. ಏಕೆಂದರೆ ವಾಸ್ತವವಾಗಿ ಕಾಶ್ಮೀರ ನಮ್ಮದಲ್ಲವೇ ಅಲ್ಲವಲ್ಲ! ಹೇಗೆ ಹಿಂದೂ ದೇಶವಾಗಿದ್ದರೂ ನೇಪಾಳ ನಮ್ಮದಲ್ಲವೋ, ಬೌದ್ಧ ದೇಶವಾಗಿದ್ದರೂ ಭೂತಾನ ನಮ್ಮದಲ್ಲವೋ,  ಹಾಗೆ ಕಾಶ್ಮೀರ ಕೂಡ ನಮ್ಮದಲ್ಲ .(ಹಾಗಂತ ಅದು ಪಾಕಿಸ್ತಾನದ್ದೂ ಕೂಡ ಅಲ್ಲ!) ಭಾರತ ಪಾಕಿಸ್ತಾನ ವಿಭಜನೆಯ ಬಿರುಗಾಳಿಗೆ ಸಿಕ್ಕಿ ಕಾಶ್ಮೀರ ವೆಂಬ ಸ್ವತಂತ್ರ ಪ್ರಾಂತ್ಯ ಮತ್ತದರ ಒಂದು ಭಾಗ ನಮ್ಮ ದೇಶಕ್ಕೆ ಸೇರಿದೆಯಷ್ಟೆ. ಒಂದರ್ಥದಲಿ ನಮ್ಮ ದೇಶವನ್ನು ಸುಡುತ್ತಿದೆ ಬೆಂಕಿಯ ಕೆಂಡದ ಹಾಗೆ,. ಅತ್ತ ನುಂಗಲೂ ಆಗದೆ ಇತ್ತ ಉಗುಳಲೂ ಆಗದೆ.
ಹಾಗಿದ್ದರೆ ಇಂತಹ ವಿಕ್ಷಿಪ್ತ ಕಾಶ್ಮೀರದ ಇತಿಹಾಸವಾದರೂ ಏನು? ಸಂಕ್ಷಿಪ್ತವಾಗಿ ಹೇಳುವುದಾದರೆ ಭಾರತ ಆಗಸ್ಟ್ 15, 1947 ರಂದು ಸ್ವತಂತ್ರವಾದಾಗ ಕಾಶ್ಮೀರ ಭಾರತದ ಭಾಗವಾಗಿಯೇ ಇರಲಿಲ್ಲ.! ಏಕೆಂದರೆ ಮೊದಲೆ ಹೇಳಿದ ಹಾಗೆ ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡದ ಅದು ಸ್ವತಂತ್ರ ಪ್ರಾಂತ್ಯವಾಗಿತ್ತು. ಆಗ ಮಹಾರಾಜ ಹರಿಸಿಂಗ್ ಕಾಶ್ಮೀರದ ರಾಜನಾಗಿದ್ದ , ರಾಮಚಂದ್ರ ಕಕ್ ಎನ್ನುವವರು ಪ್ರಧಾನಿ ಕೂಡ ಆಗಿದ್ದರು.  ಜುಲೈ 3 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಇಂಗಿತ ವ್ಯಕ್ತಪಡಿಸಿದ ಲಾಡರ್್ ಮೌಂಟ್ ಬ್ಯಾಟನ್ ತಕ್ಷಣ ಬ್ರಿಟಿಷ್ ಸಕರ್ಾರದ ಭಾಗವಾಗಿಲ್ಲದ ಕಾಶ್ಮೀರಕ್ಕೆ ಭೇಟಿ ನೀಡಿದರು . ಅಲ್ಲಿಯ ರಾಜನ ಜೊತೆ  ಮಾತನಾಡಿದ ಮೌಂಟ್ ಬ್ಯಾಟನ್  ಬ್ರಿಟಿಷ್  ಸಕರ್ಾರ ಕಾಶ್ಮೀರವನ್ನು ತನ್ನ ಚಕ್ರಾಧಿಪ್ಯಪತ್ಯದ ಒಂದು ಭಾಗವೆಂದು ಪರಿಗಣಿಸಿಲ್ಲ . ಆದ್ದರಿಂದ ನೀವು ಆಗಸ್ಟ್ 15 ರ ಒಳಗೆ  ಭಾರತವಾದರೂ ಸರಿ , ಇಲ್ಲ ಪಾಕಿಸ್ತಾನವಾದರೂ ಸರಿ , ನಿಮಗೆ ಯಾರು ಬೇಕೊ ಅವರ ಜೊತೆ ಸೇರಬಹುದು ಎಂದು ತಿಳಿಸಿದರು. ಆದರೆ ರಾಜ ಹರಿಸಿಂಗ್ ಆಗಸ್ಟ್ 15  ರೊಳಗೆ ತಮ್ಮ ನಿಧರ್ಾರವನ್ನು ತಿಳಿಸಲಿಲ್ಲ,. ಬದಲಿಗೆ ಭಾರತ ಮತ್ತು  ಪಾಕಿಸ್ತಾನಗಳೆರಡರಿಂದಲೂ ದೂರ ಉಳಿವ  ಯಥಾಸ್ಥಿತಿ ಕಾಪಾಡಿ ಕೊಳ್ಳುವ  ನಿಧರ್ಾರ ಕೈಗೊಂಡರು.  ಈ ಕಾರಣದಿಂದಾಗಿ ಆಗಸ್ಟ್ 14 ರಂದು ದೇಶ ವಿಭಜನೆಯಾದಾಗ  ಕಾಶ್ಮೀರ ಅತ್ತ ಪಾಕಿಸ್ತಾನಕ್ಕೂ  ಸೇರಲಿಲ್ಲ, ಇತ್ತ ಭಾರತಕ್ಕು ಸೇರಲಿಲ್ಲ . ಒಂದರ್ಥದಲಿ ಭಾರತ ಕಾಶ್ಮೀರ ರಹಿತವಾಗಿ ಸ್ವತಂತ್ರವಾಯಿತು. ( ಬಹುಶಃ ಹಾಗೇ ಇದ್ದರೆ ಸೂಕ್ತವಿತ್ತೇನೋ) ಇತ್ತ ನಮ್ಮದೂ ಅಲ್ಲದ ಅತ್ತ ಪಾಕಿಸ್ತಾನದ್ದೂ ಅಲ್ಲದ ಕಾಶ್ಮೀರ ತನ್ನ ಪಾಡಿಗೆ ತಾನು ಇರುವ ಯಥಾಸ್ಥಿತಿ ವಾದಕ್ಕೆ ಅಂಟಿಕೊಂಡಿತು.
ಕಾಶ್ಮೀರದ ಈ ನಿಲುವಿನ ವಿರುದ್ಧ  ತಿರುಗಿಬಿದ್ದ ಪಾಕಿಸ್ತಾನ ಅದರ ಮೇಲೆ ಒತ್ತಡ ಹೇರಲು ತನ್ನ ಮಾರ್ಗದ ಮೂಲಕ ಆಗುತ್ತಿದ್ದ ಆಹಾರ, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಸರಬರಾಜನ್ನು ತಕ್ಷಣ ನಿಲ್ಲಿಸಿತು.  ಸಿಯಾಲ್ಕೋಟ್ನಿಂದ ಜಮ್ಮುವರೆಗೆ ರೈಲ್ವೆ ಸೇವೆಯನ್ನು ಸಹಾ ನಿಲ್ಲಿಸಿತು. ಪಾಕಿಸ್ತಾನದ ಈ ಕ್ರಮದ ವಿರುದ್ಧ ಅಕ್ಟೋಬರ್  15, 1947 ರಂದು  ಕಾಶ್ಮೀರದ  ಅಂದಿನ ಪ್ರಧಾನಿಯಾಗಿದ್ದ ಎಂ. ಸಿ. ಮಹಾಜನ್ರವರು ( ನೆನಪಿರಲಿ ಭಾರತದ ಅಂದಿನ ಪ್ರಧಾನಿ ನೆಹರು ) ಬ್ರಿಟಿಷ್ ಪ್ರಧಾನಿಗೆ ದೂರಿತ್ತರು. ತಕ್ಷಣ ಬ್ರಿಟಿಷ್ ಪ್ರಧಾನಿಯವರು ಪಾಕ್ ಪ್ರಧಾನಿಗಳಿಗೆ ಕಾಶ್ಮೀರದ ಜೊತೆ ಸುಲಲಿತವಾಗಿ ವ್ಯವಹರಿಸುವಂತೆ  ಹಾಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಂತೆ ಸೂಚಿಸಿತು.
ಅಂದಹಾಗೆ  ಸಮಸ್ಯೆ ಇಲ್ಲಿಗೇ ಮುಕ್ತಾಯವಾಗಿದ್ದರೆ ಬಹುಶಃ ಕಾಶ್ಮೀರ ಎಂಬ ಸಮಸ್ಯೆ ಪಾಕ್ ಮತ್ತು ಭಾರತವನ್ನು ಕಾಡುತ್ತಲೇ ಇರಲಿಲ್ಲ. ಕಾಶ್ಮೀರ ಸ್ವತಂತ್ರ ರಾಷ್ಟ್ರವೆಂದು ಎರಡು ದೇಶಗಳು ಒಪ್ಪಿಕೊಂಡಿದ್ದರೆ , ಹಾಗೆ ಮನ್ನಣೆ ನೀಡಿದ್ದರೆ  ಎರಡೂ ರಾಷ್ಟ್ರಗಳೂ ಮುಂದಿನ ಹಲವಾರು ವರ್ಷಗಳವರೆಗೆ ( ಬಹುಶಃ ಶತಮಾನಗಳವರೆಗೆ !) ನೆಮ್ಮದಿಯಿಂದ ಇರುತ್ತಿದ್ದವೋ ಏನೋ? ಆದರೆ ತನ್ನ ಜೊತೆ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದ ಪ್ರತಿಯೊಂದಕ್ಕೂ ತನ್ನನ್ನೇ ಅವಲಂಬಿಸಿದ್ದ ( ರ್ಯಾಡ್ ಕ್ಲಿಫ್ ಒಪ್ಪಂದ ಬರುವವರೆಗೆ ಭಾರತ ಮತ್ತು ಕಾಶ್ಮೀರದ ನಡುವೆ ರಸ್ತೆ ಸಂಪರ್ಕವೇ ಇರಲಿಲ್ಲ!) ಅಷ್ಟೇನು ಮಿಲಿಟರಿಯಲ್ಲಿ ಬಲಿಷ್ಟವಲ್ಲದ ಭೂಬಾಗವೊಂದನ್ನು ಯಾವ ದೇಶ ತಾನೆ ಹಾಗೆ ಇರಲು ಬಿಡುತ್ತದೆ ? ಸರಳವಾಗಿ ಹೇಳುವುದಾದರೆ ಆಕ್ರಮಣ ಮಾಡುತ್ತದೆ. ಅಂತಹ ಆಕ್ರಮಣದ ಉಪಕ್ರಮ ಪ್ರಾರಂಭವಾದದ್ದು ಅಕ್ಟೋಬರ್  22, 1947 ರಂದು. (ಜ್ಞಾಪಕವಿರಲಿ ಪಾಕಿಸ್ತಾನ ಆಕ್ರಮಿಸಿದ್ದು ನಮ್ಮ ದೇಶವನ್ನಲ್ಲ , ಅಥವಾ ನಮ್ಮ ದೇಶದ  ಒಂದು ಭಾಗವನ್ನಂತೂ ಅಲ್ಲವೇ ಅಲ್ಲ!) ಅಂದಹಾಗೆ ಪಾಕಿಸ್ತಾನದ ಅಂತಹ ಆಕ್ರಮಣಕ್ಕೆ ಉತ್ತರ ಹೇಳಬೇಕಾದ್ದು ಕಾಶ್ಮೀರದ ಅಂದಿನ ಜವಾಬ್ದಾರಿಯುತ ಸಕರ್ಾರದ್ದಾಗಿತ್ತು. ಅದು  ಮಹಾರಾಜರದ್ದಾಗಿರಬಹುದು ಅಥವಾ ಪ್ರಜಾಪ್ರಭುತ್ವದ್ದಾಗಿರಬಹುದು. ಆ ಸಕರ್ಾರ ಪಾಕಿಸ್ತಾನಕ್ಕೆ  ಸೇನಾ  ಹೋರಾಟದ ರೂಪದಲ್ಲಿ ಸ್ಪಷ್ಟ ಉತ್ತರ ನೀಡಬೇಕಿತ್ತು.
ಆದರೆ ಕಾಶ್ಮೀರದ ಅಂದಿನ ಸಕರ್ಾರ ಮಾಡಿದ ಕೆಲಸವೇನೆಂದರೆ  (ಅಥವಾ ತಪ್ಪೆಂದರೆ) ಸಹಾಯಕ್ಕಾಗಿ ತನ್ನ ನೆರೆಯ ರಾಷ್ಟ್ರ ಭಾರತವನ್ನು ಕೇಳಿದ್ದು,. ಭಾರತವೂ ಕೂಡ ಕಾಶ್ಮೀರದ ದೌರ್ಬಲ್ಯವನ್ನು ತಿಳಿದಿತ್ತಲ್ಲವೇ? ನಾವೂ ಒಂದು ಕೈ ನೋಡೇ ಬಿಡುವ ಎಂದೆನಿಸಿರಬೇಕಲ್ಲವೇ ? ತಕ್ಷಣ ಭಾರತ ಸಹಾಯ ಹಸ್ತ ಚಾಚಿತು . ಅಂತಿಮಾವಾಗಿ ಕಾಶ್ಮೀರವೆಂಬ ಬಿಸಿತುಪ್ಪ ಅಕ್ಟೋಬರ್ 26, 1947 ರಂದು ಭಾರತದ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು.
ಇದಿಷ್ಟು ಭಾರತದ ಮಕುಟವಾಗಿ ಪರಿವರ್ತನೆಗೊಂಡ ವಿಕ್ಷಿಪ್ತ ಕಾಶ್ಮೀರದ ಸಂಕ್ಷಿಪ್ತ ಇತಿಹಾಸ.
ಪ್ರಶ್ನೆಯೇನೆಂದರೆ ಸ್ವಾತಂತ್ರ್ಯ ಬಂದು ಆಗ ತಾನೆ ಕೆಲವೇ ದಿನಗಳಾಗಿರುವಾಗ , ಸಮಸ್ಯೆಗಳು ಕಿತ್ತು ತಿನ್ನುತ್ತಿರುವಾಗ  ಆಗಿನ ನಮ್ಮ ನಾಯಕರುಗಳಿಗೆ ಕಾಶ್ಮೀರದ ಉಸಾಬರಿಯಾದರೂ ಯಾಕೆ ಬೇಕಿತ್ತು? ಎಂಬುದು,. ಇದಕ್ಕೇ ಇರಬೇಕು ತಮ್ಮ  ನಾನೇಕೆ ಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು ಎಂಬ ತಮ್ಮ ಕೃತಿಯಲ್ಲಿ ಡಾ. ಅಂಬೇಡ್ಕರ್ ರವರು  ನೆಹರೂರವರು ಭಾರತದ ಬಾಲಕ್ಕೆ  ಕಾಶ್ಮೀರವೆಂಬ ಬೆಂಕಿಯನ್ನು ಹಚ್ಚಿದರು  ಎಂದಿರುವುದು.
ಇದು ಅಕ್ಷರಶಃ ನಿಜ. ಏಕೆಂದರೆ ಇಂದು ಮೂಲತಃ ನಮ್ಮದಲ್ಲದ ಹಾಗೆ ಪಾಕಿಸ್ತಾನದ್ದೂ ಅಲ್ಲದ ಕಾಶ್ಮೀರ ಮತ್ತದರ ಸಮಸ್ಯೆಗಳು ದೇಶವನ್ನು ಕಿತ್ತುತಿನ್ನುತ್ತಿವೆ. ನಮ್ಮ ವಿದೇಶಾಂಗ ವ್ಯವಹಾರದ ಬಹುತೇಕ ಸಮಯ ಕಾಶ್ಮೀರದ ಬಗ್ಗೆ ನಮ್ಮ ನಿಲುವನ್ನು ವಿದೇಶಿಯರಿಗೆ ತಿಳಿಸುವುದರಲ್ಲಿಯೇ ಕಳೆದು ಹೋಗುತ್ತಿದೆ. ವಿದೇಶಿಯರಿಗೆ ಭಾರತ ಎಂದಾಕ್ಷಣ ಅದರ ಪ್ರಮುಖ ಸಮಸ್ಯೆ ಕಾಶ್ಮೀರ ಎಂಬಂತಾಗಿದೆ. ಇದು ಹೇಗೆ ಅಂದರೆ 1951 ರಲ್ಲೇ ನಮ್ಮ ರಕ್ಷಣಾ ಬಜೆಟ್ಟಿನ 350 ಕೋಟಿ ರೂಗಳಲ್ಲಿ 180 ಕೋಟಿ ರೂ ಗಳನ್ನು ಕಾಶ್ಮೀರವೇ ತಿಂದುಹಾಕಿದೆ. ಈಗಂತೂ 1 ಲಕ್ಷ 60 ಸಾವಿರ ಕೋಟಿ ರಕ್ಷಣಾ ಬಜೆಟ್ಟಿನಲ್ಲಿ 1 ಲಕ್ಷ ಕೋಟಿಯನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾಶ್ಮೀರ ಸಮಸ್ಯೆ ನುಂಗಿಹಾಕುತ್ತಿದೆ.! ಇತ್ತೀಚೆಗೆ ಲೋಕಸಭೆಯಲ್ಲಿ ಸ್ವತಃ ಹಿರಿಯ ನಾಯಕರೊಬ್ಬರು ಹೇಳಿರುವ ಹಾಗೆ  ದೇಶದ ಶೇ 1 ರಷ್ಟು ಇಲ್ಲದ ಕಾಶ್ಮೀರದ ಜನ ಶೇ 11 ರಷ್ಟು ದೇಶದ ಬಜೆಟ್ಟನ್ನು ತಿಂದುಹಾಕುತ್ತಿದ್ದಾರೆ!
ಅಂದಹಾಗೆ ಇದು ಇಂದಿನ ಸಮಸ್ಯೆಯಲ್ಲ .63 ವರ್ಷಗಳಿಂದಲೂ ಇದೇ ಸಮಸ್ಯೆ. ಮುಂದೆ ಇನ್ನೆಷ್ಟು ವರ್ಷಗಳು ಈ ಸಮಸ್ಯೆ ಹಾಗೇ ಇರುತ್ತದೆಯೋ , ಈ ದೇಶದ ತೆರಿಗೆ ಹಣವನ್ನು ಹಾಗೆಯೇ  ತಿನ್ನುತ್ತಿರುತ್ತದೆಯೋ ಆ ದೇವರೆ ಬಲ್ಲ!
ಒಟ್ಟಿನಲಿ ಎತ್ತೆತ್ತಲೋ ಇದ್ದ ಕಾಶ್ಮೀರದ ಸಮಸ್ಯೆ ಸುತ್ತಿಸುತ್ತಿ ಸುಳಿದು ಭಾರತವನ್ನು ಸುತ್ತಿಕೊಂಡಿದೆ. ಅದು ನಮ್ಮ ಕುತ್ತಿಗೆಗೆ ಸುತ್ತಿಕೊಂಡಿರುವ ಸತ್ಯ ತಿಳಿಯದೇ ನಾವು ಅದನ್ನು ನಮ್ಮ  ಮಕುಟ ಎನ್ನುತ್ತಿದ್ದೇವೆ!
ಅದಕ್ಕೇ ಮೊದಲು ನಾವು ಕಾಶ್ಮೀರ ಎಂಬ ಆ ಸಮಸ್ಯೆಗೆ ಶಾಶ್ವತ, ದಕ್ಷ ಮತ್ತು ಧೃಡ ಪರಿಹಾರ ಕಂಡುಕೊಳ್ಳುವ ನಿಟ್ಟಿನಲಿ ಯೋಚಿಸಬೇಕಿದೆ. ಆ ದಿಕ್ಕಿನಲಿ ಹೆಜ್ಜೆ ಇಡಬೇಕಿದೆ .
ಹೆಜ್ಜೆ ಇಡಬೇಕು ಎಂದಾಕ್ಷಾಣ ಆ ಹೆಜ್ಜೆಎತ್ತ ಇಡಬೇಕು ಎಂದು ಸೂಚಿಸದಿದ್ದರೆ ತಪ್ಪಾಗುತ್ತದೆಯಲ್ಲವೇ? ಖಂಡಿತ ಈ ನಿಟ್ಟಿನಲಿ ಕಾಶ್ಮೀರದ  ಸಮಸ್ಯೆಗೆ ಪರಿಹಾರವಿರುವುದು ಅಂಬೇಡ್ಕರ್ ಮಾರ್ಗದಲ್ಲಿ. ಏಕೆಂದರೆ ಕೇಂದ್ರದ ಪ್ರಥಮ ಕಾನೂನು ಮಂತ್ರಿಗಳಾಗಿದ್ದ ಅಂಬೇಡ್ಕರ್ರವರು 1951 ಅಕ್ಟೋಬರ್ 10 ರಂದು ಕ್ಯಾಬಿನೆಟ್ನಲ್ಲಿ ಕಾಶ್ಮೀರ ಸಮಸ್ಯೆ ಕುರಿತು ಮಾತನಾಡುತ್ತಾ  ಹಿಂದೂಗಳು ಬಹುಸಂಖ್ಯಾತರಾಗಿರುವ ಜಮ್ಮು ಪ್ರದೇಶ ಮತ್ತು ಬೌದ್ಧರು ಬಹುಸಂಖ್ಯಾತರಾಗಿರುವ ಲಡಾಕ್ ಪ್ರದೇಶಗಳನ್ನು ಕಾಶ್ಮೀರದಿಂದ ಪ್ರತ್ಯೇಕಗೊಳಿಸಿ ಭಾರತಕ್ಕೆ ಸೇರಿಸಬೇಕು ಹಾಗೆಯೇ ಮುಸ್ಲಿಮ್ ಬಾಹುಳ್ಯವುಳ್ಳ ಕಾಶ್ಮೀರ ಕಣಿವೆಗೆ ಸ್ವತಂತ್ರ ಸ್ಥಾನಮಾನ ನೀಡಿ , ಅಲ್ಲಿಯ ಜನತೆಗೆ ನಿಧರ್ಾರ ತೆಗೆದುಕೊಳ್ಳುವ (ಸ್ವತಂತ್ರವಾಗಿ ಉಳಿಯುವ ಅಥವಾ ಪಾಕ್ ಜೊತೆ ಸೇರುವ ) ಹಕ್ಕು ನೀಡ ಬೇಕು. ಎನ್ನುತ್ತಾರೆ. ತನ್ಮೂಲಕ ಸಮಸ್ಯೆಗೆ ಸರಳ ಮತ್ತು ಜಾರಿಗೊಳಿಸಬಹುದಾದ ಶಾಶ್ವತ ಪರಿಹಾರ ಸೂಚಿಸುತ್ತಾರೆ.
ನಿಷ್ಪಕ್ಷಪಾತವಾಗಿ ಹೇಳುವುದಾದರೆ, ಈ ದೇಶದ  ಸಂವಿಧಾನ ಶಿಲ್ಪಿಯಾಗಿ ,ಓರ್ವ ಬ್ಯಾರಿಸ್ಟರರಾಗಿ ಅಂಬೇಡ್ಕರರು ಸೂಚಿಸಿದ ಆ ಪರಿಹಾರ ಕೇವಲ ಪರಿಹಾರದಂತಿರಲಿಲ್ಲ. ಬದಲಾಗಿ ಹಿರಿಯ ನ್ಯಾಯಾಧೀಶರೊಬ್ಬರು ನೀಡಿದ ತೀಪರ್ಿನಂತಿತ್ತು. ದುರಂತವೆಂದರೆ ಅಂಬೇಡ್ಕರ್ರವರ ಆ ತೀರ್ಪನ್ನುಆಗಿನ ನೆಹರೂರವರ ಸಕರ್ಾರ  ಒಪ್ಪಿಕೊಳ್ಳುವ ಮನಸ್ಸು ಮಾಡಲಿಲ್ಲ.  ಕಾಕತಾಳೀಯವೆಂದರೆ ನಂತರದ ಸಕರ್ಾರಗಳೂ ಕೂಡ ಅದರ ಕಡೆ ಗಮನಹರಿಸಲು ಹೋಗಿಲ್ಲ! ಆಶ್ಚರ್ಯಕರವೆಂದರೆ ಅಂಬೇಡ್ಕರ್ರವರು ಸೂಚಿಸಿರುವ ಆ ಮಧ್ಯಮ ಮಾರ್ಗದ ಹೊರತು  ಪ್ಯಾಕೇಜು, ಸ್ವಾಯತ್ತತೆ ಗಳೆಂಬ ಸೌಮ್ಯ ರೂಪದ ಅಥವಾ ಸೇನಾಕಾಯರ್ಾಚರಣೆ, ಯುದ್ಧಗಳೆಂಬ ಉಗ್ರರೂಪದ ವಿಧಾನಗಳ್ಯಾವುವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಂತೆ ಕಾಣುತ್ತಿಲ್ಲ.
ಕಾಲ ಈಗಲೂ ಮಿಂಚಿಲ್ಲ. ಆಳುವ ಸಕರ್ಾರಗಳು ತಡವಾಗಿಯಾದರೂ ಎಚ್ಚತ್ತುಕೊಂಡು ಅಂಬೇಡ್ಕರ್ರವರು ನೀಡಿರುವ ಆ ತೀರ್ಪನ್ನು ಜಾರಿಗೊಳಿಸಿದರೆ ಒಳಿತು. ಇಲ್ಲದಿದ್ದರೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತದೆ. ಹಾಗೆಯೇ ಕಾಶ್ಮೀರ ಪ್ರಕ್ಷುಬ್ಧವೆಂಬ ಆ ನಿರಂತರ ಹೆಡ್ ಲೈನೂ ಕೂಡ….
ರಘೋತ್ತಮ ಹೊ. ಬ
ಚಾಮರಾಜನಗರ-571313
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: