ಬಿಜೆಪಿಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್?


ಕಳೆದ ವಾರ ರಾಜ್ಯದ ರಾಜಕೀಯದಲ್ಲಿ ನಡೆದ ಘಟನೆಗಳು ಯಾರ ತರ್ಕಕ್ಕೂ
ನಿಲುಕದ್ದಾಗಿತ್ತು. ಒಂದಕ್ಕೊಂದರಂತೆ ನಡೆದ ಘಟನೆಗಳು ರಾಜಕೀಯದ ಬಗ್ಗೆ  ಜನರಿಗೆ ರೇಜಿಗೆ
ಹುಟ್ಟಿಸುವಂತ್ತಿದ್ದರೆ ರಾಜಕಾರಣಿಗಳಿಗೆ ಅಂತಹ ಬೆಳವಣಿಗೆಗಳು ಮೋಜಿನ ಆಟದಂತ್ತಿದ್ದವು.
ಅಂತಿಮವಾಗಿ ಆ ಅಟದಲ್ಲಿ ಗೆದ್ದದ್ದು ಹಣದ ಥೈಲಿಯೇ ಹೊರತು ಜನರ ನಿರೀಕ್ಷೆಗಳಲ್ಲ.
ಕುತೂಹಲಕರವೆಂದರೆ  ಆಳುವವರ ಮತ್ತು ವಿರೋಧಿಗಳ ನಡುವೆ ನಡೆದ  ಆ ಹಾವು ಏಣಿ ಯಾಟದಲ್ಲಿ
ಆಳುವವರ ಗೆಲುವಿಗೆ ವಿರೋಧಿಗಳೇ ‘ಕೈ’ ಜೋಡಿಸಿದರು ಅಂದರೆ ಅಚ್ಚರಿಯಾಗಬಹುದು! ಕಳೆದ ವಾರ
ನಡೆದ ರಾಜಕೀಯ ಬೆಳವಣಿಗೆಗಳು ಆಸಕ್ತಿದಾಯಕವೆನಿಸುವುದು ಇಂತಹ ಕಾರಣಕ್ಕೇ. ನೀ ಒದ್ದಂಗ್
ಮಾಡು, ನಾ ಬಿದ್ದಂಗ್ ಮಾಡ್ತೀನಿಎಂಬ  ಆಳುವ ಮತ್ತು ವಿರೋಧಿಗಳ ನಡುವಣ ಇಂತಹ ಒಳ
ಒಪ್ಪಂದದಾಟಕ್ಕೆ. ಅಂದಹಾಗೆ ಆಳುವ ಸ್ಥಾನದಲ್ಲಿ ನಿಂತು ಅಂತಹ  ರಾಜಕೀಯದಾಟಕ್ಕೆ
ತೊಡೆತಟ್ಟಿದ್ದು  ರಾಜ್ಯ ಬಿಜೆಪಿ ಸಕರ್ಾರ. ವಿರೋಧಿಗಳ ಸ್ಥಾನದಲಿ ನಿಂತು ಅಂತಹ  ಆಟದಲ್ಲಿ
ತೊಡೆತಟ್ಟುವ ಬದಲು  ಆಳುವ ಸಕರ್ಾರದ ಬೆನ್ನು ತಟ್ಟಿದ್ದು ಕೇಂದ್ರದ ಕಾಂಗ್ರೆಸ್ ಹೈ ಕಮಾಂಡು!       ಅಕ್ಷರಶಃ ನಿಜ, ಟಿವಿ ಮುಂದೆ ಕುಳಿತಿದ್ದವರಿಗೆ ಸಚಿನ್  ಲಾಸ್ಟ್ ಬಾಲ್ನಲ್ಲಿ
ಸಿಕ್ಸರ್ ಹೊಡೆದು ಪಂದ್ಯ ಗೆಲ್ಲಿಸಿದಂಗೆ, ಇನ್ನೇನು ಸಕರ್ಾರ ಬಿದ್ದು ಹೋದಂಗೆ ಎಂದು ಬೆಂಚಿನ
ಅಂಚಿನಲ್ಲಿ ಕುಳಿತು ಉಸಿರು ಬಿಗಿಹಿಡಿದು ಕುಳಿತ ಅನುಭವ. ಆದರೆ  ‘ಮ್ಯಾಚ್ ಫಿಕ್ಸಿಂಗ್’
ಆಗಿರುವುದು ಪ್ರೇಕ್ಷಕರಿಗೇನು ಗೊತ್ತು? ಅದಕ್ಕೆ ಸಚಿನ್ ಸಿಕ್ಸರ್ ಹೊಡೆಯಲಲ್ಲ. ಯಡಿಯೂರಪ್ಪ
ಬೀಳಲಿಲ್ಲ! ಅಂದಹಾಗೆ ಈ ಸಂಧರ್ಭದಲಿ ಸಚಿನ್ ಸ್ಥಾನದಲಿದ್ದದ್ದು ಜಾದಳದ ಯುವ ಮುಂದಾಳು
ಹೆಚ್.ಡಿ.ಕುಮಾರಸ್ವಾಮಿಯವರು. ಮತ್ತು ಅವರನ್ನು ಬೆಂಬಲಿಸಬೇಕಾದ ಧೋನಿಯ ಸ್ಥಾನದಲ್ಲಿ ಮ್ಯಾಚ್
ಫಿಕ್ಸಿಂಗ್ ಮಾಡಿಕೊಂಡು ನಿಂತದ್ದು ಕಾಂಗ್ರೆಸ್!  ಕಾಂಗ್ರೆಸ್ನ ಈ ಇಬ್ಬಂದಿತನದಿಂದಾಗಿ,
ಮೋಸದಾಟದಿಂದಾಗಿ  ರಾಜ್ಯ ಬಿಜೆಪಿ ಸಕರ್ಾರ ತೊಲಗಲಿಲ್ಲ, ‘ಕುಮಾರಣ್ಣನ’ ಪೌರುಷ ಫಲ
ನೀಡಲಿಲ್ಲ.        ಹಾಗಿದ್ದರೆ ಕಾಂಗ್ರೆಸ್ ಹಾಗೇಕೆ ಮಾಡಿತು? ಯಡಿಯೂರಪ್ಪನವರನ್ನು ಮಟ್ಟಹಾಕುವ
ಸುವಣರ್ಾವಕಾಶವನ್ನು ಬದಿಗಿಟ್ಟು, ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿಟ್ಟು ಅವರಿಗೇಕೆ
ವಾಪಸ್ ಕೊಟ್ಟಿತು?  ಬಹುಶಃ ಈ ಪ್ರಶ್ನೆಗಳಿಗೆ  ಕ್ಷಣಿಕದ ಕಾರಣವಂತು ಉತ್ತರವಾಗಿರಲು
ಸಾಧ್ಯವೇ ಇಲ್ಲ.  ರಾಷ್ಟ್ರಾದ್ಯಂತ ‘ಇವೆರಡರ’  ನಡುವೆ ಇರಬಹುದಾದ ಒಳ ಒಪ್ಪಂದದ ‘ಅಜೆಂಡಾ’
ಕೆಲಸ ಮಾಡಿರಬಹುದಾದ ಸಾಧ್ಯತೆ ಖಂಡಿತಾ ಇದೆ.  ಅಂತಹ ಅಜೆಂಡಾ ಅಯೋಧ್ಯೆಯ ಬ್ರಾಬ್ರಿ
ಮಸೀದಿಯನ್ನೂ ಒಡೆದು ಹಾಕಿದೆ,   ದಶಕಗಳಿಂದ ಗುಜರಾತಿನ ನರೇಂದ್ರ ಮೋದಿಯವರನ್ನು ರಕ್ಷಿಸಿದೆ.
ಈಗ ರಾಜ್ಯದಲ್ಲಿ ಯಡಿಯೂರಪ್ಪನವರ  ಸಕರ್ಾರವನ್ನೂ ಕೂಡ ರಕ್ಷಿಸಿದೆ ಅಷ್ಟೆ!        ಇಂತಹ ಅನುಮಾನ ಯಾಕೆ ಹುಟ್ಟುತ್ತಿದೆ ಅಂದರೆ ವಾಜಪೇಯಿ ಸಕರ್ಾರದಲ್ಲಿ ನೇಮಕವಾದ
ನ್ಯಾಯಮೂತರ್ಿ ಎಂ.ಎನ್.ವೆಂಕಟಾಚಲಯ್ಯನವರ ನೇತೃತ್ವದ ಸಂವಿಧಾನ ಪರಾಮರ್ಶ ಆಯೋಗ ಶಿಫಾರಸ್ಸು
ಮಾಡಿದ್ದು ಈಗಿರುವ ಬಹುಪಕ್ಷ ಪದ್ಧತಿಯ ಬದಲು ದ್ವಿಪಕ್ಷ ಪದ್ಧತಿಯನ್ನು.  ಅಂದರೆ ರಾಷ್ಟ್ರ
ರಾಜಕೀಯದಲ್ಲಿ  ಕೇವಲ ಎರಡೇ ಪಕ್ಷಗಳಿರಬೇಕು ಎಂಬ ಪಾಶ್ಚಾತ್ಯ ಮಾದರಿಯನ್ನು. ಅಕಸ್ಮಾತ್
ಹಾಗೇನಾದರು ಮಾಡಿದ್ದರೆ ಅಲ್ಲಿ ಉಳೀಯತ್ತಿದ್ದ ಎರಡು ಪಕ್ಷಗಳಾದರೂ ಯಾವುವು? ಅಕ್ಷರಶಃ ನಿಜ,
ಅದು ಒಂದು ಕಾಂಗ್ರೆಸ್ ಮತ್ತೊಂದು ಬಿಜೆಪಿಯಲ್ಲದೆ  ಬೇರಾವುದೇ ಪಕ್ಷಗಳಲ್ಲ!       ಪ್ರಶ್ನೆಯೇನೆಂದರೆ ಜಾತ್ಯಾತೀತವಾದದ ಮುಖವಾಡ ಹೊತ್ತಿರುವ ಸೌಮ್ಯ ಕೋಮುವಾದಿ
ಕಾಂಗ್ರೆಸ್ ಮತ್ತು ಉಗ್ರ ಕೋಮುವಾದಿ ಬಿಜೆಪಿಗಳೆರಡರಿಂದ ಬಹುಜಾತೀಯ, ಬಹುಧಮರ್ೀಯ,
ಬಹುಸಂಸ್ಕೃತಿಯ  ಭಾರತಕ್ಕೆ ನೈಜ ಸಂವಿಧಾನ ಬದ್ಧ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿದೆಯೆ?
ಖಂಡಿತ ಇಲ್ಲ.  ಹಾಗೇನಾದರೂ ಇದ್ದಿದ್ದರೆ ಬಾಬ್ರಿ ಮಸೀದಿ ಖಂಡಿತ ಒಡೆಯುತ್ತಿರಲಿಲ್ಲ.
ಗುಜರಾತಿನ ನರೇಂದ್ರ ಮೋದಿ ಸಕರ್ಾರ ದಶಕಗಳಷ್ಟು ಕಾಲ ಅಧಿಕಾದಲ್ಲಿ ಮುಂದುವರಿಯುತ್ತಿರಲಿಲ್ಲ.
ಕಲ್ಯಾಣ್ ಸಿಂಗ್ರಂತಹ ಅತ್ಯುಗ್ರ ಕೋಮುವಾದಿ  ರಾಜಕೀಯದಲ್ಲಿ ಮೂಲೆಗುಂಪಾಗಲು ಸಾಧ್ಯವೇ
ಇರುತ್ತಿರಲಿಲ್ಲ.       ಆದರೆ? ಬಿಜೆಪಿಯ ಇಂತಹ ಆಟಾಟೋಪಗಳಿಗೆ ಅಲ್ಲಲ್ಲಿ ಬ್ರೇಕ್ ಹಾಕುತ್ತಿರುವುದು
ರಾಜ್ಯದಲ್ಲಿ ಪ್ರಸ್ತುತ ಜೆ.ಡಿ.ಎಸ್ ಮಾಡುತ್ತಿರುವಂತೆ  ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು.
ಒಂದಷ್ಟು ನಿದರ್ಶನ ನೀಡುವುದಾದರೆ ಉತ್ತರಪ್ರದೇಶದಲ್ಲಿ ಬಿ.ಎಸ್.ಪಿ. ಮತ್ತು
ಎಸ್.ಪಿಗಳಿಲ್ಲದಿದ್ದರೆ  ಕಾಂಗ್ರೆಸ್ ಕಲ್ಯಾಣ್ಸಿಂಗರನ್ನು ಕುಚರ್ಿಯಿಂದ
ಕಿತ್ತೆಸೆಯುವುದಿರಲಿ ಅಲುಗಾಡಿಸಲು ಕೂಡ ಸಾಧ್ಯವಿರುತ್ತಿರಲಿಲ್ಲ. ಎನ್ಸಿಪಿಯಂತಹ
ಪ್ರಾದೇಶಿಕ ಪಕ್ಷ ಬೆಳೆಯದ್ದಿದ್ದಲ್ಲಿ  ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಿಜೆಪಿ ಶಿವಸೇನೆಯ
ಮೈತ್ರಿ ಸಕರ್ಾರವನ್ನು ಮುಟ್ಟುವುದಿರಲಿ  ಕಣ್ಣೆತ್ತಿ ನೋಡಲು ಸಹ ಸಾಧ್ಯವಿರುತ್ತಿರಲಿಲ್ಲ.
ಹಾಗೆಯೇ ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳು, ತಮಿಳುನಾಡಿನಲ್ಲಿ ಡಿಎಂಕೆ
ಎಡಿಎಂಕೆಯಂತಹ  ಪ್ರಾದೇಶಿಕ ಶಕ್ತಿಗಳು ಬಿಜೆಪಿಯನ್ನು ತಲೆ ಎತ್ತದಂತೆ ಮಾಡಿವೆ.
ದುರಂತವೆಂದರೆ ಈ ಎಲ್ಲಾ ಪ್ರಾದೇಶಿಕ ಶಕ್ತಿಗಳಿಗೆ  ಕಾಂಗ್ರೆಸ್ ಬಿಜೆಪಿಗೆ ಕೊಡುವುದಕ್ಕಿಂತ
ಹೆಚ್ಚಿನ ತೊಂದರೆ ಕೊಟ್ಟಿದೆ!       ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಈಗಲೂ  ಆ ಪಕ್ಷದ ಅಧಿನಾಯಕ  ರಾಹುಲ್ ಗಾಂಧಿ
ಬಿಎಸ್ಪಿಯ ಅಧಿನಾಯಕಿ ಮಾಯಾವತಿಯವರಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಮಾತೆತ್ತಿದರೆ ಬಿಎಸ್ಪಿ
ಸಕರ್ಾರದ ವಿರುದ್ಧ ಕತ್ತಿ ಝಳಪಿಸುವ ರಾಹುಲ್ ಗುಜರಾತಿನ ನರೇಂದ್ರ ಮೋದಿಯ ವಿರುದ್ಧ,
ಮಧ್ಯಪ್ರದೇಶದ ಶಿವರಾಜ್ಸಿಂಗ್ ಚೌಹಾಣ್ ವಿರುದ್ಧ, ಕನರ್ಾಟಕದ ಯಡಿಯೂರಪ್ಪನವರ ವಿರುದ್ಧ ಅಂತಹ
ರೋಷ ಪ್ರದಶರ್ಿಸಲು ಹೋಗಿಲ್ಲ!       ಹಾಗಿದ್ದರೆ ಇದರ ಅರ್ಥವಾದರೂ ಏನು?  ಬಿಜೆಪಿ  ಅಡಳಿತಕ್ಕೆ  ಕಾಂಗ್ರೆಸ್ ಒಳಗೊಳಗೆ
ಬೆಂಬಲ ನೀಡುತ್ತಿದೆ ಎಂದೇ ಅಲ್ಲವೆ. ಅಕಸ್ಮಾತ್ ನಿಮಗೆ ಆಳಲು ಸಾಧ್ಯವಿಲ್ಲ ಎಂದರೆ ಹೇಳಿ
ಒಂದಷ್ಟು ದಿನ ನಾವೇ ಆಳಿ ಮತ್ತೆ ನಿಮಗೆ ಅಧಿಕಾರವನ್ನು ವಾಪಸ್ ಕೊಡುತ್ತೇವೆ ಎಂಬ ಒಳಒಪ್ಪಂದ
ಈ ಸಂಧರ್ಭದಲಿ ಇದ್ದರೂ ಇರಬಹುದು.  ರಾಜಸ್ಥಾನ, ಮಧ್ಯ ಪ್ರದೇಶಗಳ ಪರಸ್ಪರ ಅಧಿಕಾರ ಹಸ್ತಾಂತರ
ಇಂತಹ ‘ಒಳ ಒಪ್ಪಂದ’ಕ್ಕೆ ಸಾಕ್ಷಿ ಒದಗಿಸುತ್ತವೆ.        ವಸ್ತುಸ್ಥಿತಿ ಹೀಗಿರುವಾಗ ಜನ ಯಾರನ್ನು ನಂಬಬಹುದು? ಕುಮಾರಸ್ವಾಮಿಯವರನ್ನೋ?
ದೇಶಪಾಂಡೆಯವರನ್ನೋ? ಅಥವಾ ಯಡಿಯೂರಪ್ಪನವರನ್ನೋ? ಅಕ್ಷರಶಃ ನಿಜ, ಕುಮಾರಸ್ವಾಮಿಯನವರನ್ನ.
ದೇಶಪಾಂಡೆ ಮತ್ತು ಯಡಿಯೂರಪ್ಪನವರನ್ನ? ಆಗಿದೆಯಲ್ಲಾ ಆಗಲೇ ಒಳ ಒಪ್ಪಂದ! ಆದ್ದರಿಂದ ಇಬ್ಬರಲಿ
ಯಾರನ್ನು ನಂಬಿದರೂ ಅಷ್ಟೆಯೇ. ಯಡಿಯೂರಪ್ಪಾ ಅಂದರೂ ದೇಶಪಾಂಡೇನೇ , ದೇಶಪಾಂಡೆ ಅಂದರೂ
ಯಡಿಯೂರಪ್ಪನೇ!     ಖಂಡಿತ, ಕಾಂಗ್ರೆಸ್ ಮತ್ತು ಬಿಜೆಪಿಗಳ ಇಂತಹ ‘ಒಳ ಒಪ್ಪಂದ ‘ವನ್ನು  ಇಲ್ಲಿ ಯಾಕೆ
ಪ್ರಸ್ತಾಪಿಸಬೇಕಾಯಿತೆಂದರೆ ಕಳೆದ ವಾರ ರಾಜ್ಯದ ರಾಜಕೀಯದಲಿ ನಡೆದ ಮೇಲಾಟದಲಿ ಕಾಂಗ್ರೆಸ್
ಹೈಕಮಾಂಡ್ ನಡೆದುಕೊಂಡ ರೀತಿಯಿಂದ, ನೀತಿಯಿಂದ, ಜನರ ಕಣ್ಣಿಗೆ ಮಣ್ಣೆರಚುವ ಅದರ
ಇಬ್ಬಂದಿತನದಿಂದ. ಏಕೆಂದರೆ  ಬಹುಮತ ಸಾಬೀತಿನಲಿ ಗೋಂದಲ ವುಂಟಾಗಿ ಬಿಜೆಪಿ ಧ್ವನಿಮತದ ಮೂಲಕ
ಬಹುಮತ ಸಾಬೀತುಪಡಿಸಿತು ಎಂದಾಗಲೇ  ಅಲ್ಲಿ ರಾಷ್ಟ್ರಪತಿ ಆಳ್ವಿಕೆಯ ಕಮಟು ವಾಸನೆ ಎಲ್ಲರಿಗೂ
ಬಡಿದಿತ್ತು. ಸ್ವತಃ ಬಂಡಾಯ ಗುಂಪಿನ ನಾಯಕ  ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದು
ಕೂಡ ಇದನ್ನೇ ನಮ್ಮ ಸದಸ್ಯತ್ವ ರದ್ದಾದರೆ ರಾಷ್ಟ್ರಪತಿ ಆಳ್ವಿಕೆ ನಿಶ್ಚಿತ ಎಂದು. ಅದರೆ?
ಆದದ್ದೇನು?  ಬಂಡಾಯ ಶಾಸಕರ ಸದಸ್ಯತ್ವ ರದ್ದಾಗುವ ಸಂಧರ್ಭ ಸೃಷ್ಟಿಯಾಯಿತೇ ಹೊರತು
ರಾಷ್ಟ್ರಪತಿ ಆಳ್ವಿಕೆಯಂತು ಬರಲೇ ಇಲ್ಲ.  ಹಾಗಿದ್ದರೆ ಬಂಡಾಯ ಶಾಸಕರ  ಮತ್ತು ಆ ಬಂಡಾಯದ
ನೇತೃತ್ವ ವಹಿಸಿದ್ದ  ಕುಮಾರಸ್ವಾಮಿಯವರ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಕೇಂದ್ರದ
ಕಾಂಗ್ರೆಸ್ ಹೈಕಮಾಡು ಮತ್ತದರ ಲಜ್ಜೆಗೆಟ್ಟ  ನಾಯಕರುಗಳು.        ನಿಜ, ತಮ್ಮ ಆ ನಡೆಗೆ ಕಾಂಗ್ರೆಸ್ಸಿಗರು  ಒಬಾಮಾನೊ ಇನ್ಯಾರೊ ತಿಮ್ಮಪ್ಪನೋ
ಬರುತ್ತಿರುವುದು ಕಾರಣವೆಂದು  ಬೂಸಿಬಿಡುತ್ತಿರಬಹುದು.  ಆದರೆ? ಬಲ್ಲ ಮೂಲಗಳ ಪ್ರಕಾರ
ಬಿಜೆಪಿಗೆ ನೀಡಿದ ಅಂತಹ ಎರಡನೇ ಬಾರಿಯ ಬಹುಮತ ಸಾಬೀತಿಗೆ ಸೋನಿಯಾ ಸುಷ್ಮಾ ಸ್ನೇಹ
ಕಾರಣವಂತೆ! ಅಣು ಬಾದ್ಯತಾ ಒಪ್ಪಂದಕ್ಕೆ ಬಿಜೆಪಿ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಕಾಂಗ್ರೆಸ್
ನೀಡಿದ ಉಡುಗೊರೆಯಂತೆ ಅದು!       ಚೆನ್ನಾಗಿದೆ ಕಾಂಗ್ರೆಸ್ ಬಿಜೆಪಿಗಳ ಈ ಕೊಡುಕೊಳ್ಳುವಿಕೆ ಆಟ. ನಾವು
ಅಧಿಕಾರದಲ್ಲಿದ್ದಾಗ ನಿಮಗೇನು ಬೇಕೊ ಅದನ್ನು ನಾವು ಕೊಡುತ್ತೀವಿ, ನೀವು ಅಧಿಕಾರದಲ್ಲಿದ್ದಾಗ
ನಮಗೇನು ಬೇಕೊ ಅದನ್ನು ನೀವು ಕೊಡಿ. ಆ ಮೂರನೆಯವರಿದ್ದಾರಲ್ಲಾ ಅವರು ಯಾರಾದರೂ ಸರಿ ಅವರಿಗೆ
ಏನೂ ಸಿಗುವುದು ಬೇಡ!  ಕಾಂಗ್ರೆಸ್ ಬಿಜೆಪಿಗಳ ಇಂತಹ ಒಪ್ಪಂದದ ಧೋರಣೆಯಿಂದಾಗಿಯೇ  ಜಾದಳದ
ಕುಮಾರಸ್ವಾಮಿಯವರು ಅಕ್ಷರಶಃ ಇಂದು ಅಪರಾಧಿ ಸ್ಥಾನದಲ್ಲಿ ನಿಂತಿರುವುದು.        ತಪ್ಪು, ಕಾಂಗ್ರೆಸ್ಸಿಗರು  ಹಾಗೇನಾದರೂ ತಿಳಿದುಕೊಂಡಿದ್ದರೆ ಅದು ಖಂಡಿತ ತಪ್ಪು.
ಕೆಲವರ ದೃಷ್ಟಿಯಲ್ಲಿ ‘ಕುಮಾರಣ್ಣ’ ಅಪರಾಧಿ ಸ್ಥಾನದಲಿ ನಿಂತಿರಬಹುದು. ಆದರೆ  ಬಹುಸಂಖ್ಯಾತರ
ದೃಷ್ಟಿಯಲಿ?  ಕೇವಲ 28 ಶಾಸಕರನ್ನಿಟ್ಟುಕೊಂಡು ಆಟ ಕಟ್ಟಿದ ಅವರ ಆ ಪರಿ ಅದ್ಭುತ. ಕ್ಷಣ
ಕ್ಷಣಕ್ಕೂ ಯಡಿಯೂರಪ್ಪನವರನ್ನು ಅಧಿಕಾರದಂಚಿಗೆ ದೂಡಿದ ಅವರ ಆ ಪರಿ ಮೆಚ್ಚುವಂತದ್ದು. ಆದರೆ
ಸೈದ್ಧಾಂತಿಕವಾಗಿ ಅದು ಕೋಮುವಾದಿಯಾದರೂ ಸರಿ ಎರಡೇ ಪಕ್ಷಗಳಿರಬೇಕೆಂಬ ಸಿದ್ಧಾಂತಕ್ಕೆ
ಕಟ್ಟುಬಿದ್ದಿರುವ ಕಾಂಗ್ರೆಸ್ ಕುಮಾರಸ್ವಾಮಿಯವರ ಈ ವೀರಾವೇಶದ ನಡೆಯನ್ನು ಒಪ್ಪುತ್ತದೆಯೇ?
ಮೆಚ್ಚುತ್ತದೆಯೇ? ಖಂಡಿತ ಇಲ್ಲ. ಒಂದರ್ಥದಲಿ ಯಡಿಯೂರಪ್ಪನವರಿಗಿಂತ ಕುಮಾರಸ್ವಾಮಿಯವರನ್ನು
ತುಳಿಯುವುದು ಹೇಗೆ ಎಂದು ಅದು  ಚಿಂತಿಸುತ್ತಿರುತ್ತದೆ! ರಾಜ್ಯಪಾಲರ ಮೂಲಕ ಎರಡನೇ ಬಾರಿಗೆ
ಬಹುಮತ ಸಾಬೀತಿಗೆ ರಾಜ್ಯ ಬಿಜೆಪಿ ಸಕರ್ಾರಕ್ಕೆ ಕೇಂದ್ರದ ಕಾಂಗ್ರೆಸ್  ಅವಕಾಶ ನೀಡಿದ್ದು ಈ
ಕಾರಣಕ್ಕೆ. ಇನ್ಯಾವ ಒಬಾಮಾ ಬರುವುದೂ ಅಲ್ಲ ತಿಮ್ಮಪ್ಪ ಬರುವುದೂ ಅಲ್ಲ.     ಇದಕ್ಕೇ ಹೇಳಿದ್ದು ರಾಜ್ಯದ ರಾಜಕೀಯದಲ್ಲಿ ಕಳೆದ ವಾರ ನಡೆದ ಬೆಳವಣಿಗೆಗಳಲ್ಲಿ
ಕಾಂಗ್ರೆಸ್ ಬಿಜೆಪಿಯನ್ನು ಅಕ್ಷರಶಃ ಬೆಂಬಲಿಸಿದೆ, ಬಿಜೆಪಿ ಸಕರ್ಾರ ಉಳಿಸಲು ಹೊರಗಿನಿಂದ
ಬೆಂಬಲ ಸಹ ನೀಡಿದೆ! ಹೀಗಿರುವಾಗ ಈಗ ಮತ್ತೆ ಕೇಳಿಬರುತ್ತಿರುವ ಆಪರೇಷನ್ ಕಮಲವನ್ನು
ವಿರೋಧಿಸುವ ನೈತಿಕತೆಯಾದರೂ  ಕಾಂಗ್ರೆಸ್ಗೆ ಎಲ್ಲಿದೆ? ಕೇಂದ್ರದ ಕಾಂಗ್ರೆಸ್ ಹೈಕಮಾಂಡ್ ಈ
ನಿಟ್ಟಿನಲಿ ಮುಂದಡಿ ಇಡಲಿ. ತನ್ನ ಎಲ್ಲಾ 73 ಶಾಸಕರನ್ನು ಬಿಜೆಪಿಗೆ ಹೋಲ್ ಸೇಲಾಗಿ
ಸೇರಿಸಲಿ.  ತನ್ಮೂಲಕ ತಾನು ನೀಡುತ್ತಿರುವ ಆಂತರಿಕ ಬೆಂಬಲವನ್ನು ಬಿಜೆಪಿಗೆ ಬಹಿರಂಗವಾಗಿ
ನೀಡಲಿ. ಹಾಗೆಯೇ ರಾಜ್ಯದ ಜನತೆಗೆ  ತನ್ನ ನಿಜಬಣ್ಣ(ಕೇಸರಿ?) ತೋರಲಿ.

ರಘೋತ್ತಮ ಹೊ.ಬ

ಚಾಮರಾಜನಗರ

Advertisements

2 Responses to ಬಿಜೆಪಿಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್?

  1. c.venketesha says:

    all theragu best..ragu.nimma anthavaru patrikodyamakke bara beku

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: