‘ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಿದರೆ ರಕ್ತಕ್ರಾಂತಿ’ Ambedkar Statue Shift : Bangalore


ದಸಂಸದಿಂದ ಪ್ರತಿಭಟನೆ, ರಾಜ್ಯಪಾಲರಿಗೆ ಮನವಿ
ಮಂಗಳೂರು, ಡಿ.20: ವಿಧಾನಸೌಧದ ಮುಂಭಾಗದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಆರೆಸ್ಸೆಸ್ ಅಜೆಂಡಾದ ಕುತಂತ್ರದ ಭಾಗವಾಗಿ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು, ಒಂದು ವೇಳೆ ಸ್ಥಳಾಂತರಕ್ಕೆ ಮುಂದಾದಲ್ಲಿ ರಕ್ತಕ್ರಾಂತಿ ಆಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಶಾಖೆಯ ಸಂಚಾಲಕ ಸಂಜೀವ ಬೆಳ್ತಂಗಡಿಯವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಿದರೆ ರಕ್ತಕ್ರಾಂತಿ’
ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ದಸಂಸದ ಜಿಲ್ಲಾ ಸಮಿತಿಯ ವತಿಯಿಂದ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಕೈಬಿಡುವಂತೆ ಹಾಗೂ ಸುಬ್ರಹ್ಮಣ್ಯ ದೇವಳದಲ್ಲಿ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡುವ ಪದ್ಧತಿಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹಮ್ಮಿ ಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಹೆಜ್ಜೆಗೊಂದ ರಂತೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಶೇ.3ರಷ್ಟು ಜನಸಂಖ್ಯೆ ಯನ್ನು ಹೊಂದಿರುವ ಬ್ರಾಹ್ಮಣವರ್ಗ ಶೇ.97ರಷ್ಟು ಜನಸಂಖ್ಯೆಯನ್ನು ಆಳುತ್ತಿರುವುದು ವಿಪರ್ಯಾಸ. ಆರೆಸ್ಸೆಸ್‌ನಲ್ಲಿ ರುವ ಕಾರ್ಯಕರ್ತರು ಕೂಡಾ ನಮ್ಮವರೇ. ಅವರ ತಲೆಯಲ್ಲಿ ಧರ್ಮದ ಬಗ್ಗೆ ಅನಗತ್ಯ ವಿಷಬೀಜ ಬಿತ್ತಿ ನಮ್ಮ ವಿರುದ್ಧವೇ ಎತ್ತಿಕಟ್ಟುವ ಹುನ್ನಾರ ನಡೆಸಲಾಗುತ್ತಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ವಾಮಾಚಾರಕ್ಕಾಗಿ ನಡೆದ ನರಬಲಿಗೆ ಕಾರಣವಾದ ಮೂಢನಂಬಿಕೆಯನ್ನು ಕಲಿಸಿ ಕೊಟ್ಟಿರುವುದು ಕೂಡಾ ಈ ಬ್ರಾಹ್ಮಣ ವರ್ಗ ಎಂದು ಸಂಜೀವ ಆರೋಪಿಸಿದರು.
ದಲಿತ ವಿರೋಧಿ ಧೋರಣೆ ಹೊಂದಿರುವ ಮಂಗಳೂರು ಬಂದರ್ ಸರ್ಕಲ್ ಇನ್ಸ್‌ಪೆಕ್ಟರ್‌ರನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿದ ಸಂಜೀವ, ಈ ನಿಟ್ಟಿನಲ್ಲಿ ಹೋರಾಟ ನಡೆಸು ವುದಾಗಿ ಹೇಳಿದರು.
ಪ್ರತಿಭಟನಕಾರನ್ನುದ್ದೇಶಿಸಿ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಪಿ.ಆನಂದ, ಚಂದು ಎಲ್., ಪರಿಶಿಷ್ಟ ಜಾತಿ ಮತ್ತು ಪ. ಪಂಗಡಗಳ ಒಕ್ಕೂಟದ ಜಿಲ್ಲಾ ಸಂಚಾಲಕ ನಿರ್ಮಲ್ ಕುಮಾರ್ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ದಸಂಸ ಕೋಶಾಧಿ ಕಾರಿ ಎಂ.ದೇವು, ಜಗದೀಶ್ ಪಾಂಡೇಶ್ವರ, ನಾಗೇಶ್ ಕಂಕನಾಡಿ, ಗೀತಾ ಸುಳ್ಯ, ಮೋನಪ್ಪ, ಸೀತಾರಾಮ ಪುತ್ತೂರು, ಅರುಣಾ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಯಿತು.

http://vbnewsonline.com/Karavali/37315/


Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: