ಸಮಾನತೆಯ ಸಂಕೇತ


ಸಮಾನತೆಯ ಸಂಕೇತ
– ಡಾ. ಬಸವಪ್ರಭು ಪಾಟೀಲ, ಬೆಟ್ಟದೂರು
ನಾವು ಈಗ ಬಸವಣ್ಣನವರನ್ನು ಮರೆತಿದ್ದೇವೆ. ಅದರರ್ಥ ಗಾಂಧಿ – ಮಾರ್ಕ್ಸ್ ಅಂಬೇಡ್ಕರ್ ನೆನಪಿದ್ದಾರೆ ಎಂದಲ್ಲ.

ಭಾರತದ ಸಂದರ್ಭದಲ್ಲಿ ಧರ್ಮವೆಂದರೆ ದೇವಸ್ಥಾನ, ಪೂಜೆ, ಯಜ್ಞ, ಹೋಮ ಇತ್ಯಾದಿಗಳು ಎಂಬ ಭಾವನೆ ಇತ್ತು. ಇಂತಹ ಭಾವನೆ ಈಗಲೂ ಇದೆ. ಬಸವಣ್ಣನವರು ಸ್ಥಾಪನೆ ಮಾಡಿದ ಧರ್ಮ ಇಂಥದ್ದಲ್ಲ. ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಿದ ಅಂತ್ಯಜರಿಗೆ ಲಿಂಗ ದೀಕ್ಷೆ ನೀಡುವ ಮೂಲಕ ಸಮಾನತೆ ತಂದರು. ಲಿಂಗಾಯತ ಎಂಬುದು ಧರ್ಮವೂ ಅಲ್ಲ; ಜಾತಿಯೂ ಅಲ್ಲ. ಅದು  ಒಂದು ಮಾರ್ಗ (ಈಗ ಅದನ್ನು ಕೆಲವರು ಜಾತಿ ಮಾಡಲು ಯತ್ನಿಸುತ್ತಿದ್ದಾರೆ). 

ಅಂಬೇಡ್ಕರ್ ಅವರು ಅಂತ್ಯಜರ ವಿಮೋಚನೆಗೆ ಹೋರಾಟ ಮಾಡಿದರೆ, ಬ್ರಾಹ್ಮಣರ ಕುಲದಲ್ಲಿ ಜನಿಸಿದ ಬಸವಣ್ಣ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ತುಂಬಿದರು. ಅಂತ್ಯಜರನ್ನು ಅಪ್ಪ,ಅಣ್ಣ, ಬೊಪ್ಪ, ಬೆಕ್ಕಯ್ಯ ಎಂದು ಕರೆದರು. ಇದನ್ನು ಅವರು ಪ್ರಚಾರಕ್ಕಾಗಿ ಮಾಡಲಿಲ್ಲ. ಅಂತ್ಯಜರ ನೋವು ನಲಿವುಗಳಿಗೆ ಬಸವಣ್ಣನವರ ಅಂತಃಕರಣ ಮಿಡಿಯಿತು. ಅಂತ್ಯಜರು ವಚನಕಾರರಾಗಿ ಅನುಭವ ಮಂಟಪದಲ್ಲಿ ಕಾಣಿಸಿಕೊಂಡರು.

ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಡಿದರೆ ಬಸವಣ್ಣನವರು ವೈದಿಕತೆ ವಿರುದ್ಧ ಹೋರಾಟ ಮಾಡಿದರು. ಶಾಸ್ತ್ರಗಳ ಕಪಿ ಮುಷ್ಟಿಯಲ್ಲಿ ಸಿಲುಕಿದ್ದ ಜನ ಸಾಮಾನ್ಯರನ್ನು ಬಸವಣ್ಣನವರು  ಬಿಡುಗಡೆಗೊಳಿಸಿದರು. ಇದು ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತ ದೊಡ್ಡದು. ಈ ಹೋರಾಟ ಈಗಲೂ ಮುಂದುವರಿದಿದೆ.

ಕಾರ್ಲ್ ಮಾರ್ಕ್ಸ್ ಆರ್ಥಿಕ ಸಮಾನತೆಗಾಗಿ ದುಡಿಯುವ ವರ್ಗಗಳ ಬಗ್ಗೆ ಕಾಳಜಿ ತೋರಿದರೆ ಬಸವಣ್ಣ ಕಾಯಕ ಮತ್ತು ದಾಸೋಹದ ಮೂಲಕ ಆರ್ಥಿಕ ಸಮಾನತೆ ತಂದರು. ಇನ್ನೂ ಬಿಡಿಸಿ ಹೇಳಬೇಕೆಂದರೆ ಸತ್ಯ ಶುದ್ಧವಾಗಿ ದುಡಿಯಬೇಕು. ಬಂದ ಆದಾಯದಲ್ಲಿ ಹೆಚ್ಚಾದುದನ್ನು ಸಮಾಜಕ್ಕೆ ನೀಡಬೇಕು. ಇದರಿಂದ ಸಮಾಜದಲ್ಲಿ ಶ್ರೀಮಂತ – ಬಡವರ ನಡುವೆ ಅಂತರ ಕಡಿಮೆಯಾಗುತ್ತದೆ ಎಂಬ ಅವರ ಚಿಂತನೆ ಆಗಿತ್ತು.

ನಾವು ಈಗ ಬಸವಣ್ಣನವರನ್ನು ಮರೆತಿದ್ದೇವೆ. ಅದರರ್ಥ ಗಾಂಧಿ – ಮಾರ್ಕ್ಸ್  ಅಂಬೇಡ್ಕರ್ ನೆನಪಿದ್ದಾರೆ ಎಂದಲ್ಲ.

———

http://www.prajavani.net/Content/Jun132010/sunday20100612189453.asp

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: