ಪೇಜಾವರರಿಗೆ ಉತ್ತರ ಬುದ್ದನಲಿದೆ.


ಕಳೆದ ಒಂದು ತಿಂಗಳಿನಿಂದ ಮೈಸೂರು ಭಾಗದಲ್ಲಿ , ವಿಶೇಷವಾಗಿ ದಲಿತರಲ್ಲಿ ಆತಂಕ ಮನೆ ಮಾಡಿದೆ. ನೆಮ್ಮದಿಗೆ ಕಲ್ಲು ಬಿದ್ದಿದೆ. ಅಂದ ಹಾಗೆ ಈ ಆತಂಕಕ್ಕೆ ,ನೆಮ್ಮದಿ ಭಂಗಕ್ಕೆ ಕಾರಣವಾಗಿರುವುದು ಯಾವುದೋ ನೈಸಗರ್ಿಕ ವಿಕೋಪವಾಗಲಿ, ಡೆಂಗ್ಯೂ, ಚಿಕನ್ಗುನ್ಯದಂತಹ ಮಹಾ ಮಾರಿಯಾಗಲಿ ಅಲ್ಲ! ಓರ್ವ ಸ್ವಾಮೀಜಿಯೆಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ನಿಮ್ಮ ಊಹೆ ನಿಜ , ಆ ಸ್ವಾಮೀಜಿಗಳು ಬೇರಾರು ಅಲ್ಲ , ನಮ್ಮ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಪಾದಂಗಳವರು.
ಅಂದ ಹಾಗೆ ದಲಿತರು ಆತಂಕಕ್ಕೊಳಗಾಗುವ , ನೆಮ್ಮದಿಗೆ ಭಂಗ ತರುವ ಕೃತ್ಯವನ್ನು ಪೇಜಾವರರೇನು ಮಾಡಿದರು? ಏನು ಮಾಡಿಲ್ಲ . ಸುಮ್ಮನೆ ದಲಿತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಿಮಗೆ ಆ ದೀಕ್ಷೆ, ಈ ದೀಕ್ಷೆ ನೀಡುತ್ತೇನೆ ಎನ್ನುತ್ತಿದ್ದಾರೆ! ನಿಮ್ಮ ಮನೆಯಲ್ಲಿ ಆ ಪೂಜೆ, ಈ ಪೂಜೆ ಮಾಡುತ್ತೇನೆ, ನಿಮಗೆ ಅದು ಮಾಡುತ್ತೇನೆ ಇದು ಮಾಡುತ್ತೇನೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ದಲಿತರ ಬಗ್ಗೆ ಶ್ರೀಗಳಿಗೆ ದಿಢೀರನೆ ಪ್ರೀತಿ ಉಕ್ಕಿ ಉಕ್ಕಿ ಹರಿಯುತ್ತಿದೆ. ಅವರ ಈ ಉಕ್ಕಿ ಉಕ್ಕಿ ಹರಿಯುತ್ತಿರುವ ಪ್ರೀತಿಯೇ ದಲಿತರ  ಆತಂಕಕ್ಕೆ ಕಾರಣವಾಗಿರುವುದು.
ಹಾಗಾದರೆ ಪೇಜಾವರಶ್ರೀಗಳ  ಈ ಧಿಡೀರ್ ದಲಿತ ಪ್ರೇಮಕ್ಕೆ ಕಾರಣ? ಉತ್ತರ ಸ್ಪಷ್ಟ ಮತ್ತದೇ ಆತಂಕ! ಹಾಗಿದ್ದರೆ ಈ ಇಳಿವಯಸ್ಸಿನಲ್ಲಿ ಪೇಜಾವರ ಶ್ರೀಗಳನ್ನು ಕಾಡುತ್ತಿರುವ ಆತಂಕವಾದರೂ ಏನು? ಪ್ರಶ್ನೆ ಸರಳ. ಉತ್ತರ? ಸರಳವಾದುದಲ್ಲ! ಸಂಕೀರ್ಣತೆಯ ನೆಲೆಗಟ್ಟಿನದು. ಬಹುಶಃ ಆ ಒಂದು ಪ್ರಶ್ನೆಗೆ ಉತ್ತರ ಒಂದು ತಲೆಮಾರಿನದ್ದಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ನಮ್ಮ ಕಣ್ಣ ಮುಂದಿಡುತ್ತದೆ. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ರವರೆ  ಭಾರತೀಯ ಇತಿಹಾಸ ಬ್ರಾಹ್ಮಣ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ನಡೆದ ನಿರಂತರ ಸಂಘರ್ಷವಲ್ಲದೆ ಬೇರೆೇನಲ್ಲ ಎನ್ನುತ್ತಾರೆ! ಪೇಜಾವರಶ್ರೀಗಳ ಆತಂಕಕ್ಕೆ ಕಾರಣವಾಗಿರುವುದೇ ಇತಿಹಾಸದುದ್ದಕ್ಕೂ ನಡೆದುಬಂದಿರುವ, ಈಗಲೂ ಹಾಗೆಯೇ ಮುಂದುವರೆದಿರುವ ಅಂಬೇಡ್ಕರ್ ರವರು ಪ್ರಸ್ತಾಪಿಸಿರುವ  ಆ ನಿರಂತರ ಸಂಘರ್ಷ!
ಹಾಗಿದ್ದರೆ ಈಗ ಆ ಸಂಘರ್ಷದ ತೇರೆಳೆಯುತ್ತಿರುವವರು ಯಾರು? ಉತ್ತರಕ್ಕೆ ಹುಡುಕಬೇಕಿಲ್ಲ, ದಲಿತರು. ಅಕ್ಷರಶಃ ನಿಜ.  ಬ್ರಾಹ್ಮಣ ಧರ್ಮದ ಜೊತೆ ನಿರಂತರ ಸಂಘರ್ಷಕ್ಕಿಳಿದಿರುವ ಆ ಬೌದ್ಧ ಧರ್ಮದ ಈಗಿನ ವಾರಸುದಾರರು ದಲಿತರು. ಈ ವಾರಸುದಾರಿಕೆಯನ್ನು ಇತಿಹಾಸದ ಲಿಂಕ್ ಮೂಲಕ, ವರ್ತಮಾನದ ಅಗತ್ಯತೆಯೊಂದಿಗೆ ದಲಿತರ ಕೈಗಿತ್ತವರು ಬಾಬಾಸಾಹೇಬ್ ಅಂಬೇಡ್ಕರ್ರವರು
ಹಾಗಿದ್ದರೆ ಅಂಬೇಡ್ಕರ್ರವರು ದಲಿತರ ಕೈಗಿತ್ತದ್ದು ಯಾವುದೋ ಹಳೆಪಳೆಯುಳಿಕೆಯನ್ನೋ? ಅಥವಾ ಮತ್ತಾವುದೋ ದಾರಿತಪ್ಪಿದ ಐತಿಹಾಸಿಕ ಕೊಂಡಿಯನ್ನೋ? ಖಂಡಿತ ಇಲ್ಲ. ಅವರು ಕೈಗಿತ್ತದ್ದು ನಾವು (ದಲಿತರು) ಭಾರತದ ಮೂಲನಿವಾಸಿಗಳಾದ ನಾಗ ಜನಾಂಗಕ್ಕೆ ಸೇರಿದ್ದೇವೆ. ಈ ಜನಾಂಗದವರು ಭಗವಾನ್ ಬುದ್ಧನ ಅತ್ಯಂತ ಪ್ರಬಲ ಮತು ಶಿಸ್ತುಬದ್ಧ ಅನುಯಾಯಿಗಳು ಎಂಬ ತಲೆತಲಾಂತರದ ರಕ್ತ ಸಂಬಂಧವನ್ನು.
ಬೌದ್ಧ ಧರ್ಮಕ್ಕೂ, ನಮಗೂ ಅಂದರೆ ದಲಿತರಿಗೂ ಅಂತಹ ದಿವ್ಯ ಸಂಬಂಧವಿದೆ ಎಂದಾಕ್ಷಣ  ಆ ಸಂಬಂಧವನ್ನು ಕೊಡವಿಕೊಳ್ಳಲು ಸಾಧ್ಯವೇ? ಸಂಬಂಜ ಅನ್ನೋದು ದೊಡ್ದು ಕನ ಇದು ಕವಿ ದೇವನೂರು ಮಹಾದೇವರವರ ಪ್ರಸಿದ್ಧ ಸಾಲು. ಅಂತಹ ಸಂಬಜ ಅಥರ್ಾತ್ ಸಂಬಂಧದ ಕಾರಣದಿಂದಾಗಿಯೇ ದಲಿತರು ಈಗಲೂ ಬುದ್ಧನನ್ನು ಆರಾಧಿಸುತ್ತಿದ್ದಾರೆ.. ಅಂಬೇಡ್ಕರ್ ಎಂದಾಕ್ಷಣ ಅವರ ಪಕ್ಕ ಬುದ್ಧ ಇರಲೇಬೇಕು. ಎಂಬ ಸತ್ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಬರೀ ಬುದ್ಧನ ಚಿತ್ರ ಇಡುವುದಷ್ಟಕ್ಕೇ  ಅಂತಹ ಪಾಲನೆ  ಸೀಮಿತಗೊಳ್ಳುತ್ತಿಲ್ಲ. ಬದಲಿಗೆ ಬೌದ್ಧ ಭಿಕ್ಕುಗಳಾಗುವುದು, ಬೌದ್ಧ ದೀಕ್ಷೆ ತೆಗೆದುಕೊಳ್ಳುವುದು, ಬೌದ್ಧ ವಿಹಾರಗಳನ್ನು ಕಟ್ಟುವುದು, ಬುದ್ಧ ಜಯಂತಿಯನ್ನು ಆಚರಿಸುವುದು, ಬುದ್ಧ ಸಂಬಂಧಿ ಹೆಸರುಗಳನ್ನು ತಮ್ಮ ಮನೆ , ಮಗು, ಸಂಸ್ಥೆ ಇತ್ಯಾದಿಗಳಿಗೆ ಇಡುವುದು. ಹೀಗೆ ಬೌದ್ಧ ಸಂಸ್ಕೃತಿ ಅಪರೋಕ್ಷವಾಗಿ ದಲಿತರ ಮನೆಗಳಲ್ಲಿ ನೆಲೆನಿಂತು ಬಿಟ್ಟಿದೆ. ಔಪಚಾರಿಕವಾಗಿ ಮತಾಂತರ ಗೊಳ್ಳದಿರಬಹುದು, ಬೌದ್ಧ ಧರ್ಮ ಎಂದು ಧರ್ಮದ ಕಾಲಂನಲ್ಲಿ ಬರೆಸಿಕೊಳ್ಳದಿರಬಹುದು ಆದರೆ ಅನೌಪಚಾರಿಕವಾಗಿ ಅವರ ಆಚರಣೆ ಬೌದ್ಧ ಧರ್ಮವಾಗಿದೆ. ಭಕ್ತಿ ಬುದ್ಧನೆಡೆಗೆ ಇದೆ. ಪೇಜಾವರ ರ ಆತಂಕಕ್ಕೆ ಕಾರಣವಾಗಿರುವುದೇ ಈ ಅನೌಪಚಾರಿಕ ಅಂಶ !
ಹಾಗಿದ್ದರೆ ಪೇಜಾವರರ ಆತಂಕಕ್ಕೆ , ದುಗುಡಕ್ಕೆ ದಲಿತರ ಈ ಅನೌಪಚಾರಿಕ ಬೌದ್ಧಾಚರಣೆ ಕಾರಣವಾಗಿದೆ ಎಂಬ ಮಾತ್ರಕ್ಕೆ ದಲಿತರು ಅಂತಹ ಆಚರಣೆಯನ್ನು ಬಿಟ್ಟುಬಿಡಬೇಕೆ? ಅಥವಾ ಬಿಟ್ಟುಬಿಡುತ್ತಾರೆಯೇ? ಖಂಡಿತ ಇಲ್ಲ. ಮತ್ತಾವುದೋ ದೀಕ್ಷೆ ಕೊಡುತ್ತಾರೆ ಎಂಬ ಕಾರಣಕ್ಕೆ ಅಂಬೇಡ್ಕರ್ ರವರು 1956 ಅಕ್ಟೋಬರ್  14 ರಂದು ಒಮ್ಮೆಲೇ ಇಡೀ ಭಾರತದ ಸಮಸ್ತ ದಲಿತರಿಗೆ ನೀಡಿದ ಬೌದ್ಧ ದೀಕ್ಷೆಯನ್ನು ಬಿಟ್ಟುಬಿಡಬೇಕೇ? ಅಥವಾ ಬಿಟ್ಟುಬಿಡುತ್ತಾರೆಯೇ? ಉತ್ತರ ಮತ್ತದೇ ಖಂಡಿತ ಇಲ್ಲ.
ಹಾಗಿದ್ದರೆ ಪೇಜಾವರ ಶ್ರೀಗಳಿಂದ ಏಕಿಂತ ಪಾದಯಾತ್ರೆ ಎಂಬ ನಾಟಕ? ವೈಷ್ಣವದೀಕ್ಷೆ ಎಂಬ ಆರ್ಯದೀಕ್ಷೆ? ಆ ನಿರಂತರ ಸಂಘರ್ಷ ಮುಂದುವರೆಯಬೇಕಲ್ಲ! ತಲೆತಲಾಂತರಗಳಿಂದ ತಮ್ಮ ಬಂಧುಗಳು ನೀಡಿರುವ ಆ ಹೋರಾಟವನ್ನು ಪೇಜಾವರರು ಮುಂದುವರೆಸಬೇಕಲ್ಲ!  ಪೇಜಾವರರ ಪಾದಯಾತ್ರೆ , ವೈಷ್ಣವ ದೀಕ್ಷೆ ಇತ್ಯಾದಿ ನಡೆಯುತ್ತಿರುವುದೆಲ್ಲ ಈ ನಿಟ್ಟಿನಲ್ಲೇ! ಅವರು ಈ ರೀತಿ ಸಂಘರ್ಷಕ್ಕಿಳಿದಿರಬೇಕಾದರೆ ಅಥವಾ ಮುಂದುವರಿದಿರಬೇಕಾದರೆ ದಲಿತರೇನು ಮಾಡಬೇಕು? ತಾವು ಅನೌಪಚಾರಿಕವಾಗಿ ಆಚರಿಸುತ್ತಿರುವ ಬೌದ್ಧ ದರ್ಮವನ್ನು ಮತ್ತದರ ಮೇಲಿನ ಪ್ರೀತಿಯನ್ನು ಬಿಟ್ಟುಕೊಡಬೇಕೆ? ಅಥವಾ ಬಿಟ್ಟುಕೊಡುತ್ತಾರೆಯೇ? ಹಾಗೇನಾದರೂ ಪೇಜಾವರ ಶ್ರೀಗಳು ತಿಳಿದುಕೊಂಡಿದ್ದರೆ ಅದು ಅವರ ತಪ್ಪು ತಿಳುವಳಿಕೆಯಾಗುತ್ತದೆಯಷ್ಟೆ.
ಈ ನಿಟ್ಟಿನಲಿ ದಲಿತ ಸಮುದಾಯ ಇಂದು ಜಾಗೃತಗೊಳ್ಳುವುದು , ಎಚ್ಚೆತ್ತುಕೊಳ್ಳುವುದು  ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾದುದಾಗಿದೆ.
ಆತಂಕದ ಸಂಧರ್ಭದಲ್ಲೇ, ಒತ್ತಡದ ಸಂಧರ್ಭಗಳಲ್ಲೇ  ಒಳ್ಳೆಯ ನಿಧರ್ಾರಗಳು ಮೂಡಿಬರುವುದು. ಸಾಧ್ಯತೆಗಳ ಹೆಬ್ಬಾಗಿಲು ತೆರೆಯುವುದು. ಪೇಜಾವರಶ್ರೀಗಳ ಅಂತಹ ಕದಡುವಿಕೆಯ  ಈ ಸಂಧಿಗ್ಧ ಸಂಧರ್ಭದಲ್ಲಿ ದಲಿತರು ಇಂದು ಅನೌಪಚಾರಿಕವಾಗಿ ತಾವು ಒಪ್ಪುವ ಬೌದ್ಧ ಧರ್ಮವನ್ನು  ಔಪಚಾರಿಕವಾಗಿ ಏಕೆ ಸ್ವೀಕರಿಸಬಾರದು? ವೈಷ್ಣವ ದೀಕ್ಷೆಗೆ ಬೌದ್ಧ ದೀಕ್ಷೆಯೇ ಪಯರ್ಾಯವೆಂದು ಏಕೆ ಸಾರಬಾರದು? ಈ ನಿಟ್ಟಿನಲಿ 1956 ಅಕ್ಟೋಬರ್ 14 ರಂದು ಅಂಬೇಡ್ಕರ್ ರವರ ನೇತೃತ್ವದಲ್ಲಿ ನಾಗಪುರದಲ್ಲಿ ನಡೆದ  ಘಟನೆ ಕನರ್ಾಟಕ ದಲ್ಲಿ ( ನೇತೃತ್ವ ಯಾರದಾದರೂ ಸರಿ) ಯಾಕೆ ನಡೆಯಬಾರದು?
ಏಕೆಂದರೆ ಅಂತಹ ಕ್ರಾಂತಿಕಾರಕ , ಗಂಡು ಹೃದಯದ ನಿಲುವು ಮಾತ್ರ ಪೇಜಾವರರಿಗೆ ಉತ್ತರವಾಗಬಲ್ಲುದು. ಬರೇ ಸ್ವಾಗತಾರ್ಹ, ಖಂಡಿಸುತ್ತೇವೆ ಇತ್ಯಾದಿ ಪೊಳ್ಳು ಮಾತುಗಳಲ್ಲ. ಪ್ರತಿಯೊಂದು ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ ಇದು ನ್ಯೂಟನ್ನನ ಮೂರನೆಯ ನಿಯಮ. ಈ ಪ್ರಕಾರ ಪೇಜಾವರರು ದಲಿತರನ್ನು ಹಿಂದೂಧರ್ಮದ ಕಡೆಗೆ ಎಳೆದರೆ ದಲಿತರು ಅದಕ್ಕೆ ವಿರುದ್ಧವಾಗಿ ಬೌದ್ಧ ಧರ್ಮದೆಡೆಗೆ ಚಲಿಸುವುದು ಬೇಡವೇ? ತನ್ಮೂಲಕ ಪೇಜಾವರರ ಕ್ರಾಂತಿಗೆ ಪ್ರತಿಕ್ರಾಂತಿ ರೂಪಿಸುವುದು ಬೇಡವೇ?
ಈ ನಿಟ್ಟಿನಲಿ ದಲಿತ ಸಮುದಾಯ ಇಂದು ಎಚ್ಚೆತ್ತುಕೊಳ್ಳಬೇಕಿದೆ. ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಆ ನಿರಂತರ ಸಂಘರ್ಷಕ್ಕೆ  ಹೆಗಲಿಗೆ ಹೆಗಲು ಕೊಡಬೇಕಿದೆ.  ಬುದ್ಧನ ಮೂಲಕ ಪೇಜಾವರರಿಗೆ ಸೂಕ್ತ ಉತ್ತರ ಕೊಡಬೇಕಿದೆ. ಉತ್ತರ ಎಂದಾಕ್ಷಣ ಯುವ ದಲಿತ ಕವಿ ಹನಸೋಗೆ ಸೋಮಶೇಖರ್ರವರ ಕವನದ ಒಂದೆರಡು ಸಾಲುಗಳು ಇಲ್ಲಿ ನೆನಪಿಗೆ ಬರುತ್ತ್ತಿದೆ. ಆ ಭವ್ಯ ಸಾಲುಗಳು ಇಂತಿವೆ.
ಬುಧ್ದನೆಂದರೆ ಸುಜ್ಞಾನ ಸಾಗರ
ಅವನ ಬಳಿಯಿದೆ ಎಲ್ಲಕ್ಕೂ ಉತ್ತರ
ಪೇಜಾವರರ ಕ್ರಿಯೆಗಳಿಗೂ ಕೂಡ ಬುದ್ಧನ ಬಳಿ ಉತ್ತರವಿದೆ. ಜಾಗೃತ ದಲಿತ ಸಮುದಾಯ ಅಂತಹ ಸೂಕ್ತ ಬುದ್ಧ ಉತ್ತರವನ್ನು ಹುಡುಕಿ ತೆಗೆಯಬೇಕಷ್ಟೆ.
ರಘೋತ್ತಮ.ಹೊ.ಬ.
ಚಾಮರಾಜನಗರ
ಮೊ:9481189116

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: