ಪೂನಾ ಒಪ್ಪಂದ- ಸತ್ಯ ಎಲ್ಲೆಡೆಗೆ


ರಾಮ ಕೃಷ್ಣ ಗಾಂಧಿ ಬುದ್ಧ ಹುಟ್ಟಿದಂತ ದೇಶವೇಂದು ಸಂತೋಷದಿ ಹೇಳುವೆ_ಇದು ಜನಪ್ರಿಯ ಚಿತ್ರವೊಂದರ ಜನಪ್ರಿಯ ಹಾಡು.  ರಾಮಕೃಷ್ಣ ಪುರಾಣದ ಪಾತ್ರಗಳಾದ್ದರಿಂದ ಅವರ ಅಗತ್ಯತೆಯನ್ನು ಇಲ್ಲಿ ಪ್ರಸ್ತಾಪಿಸಲು ಹೋಗುತ್ತಿಲ್ಲ. ಅದೇ ಗಾಂಧಿ ಬುದ್ಧ? ಎಲ್ಲಿಯ ಗಾಂಧಿ? ಎಲ್ಲಿಯ ಬುದ್ಧ?  ಏಕೆಂದರೆ ಬಹುಜನ ಹಿತಾಯ, ಬಹುಜನ ಸುಖಾಯಎಂದ ಬುದ್ಧ ಎಲ್ಲಿ? ಅಸ್ಪೃಶ್ಯರ ಹಕ್ಕುಗಳನ್ನು ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸಿದ ಗಾಂಧಿ ಎಲ್ಲಿ?
1932 ಸೆಪ್ಟೆಂಬರ್ 24ರ ಪೂನಾ ಒಪ್ಪಂದ, ಮತ್ತದರ ಸಂಬಧಿತ ಘಟನಾವಳಿಗಳು  ಗಾಂಧೀಜಿಯವರನ್ನು ಅಕ್ಷರಶಃ ಬೆತ್ತಲುಗೊಳಿಸುತ್ತವೆ! ತಮ್ಮ ಹೀನ ತಂತ್ರಗಳ ಮೂಲಕ ಶೋಷಿತ ಜನಸಮುದಾಯದ ಹಕ್ಕುಗಳಿಗೆ ಬೆಂಕಿಯಿಡಲು ಯತ್ನಿಸಿದ ಆವರ ನಯವಂಚಕತನವನ್ನು ಬಟಾಬಯಲುಗೊಳಿಸುತ್ತವೆ.
ನಿಜ, ಇಡೀ ದೇಶವೆ ಮಹಾತ್ಮರೆಂದು ಕರೆಯುವ ರಾಷ್ಟ್ರಪಿತ ಎಂದು ಗೌರವಿಸುವ ವ್ಯಕ್ತಿಯೊಬ್ಬರ ಬಗ್ಗೆ ಕೇವಲವಾಗಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಸತ್ಯ ಎಲ್ಲೆಡೆಗೆ ಹಂಚಬೇಕೆಂದಾಗ , ಆ ಸತ್ಯಕ್ಕೆ ಸೂಕ್ತ ಸಾಕ್ಷಿ ಇರುವಾಗ ಭಯವೇಕೆ? ಅಂಜಿಕೆಏಕೆ? ಅಳುಕೇಕೆ? ಅದರಲ್ಲೂ ಸಕರ್ಾರಿ ಮುದ್ರಿತ ಸಾಕ್ಷಿ ಇರುವಾಗ? ಕನರ್ಾಟಕ ಸಕರ್ಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು  ಕೃತಿ ಸರಣಿಯ  9ನೇ ಸಂಪುಟದ  ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು? ಕೃತಿ ಅಂತಹ ಗಟ್ಟಿಸಾಕ್ಷಿಯಾಗಿ ಮಹಾತ್ಮಗಾಂಧಿಯವರ ಇಬ್ಬಗೆಯ ನೀತಿಯನ್ನು ಅಕ್ಷರಶಃ ಬಯಲಿಗೆಳೆಯುತ್ತದೆ. ಮಹಾತ್ಮ ಗಾಂಧಿಯವರನ್ನು ಹೀಗೆ ಬಯಲಿಗೆಳೆಯುವುದರ ಹಿಂದೆ  ಪೂವರ್ಾಗ್ರಹ ಪೀಡಿತ ಮನಸ್ಸಾಗಲೀ   ಯಾವುದೋ ದುರುದ್ದೇಶವಾಗಲೀ ಇಲ್ಲ. ಬದಲಿಗೆ ಸತ್ಯವನ್ನು ತಿಳಿಸುವ ಆ ಮೂಲಕ  ಶೋಷಿತರ ಏಳಿಗೆಗ ಐತಿಹಾಸಿಕವಾಗಿ ಅಡ್ಡಿಯಾದ ಕಹಿ ಘಟನೆಯನ್ನು ದಾಖಲಿಸುವುದಷ್ಟೆ ಇಲ್ಲಿಯ ಉದ್ದೇಶ.
ಇರಲಿ, ಪೂನಾ ಒಪ್ಪಂದ ಹಾಗೆಂದರೇನು ಎಂದು ತಿಳಿಯುವುದಕ್ಕೆ ಮೊದಲು  ಆ ಒಪ್ಪಂದಕ್ಕೆ ಕಾರಣವಾದ ಕೆಲವು ಘಟನೆಗಳತ್ತ  ಕಣ್ಣಾಯಿಸುವುದು ಸೂಕ್ತ. ಏಕೆಂದರೆ  ಅಂತಹ ಘಟನೆಗಳು ಮತ್ತು ಆ ಘಟನೆಗಳ ಉಪಕ್ರಮವಾಗಿ ರೂಪುಗೊಂಡದ್ದೆ ಈ ಒಪ್ಪಂದ.
1930 ರ ನವೆಂಬರ್ ತಿಂಗಳಲ್ಲಿ ಬ್ರಿಟಿಷ್ ಭಾರತದಲ್ಲಿ ಸಾಂವಿಧಾನಿಕ ಬೆಳವಣಿಗೆಗಳನ್ನು ಪರಿಷ್ಕರಿಸಲು ಲಂಡನ್ನಿನಲ್ಲಿ ಪ್ರಧಾನಿ ರ್ಯಾಮ್ಸೆ ಮ್ಯಾಕ್ ದೊನಾಲ್ಡ್ರ ಅಧ್ಯಕ್ಷತೆಯಲ್ಲಿ  ಮೊದಲನೆಯ ದುಂಡುಮೇಜಿನ ಸಭೆ ನಡೆಯಿತು. ಸಭೆಯಲ್ಲಿ ಅಸ್ಪೃಶ್ಯರ ಪ್ರತಿನಿಧಿಗಳಾಗಿದ್ದ ಡಾ. ಅಂಬೇಡ್ಕರ್ರವರು ಸಮಾನ ಪೌರತ್ವ, ಸಮಾನತೆಯ ಹಕ್ಕು, ಶಾಸಕಾಂಗಗಳಲ್ಲಿ ಪ್ರಾತಿನಿಧ್ಯ, ಉದ್ಯೋಗದಲ್ಲಿ ಮೀಸಲಾತಿ ಇತ್ಯಾದಿ ಬೇಡಿಕೆಗಳನ್ನೊಳಗೊಂಡ ಜ್ಞಾಪನ ಪತ್ರವೊಂದನ್ನು ದುಂಡುಮೇಜಿನ ಸಭೆಯ ಬಹುಮುಖ್ಯ ಸಮಿತಿಯಾದ ಅಲ್ಪಸಂಖ್ಯಾತರ ಸಮಿತಿಗೆ  ಸಲ್ಲಿಸಿದರು. ಸಭೆಯು ಮುಕ್ತಾಯವಾಗುವ ಮುನ್ನ ಅಂಬೇಡ್ಕರರ ಬೇಡಿಕೆಗಳ ಬಗ್ಗೆ  ಸಹಮತ ವ್ಯಕ್ತಪಡಿಸಿತು. ಒಂದರ್ಥದಲ್ಲಿ ಪ್ರಥಮ ದುಂಡುಮೇಜಿನ ಸಭೆ ಅಸ್ಪೃಶ್ಯರಿಗೆ  ಒಂದು ರೀತಿಯ ನೈತಿಕ ಜಯವನ್ನು ತಂದುಕೊಟ್ಟತು. ಏಕೆಂದರೆ ಈ ಸಭೆಯಲ್ಲಿ ಪ್ರಪ್ರಥಮವಾಗಿ ಅಸ್ಪೃಶ್ಯರು ಬೇರೆ ಅಲ್ಪಸಂಖ್ಯಾತರ ರೀತಿಯಲ್ಲಿ  ಪ್ರತ್ಯೇಕ ರಾಜಕೀಯ ಮತ್ತು ಸಾಂವಿಧಾನಿಕ ಹಕ್ಕು ಪಡೆಯಲು ಅರ್ಹರಾಗಿದ್ದಾರೆ ಎಂಬ ತೀಮರ್ಾನ ವ್ಯಕ್ತವಾಯಿತು. ಹಾಗೆಯೇ ಇದು ಅಂಬೇಡ್ಕರರಿಗೆ ಸಿಕ್ಕ ಪ್ರಥಮ ರಾಜಕೀಯ ಯಶಸ್ಸು ಕೂಡ ಆಗಿತ್ತು.
ದುರಂತವೆಂದರೆ ಅಂಬೇಡ್ಕರರ ಈ ಯಶಸ್ಸು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಎಲ್ಲಿ ಅಂಬೇಡ್ಕರರ ಬೇಡಿಕೆಗಳು ಕಾನೂನಾಗಿ ರೂಪಿತವಾಗುತ್ತದೋ ಎಂದು ಆತಂಕಗೊಂಡ, ಮೊದಲ ದುಂಡು ಮೇಜಿನ ಸಭೆಗೆ ಕಾರಣಾಂತರಗಳಿಂದ ಗೈರಾಗಿದ್ದ ಕಾಂಗ್ರೆಸ್ಸಿಗರು ಎರಡನೇ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ಮಹಾತ್ಮಗಾಂದಿಯವರನ್ನು ತನ್ನ ಪ್ರತಿನಿಧಿಯಾಗಿ ಕಳುಹಿಸಿತು.
ಅಚ್ಚರಿಯೆಂದರೆ ಯಾವ ಗಾಂಧೀಜಿಯವರನ್ನು ಅಸ್ಪೃಶ್ಯರ ಪರ ಎಂದು ಬಿಂಬಿಸಲಾಗಿತ್ತೊ ಅದೇ ಗಾಂಧೀಜಿಯವರು ಎರಡನೇ ದುಂಡುಮೇಜಿನ  ಸಭೆಯಲ್ಲಿ ಅದೇ ಅಸ್ಪೃಶ್ಯರ ವಿರುದ್ಧ ನಿಂತರು! ಇದು ಯಾವ ಪರಿ ಎಂದರೆ ಸ್ವತಃ ಅಂಬೇಡ್ಕರ್ರವರೇ ಇದು ಶ್ರೀ ಗಾಂಧಿ ಮತ್ತು ಕಾಂಗ್ರೆಸ್ಸು ಅಸ್ಪೃಶ್ಯರ ವಿರುದ್ಧ ಸಾರಿದ  ಸಮರವಾಗಿತ್ತು ಎನ್ನುತ್ತಾರೆ! ಪ್ರಶ್ನೆಯೇನೆಂದರೆ ಗಾಂಧಿ ಮತ್ತು ಕಾಂಗ್ರೆಸ್ಸಿಗರು  ಹಾಗೇಕೆ ಮಾಡಿದರು?  ಅಸ್ಪೃಶ್ಯರ ವಿರುದ್ಧ ಸಮರ ಸಾರುವ ಅಗತ್ಯವಾದರೂ ಏನಿತ್ತು? ಇದು ಸವಣರ್ೀಯ ಹಿಂದುಗಳು ಒಟ್ಟಾಗಿ  ಅಸ್ಪೃಶ್ಯರ ಹಕ್ಕುಗಳನ್ನು ತುಳಿಯುವ ಹೀನ ಕೃತ್ಯವಾಗಿತ್ತೇ? ಮತ್ತು ಅಂತಹ ಕೃತ್ಯದ ನೇತೃತ್ವವನ್ನು ಸ್ವತಃ ಮಹಾತ್ಮಗಾಂಧಿಯವರೇ  ವಹಿಸಿಕೊಂಡಿದ್ದರೆ? ಮುಂದಿನ ಮಾತುಗಳು ಅದಕ್ಕೆ ಸಾಕ್ಷಿ ಒದಗಿಸುತ್ತವೆ. ನವೆಂಬರ್ 13 1931 ರಂದು ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಮಹಾತ್ಮಗಾಂಧಿಯವರ  ಆ ಮಾತುಗಳು ಒಂದರ್ಥದಲಿ ಅಸ್ಪೃಶ್ಯರ ಹೆಣದ ಮೇಲೆ ಹೊಡೆದ ಕೊನೆಯ ಮೊಳೆಗಳಂತೆ  ಕಂಡರೂ ಅಚ್ಚರಿ ಇಲ್ಲ! ಗಾಂಧಿಯವರ ಅಂದಿನ ಮನಸ್ಥಿತಿಯನ್ನು ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ ಶ್ರೀ ಗಾಂಧಿಯವರು ಆವೇಶ ಭರಿತರಾಗಿದ್ದರು. ಈ ಅಲ್ಪಸಂಖ್ಯಾತರ (ಅಸ್ಪೃಶ್ಯರು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಆಂಗ್ಲೋಇಂಡಿಯನ್ನರು) ಒಡಂಬಡಿಕೆಯನ್ನು  ಸಿದ್ದ ಪಡಿಸುವುದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಮೇಲೂ ಅವರು ಹರಿ ಹಾಯ್ದರು. ಅದರಲ್ಲಿಯೂ ಅವರು ಅಸ್ಪೃಶ್ಯರಿಗೆ ಪ್ರತ್ಯೇಕ ರಾಜಕೀಯ ಹಕ್ಕನ್ನು  ನೀಡುವುದನ್ನು ಉಗ್ರವಾಗಿ ಪ್ರತಿಭಟಿಸಿದರು! ಎನ್ನುತ್ತಾರೆ.
ಅಂದಹಾಗೆ ಸಭೆಯಲ್ಲಿ ಆಕ್ರೋಶಗೊಂಡ  ಗಾಂಧಿಯವರು ಮಾತನಾಡುತ್ತಾ ಅಸ್ಪೃಶ್ಯರ ಪರವಾಗಿ ಮುಂದಿಡಲಾದ  ಈ ಬೇಡಿಕೆ (ಪ್ರತ್ಯೇಕ ರಾಜಕೀಯ ಹಕ್ಕು) ನನ್ನನ್ನು ನಿರ್ದಯವಾಗಿ ಇರಿದಂತಿದೆ!  ಬೇಕಾದರೆ ಅಸ್ಪೃಶ್ಯರು ಇಸ್ಲಾಂ ಧರ್ಮಕ್ಕೆ ಹೋಗಲಿ, ಕ್ರೈಸ್ತ ಧರ್ಮವನ್ನಾದರೂ ಸೇರಲಿ, ನನ್ನದೇನು ಅಭ್ಯಂತರವಿಲ್ಲ. ಆದರೆ ಅವರಿಗೆ  ಪ್ರತ್ಯೇಕ ಮತದಾನ ಪದ್ಧತಿ ನೀಡುವುದನ್ನು ಖಂಡತುಂಡವಾಗಿ ವಿರೋಧಿಸುತ್ತೇನೆ ಎನ್ನುತ್ತಾರೆ. ಇದು ಯಾವ ಪರಿ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಡದಿದ್ದರೂ ಪರವಾಗಿಲ್ಲ  ಅಸ್ಫೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಕೊಡುವುದು ಮಾತ್ರ ಬೇಡ. ಹಾಗೇನಾದರೂ  ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಮತು ಮೀಸಲಾತಿ ಕೊಟ್ಟಿದ್ದೇ ಆದರೆ ಅದನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ ಎನ್ನುತ್ತಾರೆ. ತಮ್ಮ ಈ ವಿರೋಧಕ್ಕೆ  ಗಾಂಧೀಜಿಯವರು  ಕೊಡುವ ಕಾರಣವಾದರೂ ಎನು? ಇದರಿಂದ ಹಿಂದೂ ಧರ್ಮದ ವಿಭಜನೆ ಯಾಗುತ್ತದೆ ಎಂದು!
ಯಾರನ್ನು ಮಹಾತ್ಮ ಎನ್ನಲಾಗುತ್ತಿತ್ತೋ, ಯಾರನ್ನು ಅಸ್ಪೃಶ್ಯರ ಉದ್ಧಾರಕ ಎನ್ನಲಾಗುತ್ತಿತ್ತೋ ಅಂತಹವರಿಂದ ಹೊರಟ ಅಸ್ಪೃಶ್ಯೋದ್ಧಾರದ ಮಾತುಗಳಿವು! ಹಾಗೇನಾದರೂ ಗಾಂಧೀಜಿಯವರ ಮಾತೇ ಅಂತಿಮ ತೀಪರ್ು ಎನ್ನುವ ಹಾಗಿದ್ದರೆ ಆವತ್ತೆ  ಅಸ್ಪೃಶ್ಯರ ಹಣೆಬರಹ ಏನೆಂದು ತೀಮರ್ಾನವಾಗಿರುತ್ತಿತ್ತು! ಆದರೆ ಗಾಂಧೀಜಿಯವರ ಆ ರೋಷದ  ಮಾತುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಸಭೆ ಅಸ್ಪೃಶ್ಯರಿಗೆ ಅವರ ನ್ಯಾಯಬದ್ಧ ಹಕ್ಕುಗಳನ್ನು ನೀಡುವುದರ ಪರ ಇದ್ದಂತ್ತಿತು.್ತ ಅಲ್ಲದೇ ಅಸ್ಪೃಶ್ಯರ ಮೊದಲನೇ ಶತೃ ಸಾಕ್ಷಾತ್ ಗಾಂಧಿಜಿಯವರೇ ಎಂದು ಇಡೀ ಸಭೆಗೆ ಚೆನ್ನಾಗಿತಿಳಿದು ಹೋಯಿತು. ತಾನು ನೀಡುವ  ತೀಪರ್ಿಗೆ ಎಲ್ಲರೂ ಬದ್ಧ ರಾಗಿರಬೇಕೆಂದು ಒಪ್ಪಿಗೆ ಪಡೆದು ಎಲ್ಲರಿಂದಲೂ ಸಹಿ ಹಾಕಿಸಿಕೊಂಡ ಬ್ರಿಟಿಷ್ ಪ್ರಧಾನಿಯವರು ಎಲ್ಲರನ್ನು ಭಾರತಕ್ಕೆ ವಾಪಸ್ ಕಳುಹಿಸಿದರು.
ಇತ್ತ ಭಾರತಕ್ಕೆ ವಾಪಸ್ ಬಂದ ಗಾಂಧೀಜಿಯವರು ಸುಮ್ಮನೆ ಕೂರಲಿಲ್ಲ್ಲ. ಅಸ್ಪೃಶ್ಯರ ಬೇಡಿಕೆಗಳ ಪರ ನಿಂತಿದ್ದ ಮುಸಲ್ಮಾನರನ್ನು ಅಸ್ಪೃಶ್ಯರ ವಿರುದ್ಧ ಎತ್ತಿಕಟ್ಟಲು ಯತ್ನಿಸಿದರು. ಆದರೆ ಪ್ರತಿಫಲ ಶೂನ್ಯವಾಗಿತ್ತು. ಇದನ್ನು ಸ್ವತಃ ಅಂಬೇಡ್ಕರ್ರವರೇ ಮುಸಲ್ಮಾನರು ಈ ಐತಿಹಾಸಿಕ ಪಿತೂರಿಯಲ್ಲಿ ಭಾಗಿಗಳಾಗಲು ನಿರಾಕರಸಿದ್ದರಿಂದ  ಈ ಯೋಜನೆ ವಿಫಲಗೊಂಡಿತು ಎನ್ನುತ್ತಾರೆ.
ಒಟ್ಟಾರೆ ಗಾಂಧೀಜಿಯವರಿಂದ ಸೃಷ್ಟಿಯಾದ ಈ ಎಲ್ಲಾ ಗೊಂದಲಗಳ ನಡುವೆ ಆಗಸ್ಟ್ 17 1932 ರಂದು ಬ್ರಿಟಿಷ್ ಪ್ರಧಾನಿ ರ್ಯಾಮ್ಸೆ ಮ್ಯಾಕ್  ಡೊನಾಲ್ಡ್ ಐತಿಹಾಸಿಕ ಕೋಮುವಾರು ತೀಪರ್ು ಪ್ರಕಟಿಸಿದರು. ಅದರಲ್ಲಿ ಅಂಬೇಡ್ಕರ್ರವರು ಕೇಳಿದ್ದ ಎಲ್ಲಾ ನ್ಯಾಯಬದ್ಧ ಬೇಡಿಕೆಗಳನ್ನು( ಪ್ರತ್ಯೇಕ ಮತದಾನ ಪದ್ಧತಿ, ಉದ್ಯೋಗದಲ್ಲಿ ಮೀಸಲಾತಿ, ಸಮಾನ ನಾಗರೀಕ ಹಕ್ಕು ಇತ್ಯಾದಿ ) ಈಡೇರಿಸಲಾಗಿತ್ತು. ಹಾಗೇಯೇ ಹಿಂದೂ ಧರ್ಮ  ವಿಭಜನೆಯಾಗುತ್ತದೆಎಂಬ ಗಾಂಧೀಜಿಯವರ ಆತಂಕವನ್ನು ದೂರಗೊಳಿಸಲು ಅಸ್ಪೃಶ್ಯರಿಗೆ ಎರಡು ಓಟು ಹಾಕುವ ಹಕ್ಕು ನೀಡಲಾಯಿತು! ಒಂದು ಓಟನ್ನು ತಮ್ಮವರು ಮಾತ್ರ ಸ್ಪಧರ್ಿಸುವ ಹಾಗೇ ತಾವೊಬ್ಬರೇ ಮಾತ್ರ ಮತ ಚಲಾಯಿಸುವ ಪ್ರತ್ಯೇಕ ಮತಕ್ಷೇತ್ರದಲ್ಲಿ ಚಲಾಯಿಸಲು, ಮತ್ತೊಂದನ್ನು ಸಾಮಾನ್ಯ ಕ್ಷೇತ್ರದ ಅಭ್ಯಥರ್ಿಗಳ ಪರ ಸಾಮಾನ್ಯ ಮತ ಕ್ಷೇತ್ರದಲ್ಲಿ ಚಲಾಯಿಸಲು ಅವಕಾಶ ನೀಡಲಾಯಿತು.  ಒಂದರ್ಥದಲಿ ಅಸ್ಪೃ ಶ್ಯರಿಗೆ ನೀಡಲಾದ  ಈ ಎರಡು ಓಟು ಹಾಕುವ ಹಕ್ಕು ಶತಮಾನಗಳಿಂದ ನೊಂದವರಿಗೆ ಅಮೃತ ಸಿಕ್ಕ ಹಾಗೆ ಆಗಿತ್ತು.
ಒಟ್ಟಿನಲಿ ಅಂಬೇಡ್ಕರರ ನ್ಯಾಯಬದ್ಧವಾದ, ತರ್ಕಬದ್ಧವಾದ ಬೇಡಿಕೆ ಮತ್ತು ಆ ಬೇಡಿಕೆಗೆ ಪೂರಕವಾಗಿ ಬ್ರಿಟಿಷ್ ಪ್ರಧಾನಿಯವರ ಬುದ್ಧಿವಂತಿಕೆಯ ತೀಮರ್ಾನ ಅಸ್ಪೃಶ್ಯತೆಯ ಸಮಸ್ಯೆಯನ್ನು ಒಮ್ಮೆಲೆ ಕೊನೆಗಾಣಿಸುವ ಸದಾಶಯವನ್ನು ಇಡೀ ಭಾರತದಾದ್ಯಂತ ಬಿತ್ತಿತು.
ಆದರೆ? ಯಾವ ಅಸ್ಪೃಶ್ಯರನ್ನು ತಾವು  ಶತಮಾನಗಳಿಂದ ಶೋಷಿಸಿದ್ದೇವೆಯೋ ಅಂತಹ ಅಸ್ಪೃಶ್ಯರಿಗೆ ಒಮ್ಮೆಲೇ ಅಮೃತ ಸಿಗುವುದನ್ನು ಯಾರು ತಾನೆ ಸಹಿಸಿಕೊಳ್ಳುತ್ತಾರೆ? ಅದೂ ಸಾಕ್ಷಾತ್ ಮಹಾತ್ಮ ಗಾಂಧೀಜೀಯವರೆ ಆ ಗುಂಪಿನ ನಾಯಕರಾಗಿರುವಾಗ? ಅಲ್ಲದೆ ಅಸ್ಪೃಶ್ಯರಿಗೆ ನೀಡಲಾಗುವ ಅಂತಹ ಯಾವುದೇ ಸೌಲಭ್ಯವನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ ಎಂದು ಅವರು ಮೊದಲೇ ತಿಳಿಸಿರುವಾಗ? ಅಕ್ಷರಶಃ ನಿಜ. ಗಾಂಧೀಜಿಯುವರು  ತಮ್ಮ ಆ ತೀಮರ್ಾನಕ್ಕ ಬದ್ಧ ರಾದರು. ಅಂತಹ ಬದ್ಧತೆಯ (ಅಸ್ಪೃಶ್ಯರನ್ನು ತುಳಿಯುವ)  ಕಾರಣದಿಂದಲೇ ಸೆಪ್ಟೆಂಬರ್ 20 1932 ರಂದು  ಪೂನಾದ ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸ  ಸತ್ಯಾಗ್ರಹ ಕುಳಿತರು. ಇದುವರೆಗೂ ತಾವು ಕೈಗೊಂಡಿದ್ದ 21 ಉಪವಾಸಗಳಲ್ಲಿ ಒಮ್ಮೆಯೂ ಅಸ್ಪೃಶ್ಯರ ಪರ ಉಪವಾಸ ಕೈಗೊಳ್ಳದ ಗಾಂಧೀಜಿಯವರು ಪ್ರಪ್ರಥಮವಾಗಿ ಅಸ್ಪೃಶ್ಯರ ವಿರುದ್ಧವೇ ಉಪವಾಸ ಪ್ರಾರಂಭಿಸಿದ್ದರು!
ಗಾಂಧೀಜಿಯವರ ಈ ಹೇಯ ಉಪವಾಸವನ್ನು ಅವರ ಶಿಷ್ಯನೊಬ್ಬ ಐತಿಹಾಸಿಕ ಮಹಾನ್ ಉಪವಾಸ ವೆಂದು ಬಣ್ಣಿಸಿದ! ಇಂತಹ ಈ ಬಣ್ಣನೆಗೆ ಅಂಬೇಡ್ಕರ್ ರವರ ಪ್ರತಿಕ್ರಿಯೆ ಹೀಗಿತ್ತು ಅದರಲ್ಲಿ ಐತಿಹಾಸಿಕ ಮಹತ್ತು ಏನಿದೆಯೋ ನಾನರಿಯೆ. ಈ ಕ್ರಿಯೆಯಲ್ಲಿ ಶೌರ್ಯವೇನು ಇರಲಿಲ್ಲ. ನಿಜವಾದ ಅರ್ಥದಲ್ಲಿ ಅದು ಹೇಡಿಯ ಕೃತ್ಯವಾಗಿತ್ತು,. ಅದು ಕೇವಲ ದುಸ್ಸಾಹಸವೇ ಆಗಿತ್ತು. ತನ್ನ ಅಮರಣಾಂತ ಉಪವಾಸಕ್ಕೆ  ಬ್ರಿಟಿಷ್ ಸರಕಾರವೂ ಅಸ್ಪೃಶ್ಯರೂ ಗಢಗಢ ನಡುಗಿ ನೆಲಕಚ್ಚುವರೆಂದೂ, ತಮಗೆ ಅವರೆಲ್ಲ ಶರಣಾಗಿ ಬರುವರೆಂದೂ ಶ್ರೀಮಾನ್ ಗಾಂಧಿಯವರು ನಂಬಿದ್ದರು. ಆದರೆ ಅವರು (ಅಸ್ಪೃಶ್ಯರು ಮತ್ತು ಬ್ರಿಟಿಷರು) ಧೃಡವಾಗಿಯೇ ಉಳಿದು  ಗಾಂಧಿಯವರನ್ನು ಪರೀಕ್ಷಿಸಬಯಸಿದರು. ಒಂದರ್ಥದಲಿ ಗಾಂಧಿಯವರ ಪರೀಕ್ಷೆಯೂ ಆಯಿತು!  ತಾನು ಹೊಂಚಿದ ಉಪಾಯ ಅತಿಯಾಯಿತೆಂದು ಗಾಂಧಿಯವರಿಗೆ ಮನವರಿಕೆಯಾದಾಗ  ಅವರ ಶೂರತನವು ಸೋರಿಹೋಗಿತ್ತು. ಅಸ್ಪಶ್ಯರಿಗೆ ನೀಡಿರುವ  ಸೌಲಭ್ಯವನ್ನು ಹಿಂತೆಗೆಸಿ  ಅವರನ್ನು ಯಾವುದೇ ಸಹಾಯವಿಲ್ಲದ, ಯಾವುದೇ ಹಕ್ಕುಗಳಿಲ್ಲದ ನಿಕೃಷ್ಟರನ್ನಾಗಿ ಮಾಡುವವರೆಗೂ ನನ್ನ ಉಪವಾಸ ಮುಂದುವರೆಯುತ್ತದೆ ಎಂದು  ಪ್ರಾರಂಭವಾದ ಅವರ ಸತ್ಯಾಗ್ರಹ  ಕಡೆಗೆ ನನ್ನ ಜೀವ ನಿಮ್ಮ ಕೈಯಲ್ಲಿದೆ. ನನ್ನನ್ನು ಬದುಕಿಸಿ ಎಂದು ನನ್ನನ್ನು ಬೇಡಿಕೊಳ್ಳುವವರೆಗೆ ತಲುಪಿತು!  ಒಪ್ಪಂದಕ್ಕೆ ಸಹಿಹಾಕಿಸಿಕೊಳ್ಳಲು ಅವರು ತುಂಬಾ ಹಪಹಪಿಸತೊಡಗಿದರು.  ಪೂನಾ ಒಪ್ಪಂದಕ್ಕೆ ಸಹಿಯಾಗದೆ ಬ್ರಿಟಿಷ್ ಪ್ರಧಾನಿಯವರ ಕೋಮುವಾರು ತೀಪರ್ು ರದ್ಧಾಗುತ್ತಿರಲಿಲ್ಲ.  ಪ್ರಾರಂಭದಲ್ಲಿ  ಶ್ರೀಮಾನ್ ಗಾಂಧಿಯವರು ಒತ್ತಾಯಿಸಿದ್ದು ಇದನ್ನೆ. ಹಾಗೆಯೇ ಕೋಮುವಾರು ತೀಪರ್ಿಗೆ ಪರ್ಯಾಯವಾಗಿ ಒಪ್ಪಂದದಲ್ಲಿ ಸೂಕ್ತ ಸಾಂವಿಧಾನಿಕ ರಕ್ಷಣೆಯನ್ನು ಸೇರಿಸಲಾಗಿತ್ತು. ಹೀಗಿದ್ದರೂ ಒಪ್ಪಂದಕ್ಕೆ ಸಹಿಮಾಡಲು ಗಾಂಧೀಜಿಯವರು ತೋರಿಸಿದ ಅವಸರ ಒಬ್ಬ ಧೈರ್ಯಗುಂದಿದ  ನಾಯಕ ತಮ್ಮ ಮಯರ್ಾದೆಯನ್ನು ಎಲ್ಲಕಿಂತ ಹೆಚ್ಚಾಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡಿದ ರೀತಿಯಂತಿತ್ತು!
ಅಂದಹಾಗೆ ಶ್ರೀಮಾನ್ ಗಾಂಧಿಯವರ ಉಪವಾಸ ಕ್ರಿಯೆಯಲ್ಲಿ ಶ್ರೇಷ್ಟವಾದುದು ಏನೂ ಇರಲಿಲ್ಲ. ಅದೊಂದು ಕೀಳು ಹೊಲಸು ಕ್ರಿಯೆಯಾಗಿತ್ತು. ಅದು ಅಸ್ಪೃಶ್ಯರ ಒಳಿತಾಗಿರದೆ ಅವರ ಅವನತಿಯ ಉದ್ದೇಶ ಹೊಂದಿತ್ತು.  ಅಸಾಹಯಕ ಜನರ ಮೇಲೆ ನಡೆಸಿದ ಅಧಮ್ಯ ದೌರ್ಜನ್ಯ ಅದಾಗಿತ್ತು.   ಬ್ರಿಟಿಷ್ ಪ್ರಧಾನಮಂತ್ರಿ ಅಸ್ಪಶ್ಯರಿಗೆ  ನೀಡಲು ಉದ್ದೇಶಿಸಿದ್ದ ಸಾಂವಿಧಾನಿಕ ಸೌಲಭ್ಯಗಳನ್ನು ಕಿತ್ತುಕೊಂಡು, ಸವಣರ್ೀಯರ ಆಳ್ವಿಕೆಯಲ್ಲಿ  ಅಸ್ಪಶ್ಯರನ್ನು ಗುಲಾಮರನ್ನಾಗಿಸುವ ಉದ್ದೇಶಹೊಂದಿದ್ದ ಅಮರಣಾಂತ ಉಪವಾಸ ಅದಾಗಿತ್ತು. ಅದು ನೀಚ ಹಾಗು ದುಷ್ಟ ಕ್ರಿಯೆಯಾಗಿತ್ತು. ಇಂತಹ ವ್ಯಕ್ತಿಗಳನ್ನು ಪ್ರಾಮಾಣಿಕರೆಂದೂ, ನಂಬಲರ್ಹ ವ್ಯಕ್ತಿಗಳೆಂದೂ ಅಸ್ಪೃಶ್ಯರು ಹೇಗೆ ಹೇಳಲು ಸಾಧ್ಯ?
ಒಟ್ಟಿನಲಿ ಗಾಂಧೀಜಿಯವರು ನಬಂಬಲನರ್ಹ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿತ್ತು. ಅವರ ಡಬಲ್ ಗೇಮ್ನ ಹಿಂದಿರುವ ಸತ್ಯ ಇಡೀ ಜಗತ್ತಿಗೇ ಪರಿಚಯವಾಗಿತ್ತು. ಅಂದಹಾಗೆ ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳ ಬೇಕೆಂಬ ಧಾವಂತದಲ್ಲಿ ಗಾಂಧಿಯವರಿದ್ದರೆ ಈ ಸಂಧರ್ಭದಲ್ಲಿ ಅಂಬೇಡ್ಕರ್ ರವರ ಮನಸ್ಥಿತಿ ಹೇಗಿತ್ತು? ಅವರ ಮಾತುಗಳಲ್ಲೇ ಹೇಳುವುದಾದರೆ ನನ್ನ ಮಟ್ಟಿಗೆ ಹೇಳುವುದಾದರೆ ಅಂದು ನಾನು ಎದುರಿಸಿದ ಅತ್ಯಂತ ಗಂಭೀರ ಮತ್ತು ಅತೀವ ಉಭಯಸಂಕಟವನ್ನು ಬಹುಶಃ ಯಾರೂ ಎದುರಿಸಿರಲಿಕ್ಕಿಲ್ಲ. ಅದು ದಿಗ್ಭ್ರಮೆಗೊಳಿಸುವಂತಹ ಪ್ರಸಂಗವಾಗಿತ್ತು. ನನಗೆ ಎರಡು ಪರ್ಯಾಯ ಮಾರ್ಗಗಳಿದ್ದು ಅವುಗಳಲ್ಲಿ ನಾನು ಒಂದನ್ನು ಅನುಸರಿಸಬೇಕಾಗಿತ್ತು. ಮಾನವೀಯತೆಯ ದೃಷ್ಟಿಯಿಂದ ಗಾಂಧೀಜಿಯವರನ್ನು ಸಾವಿನ ದವಡೆಯಿಂದ ಪಾರುಮಾಡಬೇಕಾದ ಕರ್ತವ್ಯ ನನ್ನೆದುರಿಗಿತ್ತು, ಅಲ್ಲದೆ ಬ್ರಿಟಿಷ್ ಪ್ರಧಾನಿಯವರು ಅಸ್ಪೃಶ್ಯರಿಗೆ ಕೊಡಮಾಡಿದ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಹೊಣೆಯೂ ನನ್ನ ಮೇಲಿತ್ತು. ಕಡೆಗೆ ನಾನು ಮಾನವೀಯತೆಯ ಕರೆಗೆ ಓಗೊಟ್ಟೆ! ಶ್ರೀಮಾನ್ ಗಾಂಧಿಯವರಿಗೆ ಒಪ್ಪಿಗೆಯಾಗುವಂತೆ ಕೋಮುವಾರು ತೀಪರ್ಿನಲ್ಲಿ ಮಾಪರ್ಾಡುಮಾಡಲು ಒಪ್ಪಿಕೊಂಡೆ. ಈ ಒಪ್ಪಂದವನ್ನೆ ಪೂನಾ ಒಪ್ಪಂದ ಎಂದು ಕರೆಯಲಾಗಿದೆ.
ಹೀಗೆ ಗಾಂಧಿಜಿಯವರ ಪ್ರಾಣವನ್ನು ಉಳಿಸಲು ತನ್ನ ಜನರ ಹಿತವನ್ನೇ ಬಲಿಕೊಟ್ಟು  ಡಾ. ಅಂಬೇಡ್ಕರ್ರವರು 1932 ಸೆಪ್ಟೆಂಬರ್  24 ರಂದು ಪೂನಾ ಒಪ್ಪಂದಕ್ಕೆ  ಸಹಿಹಾಕಿದರು.
ನೆನಪಿರಲಿ, ಗಾಂಧೀಜಿ ಮತ್ತು ಅಂಬೇಡ್ಕರ್ರವರ ನಡುವೆ ನಡೆದ  ಈ ಒಪ್ಪಂದ ಕೂಡ ಅಂತರಾಷ್ಟೀಯ ಒಪ್ಪಂದವಾಗಿತ್ತು! ಖ್ಯಾತ ಚಿಂತಕ ವಿ.ಟಿ. ರಾಜಶೇಖರ್ ಜಾತಿಯನ್ನು ರಾಷ್ಟ್ರದೊಳಗಿನ ರಾಷ್ಟ್ರ ಎನ್ನುತ್ತಾರೆ ಈ ಪ್ರಕಾರ ಗಾಂಧೀಜಿಯವರು ಸವರ್ಣ ಹಿಂದೂ ರಾಷ್ಟ್ರದ ಪ್ರತಿನಿಧಿಯಾದರೆ ಅಂಬೇಡ್ಕರ್ರವರು ಅಸ್ಪೃಶ್ಯ ರಾಷ್ಟ್ರದ ಪ್ರತಿನಿಧಿಯಾಗಿದ್ದರು!
ಗಾಂಧೀಜಿಯವರೇನೋ ರಾಜಕೀಯ ಹೋರಾಟದ ಕಾರಣಕ್ಕಾಗಿ ಅದಾಗಲೇ ಮಹಾತ್ಮ ಎನಿಸಿಕೊಂಡಿದ್ದರು. ಆದರೆ ಅಂಬೇಡ್ಕರ್? ನಿಸ್ಸಂಶಯವಾಗಿ ಈ ಒಪ್ಪಂದದ ನಂತರ ಅವರು ಅಸ್ಪೃಶ್ಯರ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಿದರು.  ಮಹಾತ್ಮ ಗಾಧಿಜಿಯವರೇ ತಮ್ಮ ನೈಜ ವ್ಯಕ್ತಿತ್ವವನ್ನು ಪ್ರದರ್ಶನಕಿಟ್ಟು ಅಸ್ಪೃಶ್ಯರ ವಿರುದ್ಧವೇ ಉಪವಾಸ ಕೂರಬೇಕಾದ ಸಂಧಿಗ್ಧ ಸಂಧರ್ಭ ಸೃಷ್ಟಿಸಿದ ಅಂಬೇಡ್ಕರರ ತಂತ್ರ ಜಗತ್ತಿನಾದ್ತದ್ಯಂತ ಪ್ರಸಂಶೆಗೆ ಒಳಗಾಯಿತು.
ಇರಲಿ, ಈ ಒಪ್ಪಂದದಿಂದ ಅಸ್ಪೃಶ್ಯರಿಗೆ ದಕ್ಕಿದ್ದಾದ್ದರೂ ಎನು? ಕೋಮುವಾರು ತೀಪರ್ಿನಲ್ಲಿ ಪ್ರಸ್ತಾಪಿಸಿದ್ದ ಅಸ್ಪೃಶ್ಯರಿಗೆ ಸಮಾನ ನಾಗರೀಕ  ಹಕ್ಕುಗಳನ್ನು ನೀಡುವ , ಸಕರ್ಾರಿ ಉದ್ಯೋಗಗಳಲ್ಲಿ  ಮೀಸಲಾತಿ ನೀಡುವ ತೀಮರ್ಾನಗಳನ್ನು  ಈ ಒಪ್ಪಂದ ಉಳಿಸಿಕೊಂಡಿತ್ತು. ಹಾಗೆಯೇ  ಮೀಸಲು ಕ್ಷೇತ್ರಗಳು ಕೂಡ ದೊರಕಿತ್ತು. ಕೊರತೆ ಏನೆಂದರೆ ಅಸ್ಫೃಶ್ಯರಿಗೆ ನೀಡಲಾಗಿದ್ದ ಆ ಪವಿತ್ರ ಎರಡು ಓಟು ಹಾಕುವ ಹಾಗು ಪ್ರತ್ಯೇಕ ಮತದಾನ ಪದ್ಧತಿಯನ್ನು ಕಿತ್ತುಕೊಳ್ಳಲಾಗಿತ್ತು. ಅಮೃತ ಸಮಾನವಾಗಿದ್ದ ಇವು ಅಸ್ಪೃಶ್ಯರಿಗೆ ಧಕ್ಕದಂತೆ ತಡೆಯುವಲ್ಲಿ ಗಾಂಧಿಯವರು ನಡೆಸಿದ ಆ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿತ್ತು.
ಒಂದಂತು ನಿಜ, ಬಾಯಲ್ಲಿ ಅಸ್ಪೃಶ್ಯೋದ್ಧಾರದ ಮಂತ್ರ, ಬಗಲಲ್ಲಿ ಅವರನ್ನು ಸದೆಬಡಿಯಲು ದೊಣ್ಣೆ ಹಿಡಿಯುವ ಗಾಂಧೀಜಿಯವರ ತಂತ್ರ ಪೂನಾ ಒಪ್ಪಂದದ ಮೂಲಕ ಬೀದಿಗೆ ಬಂದಿತ್ತು. ಅವರ ಈ ತಂತ್ರವನ್ನು ನೋಡಿಯೇ ಅಂಬೇಡ್ಕರ್ರವರು ಅವರನ್ನು ಯಶಸ್ವಿ ನಯವಂಚಕ ಎಂದಿರುವುದು. ಹೀಗಿರುವಾಗ ಅವರು ಅಂದರೆ ಗಾಂಧೀಜಿಯವರು ಅಸ್ಪೃಶ್ಯರಿಗೆ ಮಹಾತ್ಮ ಹೇಗಾಗುತ್ತಾರೆ? ಬೇಕಿದ್ದರೆ ಅವರು ಸವರ್ಣ ಹಿಂದೂಗಳ ಲೋಕದ ಮಹಾತ್ಮರಾಗಬಹುದು . ಅಸ್ಪೃಶ್ಯ ಲೋಕಕ್ಕಂತೂ ಖಂಡಿತ ಅಲ್ಲ!
ರಘೋತ್ತಮ ಹೊ. ಬ.
ಚಾಮರಾಜನಗರ
ಮೊ: 9481189116

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: