ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಂಭ್ರಮ.ಜಿಲ್ಲಾಡಳಿತ, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲೆಲ್ಲೂ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಪುರಭವನ ಹಾಗೂ ಅಶೋಕಪುರಂ ಉದ್ಯಾನದ ಅಂಬೇಡ್ಕರ್ ಪ್ರತಿಮೆಗೆ ಜನತೆ ಸಾಲುಗಟ್ಟಿ ನಿಂತು ಮಾಲಾರ್ಪಣೆ ಮಾಡಿದರು. ಕೆಲವು ಬಡಾವಣೆಗಳಲ್ಲಿ ಹಬ್ಬದ ವಾತಾವರಣವಿದ್ದರೆ, ಇನ್ನು ಹಲವೆಡೆ ವಿಚಾರಸಂಕಿರಣಗಳು ನಡೆದವು.
ಜಿಲ್ಲಾಡಳಿತದ ಪರವಾಗಿ ಮೇಯರ್ ಪುರುಷೋತ್ತಮ್, ಜಿ.ಪಂ. ಅಧ್ಯಕ್ಷ ಧರ್ಮೇಂದ್ರ, ಸಂಸದರಾದ ಎಚ್.ವಿಶ್ವನಾಥ್, ಧ್ರುವನಾರಾಯಣ್, ಶಾಸಕರಾದ ವಿ.ಶ್ರೀನಿವಾಸಪ್ರಸಾದ್, ತನ್ವೀರ್ಸೇಠ್, ಸತ್ಯನಾರಾಯಣ್, ಸಂದೇಶ್ ನಾಗರಾಜ್, ಪ್ರಾದೇಶಿಕ ಆಯುಕ್ತೆ ಜಯಂತಿ, ಉಪ ಮೇಯರ್ ಶಾರದಮ್ಮ ಮತ್ತಿತರರು ಹಾಜರಿದ್ದು ನಮನ ಸಲ್ಲಿಸಿದರು.
ಮಿನಿ ದಸರಾ
ಅಶೋಕಪುರಂನಲ್ಲಿ ನಡೆದ ಜಯಂತಿ ಜಾಥಾ ಮಿನಿ ದಸರಾದಂತಿತ್ತು. ಜನಪದ ಕಲಾ ತಂಡಗಳ ಕಲಾ ಪ್ರದರ್ಷನದ ಮುಂದಾಳತ್ವದಲ್ಲಿ ಬುದ್ಧ-ಅಂಬೇಡ್ಕರ್ ಭಾವಚಿತ್ರ, ಪ್ರತಿಮೆಗಳ ಮೆರವಣಿಗೆಯಲ್ಲಿ ಸ್ಥಳೀಯರು ಭಾಗವಹಿಸಿದ್ದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿ ನಗರ ನಾಗರಿಕರ ಹಿತ ರಕ್ಷಣಾ ಸಮಿತಿ ವತಿಯಿಂದ ಗಾಂಧಿ ನಗರದಲ್ಲಿ ಸಂಜೆ ನಡೆದ ಮೆರವಣಿಗೆ ಅದ್ಧೂರಿಯಾಗಿತ್ತು. ಸಂಜೆ ಸುರಿದ ಮಳೆ ಕೂಡಾ ಸಡಗರಕ್ಕೆ ಯಾವುದೇ ಅಡಚಣೆ ಮಾಡಲಿಲ್ಲ. ಜಿಲ್ಲಾಧಿಕಾರಿ ಮಣಿವಣ್ಣನ್

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: