Fake Charge on Prof.Shivabasavaiah fantasm of untouchability-ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!


ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!

ಶುಕ್ರವಾರ – ಮಾರ್ಚ್ -11-2011

ಮಾನ್ಯರೆ ಒಂದಂತೂ ನಿಜ, ಈ ಪ್ರಪಂಚದಲ್ಲಿ ದಲಿತನಾಗಿ ಹುಟ್ಟಬಾರದು. ಅದೇ ಹುಟ್ಟಿ ಸಣ್ಣ ಪುಟ್ಟ ತಪ್ಪುಮಾಡಿ ದರಂತೂ ಅಥವಾ ಆರೋಪ ಬಂದರಂತೂ ಅವನ ಕಥೆ ಮುಗಿದಂತೆಯೆ. ಮೈಸೂರು ವಿ.ವಿ. ಪ್ರಾಧ್ಯಾಪಕ ಶಿವಬಸವಯ್ಯನವರ ವಿಷಯದಲ್ಲಿ ಆಗುತ್ತಿರುವುದು ಇದೇ. ಅಂದಹಾಗೆ ಇದು ಶಿವಬಸವಯ್ಯನವರೊಬ್ಬರ ಕಥೆಯಲ್ಲ. ದಲಿತರ ವಿಷಯದಲ್ಲಿ ಹಿಂದೆ ಇಂತಹದ್ದು ಹಲವಾರು ನಡೆದಿವೆ. ಉದಾಹರಣೆಗೆ ಹೇಳುವುದಾದರೆ ಬೂಸಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಿ.ಬಿ. ಬಸವಲಿಂಗಪ್ಪನವರ ರಾಜೀನಾಮೆ ಪಡೆದದ್ದು, ಕಾಪಿ ಹಗರಣದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್‌ರವರ ರಾಜೀನಾಮೆ ಪಡೆದದ್ದು, ಇತ್ತೀಚಿನ 2ಜಿ ಸ್ಪೆಕ್ಟ್ರಂ ಪ್ರಕರಣ. 

ಅಬ್ಬಾ ಹೇಳುತ್ತಾ ಹೋದರೆ ಅದೆಷ್ಟು ದಲಿತ ಮಂತ್ರಿಗಳು, ಆಧಿಕಾರಿಗಳು, ಪ್ರಾಧ್ಯಾಪಕರು, ಶಿಕ್ಷಕರು, ನೌಕರರು ಇಂತಹ ವ್ಯವಸ್ಥಿತ ಕುತಂತ್ರಿ ಅಸ್ಪಶತಾಚರಣೆಗೆ ಒಳಪಟ್ಟಿದ್ದಾರೆಯೋ? ಒಂದಂತು ನಿಜ . ಇವರೆಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಬಂಧಿಸಿ ಜೈಲಿಗೆ ಅಟ್ಟಲಾಗಿದೆ! ಆದರೆ? ಮಾಜಿ ಪ್ರದಾನಿ ದಿ. ರಾಜೀವ್ ಗಾಂಧಿ ಮತ್ತವರ ಕುಟುಂಬ ಬೋಫೋರ್ಸ್‌ನಂತಹ ಬೃಹತ್ ಹಗರಣದಲ್ಲಿ ಪಾಲ್ಗೊಂಡರೂ ಅವರಿಗೆ ಶಿಕ್ಷೆಯಾ ಗಲೇ ಇಲ್ಲ! ಶಿಕ್ಷೆ ಇರಲಿ ಪ್ರಕರಣವನ್ನೇ ಮುಚ್ಚಿಹಾಕಲಾ ಯಿತು! ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾ ದರೂ ಅವರು ಆಧಿಕಾರದ ಮೇಲೆ ಅಧಿಕಾರ ಪಡೆ ಯುತ್ತಾ ಮನ್ನುಗ್ಗಿದರು. ಅದೇ ದಲಿತ ವರ್ಗಕ್ಕೆ ಸೇರಿದ ಬಂಗಾರು ಲಕ್ಷ್ಮಣ್? ಲಂಚ ಪ್ರಕರಣದಲ್ಲಿ ನೇಪಥ್ಯಕ್ಕೆ ಸರಿದರು!

ಒಂದು ದಾಖಲೆಯ ಪ್ರಕಾರ ಲೋಕಾಯುಕ್ತರ ಬಲೆಗೆ ಬಹುತೇಕ ಬೀಳುವವರು ಅಥವಾ ಬೀಳಿಸಲ್ಪಡುವವರು ದಲಿತ ನೌಕರರು! ಹಾಗಂತ ಸ್ವತಃ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮನವರೇ ಹೇಳಿ ದ್ದಾರೆ. ಹಾಗಿದ್ದರೆ ದಲಿತರು ಮಾತ್ರ ಭ್ರಷ್ಟರೇ? ದಲಿತರು ಮಾತ್ರ ವಿಷಯ ಲಂಪಟರೇ? ದಲಿತರು ಮಾಡಿದ್ದು ಮಾತ್ರ ಅಪರಾಧವೇ? ಇತ್ತೀಚಿನ ಬೆಳವಣಿ ಗೆಗಳನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.

ಯಾಕೆಂದರೆ 1.7 ಲಕ್ಷ ಕೋಟಿಯಂತಹ ಬೃಹತ್ ಹಗರಣದಲ್ಲಿ ಯಕಶ್ಚಿತ್ ಒಬ್ಬ ಮಂತ್ರಿ ದಲಿತ ವರ್ಗಕ್ಕೆ ಸೇರಿದೆ. ಎ.ರಾಜ ಬಲಿಯಾಗುತ್ತಾರೆ. ಆದರೆ ಅರುಣ್ ಶೌರಿ, ಧಯಾನಿಧಿ ಮಾರನ್, ನೀರಾ ರಾಡಿಯಾ, ಅನಂತ್ ಕುಮಾರ್ ಇವರೆಲ್ಲ? ರಾಜಾರೋಷವಾಗಿ ಓಡಾಡುತ್ತಾರೆ! ರೇಣುಕಾಚಾರ್ಯರಂತಹವರು ಲಜ್ಜೆಗೆಟ್ಟು ಬಹಿರಂಗವಾಗಿ ಮುತ್ತುಕೊಡುವಂತಹ ಹಗರಣದಲ್ಲಿ ಸಿಕ್ಕಿಬಿದ್ದರೂ ಮಂತ್ರಿಗಳಾಗುತ್ತಾರೆ! ವಾಸ್ತವ ಹೀಗಿರಬೇಕಾ ದರೆ ಶಿವಬಸವಯ್ಯನಂತಹವರು ಮಾಡಿದ ತಪ್ಪಾದರೂ ಏನು? ದಲಿತರಾಗಿ ಹುಟ್ಟಿದ್ದು! ಅಕಸ್ಮಾತ್ ಇವರೇನಾ ದರೂ ಮೇಲ್ವರ್ಗದಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗಾಗಲೇ ಅವರನ್ನು ರಕ್ಷಿಸುವ ಕಾರ್ಯ ಭರದಿಂದ ನಡೆದಿರುತಿತ್ತು! ಆದರೆ ಈಗ? ದಲಿತ ವರ್ಗಕ್ಕೆ ಸೇರಿದ ಶಿವಬಸವಯ್ಯ ನವರನ್ನು ಹಿಂದು ಮುಂದು ನೋಡದೆ ತಕ್ಷಣ ಅಮಾನತು ಮಾಡಲಾಗಿದೆ. ಜೈಲಿಗೆ ಅಟ್ಟಲಾಗಿದೆ! ದಲಿತ ನೌಕರರ ವಿರುದ್ಧ ವ್ಯವಸ್ಥಿತ ಮತ್ತು ಸುಶಿಕ್ಷಿತ ಅಸ್ಪಶತಾಚರಣೆ ಎಂದರೆ ಇದೇ ಅಲ್ಲವೇ?

-ರಘೋತ್ತಮ ಹೊ.ಬ

ಚಾಮರಾಜನಗರ

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: