ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

02/12/2010
ದಿನೇಶ್ ಅಮಿನ್‌ಮಟ್ಟು

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು,

ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿಯವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 

‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ಕಾಯಿದೆ 1964’ಕ್ಕೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯ ಸರ್ಕಾರ ತಯಾರಿಸಿದೆ. ಇದಕ್ಕೆ ಗೋವಿನ ಬಗೆಗಿನ ಭಕ್ತಿ ಮತ್ತು ಕಾಳಜಿಯಷ್ಟೇ ಕಾರಣ ಎಂದು ಸರ್ಕಾರದಲ್ಲಿರುವ ನಿಜವಾದ ಗೋಭಕ್ತರ್ಯಾರೂ ಗೋವಿನ ಮೇಲೆ ಆಣೆ ಮಾಡಿ ಹೇಳಲಾರರು.

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು, (ಎಷ್ಟೋ ರೈತರ ಮನೆಯೊಳಗೆ ದನದ ಕೊಟ್ಟಿಗೆ ಇದೆ) ಮತ್ತು ಆ ಮೂಕ ಪ್ರಾಣಿಯೊಡನೆ ನಿತ್ಯ ‘ಮಾತನಾಡುತ್ತಾ’ ಅದರ ಕಷ್ಟ-ಸುಖ ವಿಚಾರಿಸುತ್ತಿರುವವರು ಕೇವಲ ರೈತರು. ವಿಚಿತ್ರವೆಂದರೆ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಸುಗಳ ಪ್ರಾಣ ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕೆಲಸಕ್ಕೆ ಹೊರಟಿರುವ ರಾಜಕಾರಣಿಗಳು, ಸ್ವಾಮೀಜಿಗಳು, ಹಿಂದೂ ಧರ್ಮದ ಉದ್ಧಾರದ ಗುತ್ತಿಗೆ ಪಡೆದುಕೊಂಡಿರುವ ಸಮಾಜ ಸುಧಾರಕರಲ್ಲಿ ಯಾರೂ ಹಸು ಸಾಕಿದವರಲ್ಲ, ಅದರ ಸೆಗಣಿ ಎತ್ತಿದವರಲ್ಲ, ಗಂಜಳ ಬಾಚಿದವರಲ್ಲ, ಹುಲ್ಲು ಹಾಕಿದವರಲ್ಲ. ಇವರಲ್ಲಿ ಹೆಚ್ಚಿನವರು ಪ್ಯಾಕೆಟ್ ಹಾಲು ಕುಡಿದು ಗೋವಿನ ಚಿತ್ರಕ್ಕೆ ಪೂಜೆ ಮಾಡುವವರು. ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತೊಡಗಿದಾಗೆಲ್ಲ ಇವರಿಗೆ ಗೋವಿನ ಬಗ್ಗೆ ಭಕ್ತಿ ಕೆರಳುತ್ತದೆ, ಕಾಳಜಿ ಉಕ್ಕಿ ಹರಿಯುತ್ತದೆ.

 

ಗೋಹತ್ಯೆ ನಿಷೇಧದ ಪರವಾಗಿ ವಕಾಲತ್ತು ವಹಿಸುತ್ತಿರುವವರೆಲ್ಲರೂ ಕೊಡುತ್ತಿರುವ ಕಾರಣ ಅದರ ಬಗ್ಗೆ ಹಿಂದೂಗಳಲ್ಲಿರುವ ಪೂಜ್ಯಭಾವನೆ. ಗೋವು ನಿಜಕ್ಕೂ ಹಿಂದೂಗಳ ಪಾಲಿಗೆ ಪೂಜನೀಯವೇ? ಹೌದು ಎಂದಾದರೆ ಅದು ಎಂದಿನಿಂದ ಹುಟ್ಟಿಕೊಂಡದ್ದು? ಹಿಂದೂ ಧರ್ಮ ಹುಟ್ಟಿಕೊಂಡ ದಿನದಿಂದಲೇ ಗೋವು ಪೂಜನೀಯವಾಗಿತ್ತೇ ಇಲ್ಲವೇ, ಯಾವುದೋ ಕಾಲಘಟ್ಟದಲ್ಲಿ ದಿಢೀರನೇ ಗೋವು ಪಾವಿತ್ರ್ಯದ ಪಟ್ಟ ಏರಿತೇ? ಈ ಪ್ರಶ್ನೆಗಳಿಗೆ ವೇದಗಳಲ್ಲಿಯೇ ಸ್ಪಷ್ಟವಾದ ಮತ್ತು ಯಾರೂ ನಿರಾಕರಿಸಲಾಗದಂತಹ ಉತ್ತರಗಳಿವೆ. ಆದರೆ ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಮಾತನಾಡುವಾಗೆಲ್ಲ ವೇದ-ಉಪನಿಷತ್‌ಗಳನ್ನು ಉಲ್ಲೇಖಿಸುವ ಪಂಡಿತರು ಗೋವಿನ ಪಾವಿತ್ರ್ಯದ ಬಗೆಗಿನ ಚರ್ಚೆ  ಎದುರಾದಾಗ ಮಾತ್ರ ಧರ್ಮಶಾಸ್ತ್ರಗಳನ್ನು ತಪ್ಪಿಯೂ ಪ್ರಸ್ತಾಪಿಸುವುದಿಲ್ಲ.

ಹಿಂದೂ ಧರ್ಮದ ‘ಸಂವಿಧಾನ’ ಎಂದೇ ಹೇಳಲಾಗುತ್ತಿರುವ ನಾಲ್ಕು ವೇದಗಳು ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನಕ್ರಮ, ಆಹಾರ ಪದ್ಧತಿಗಳ ವಿವರಗಳನ್ನೊಳಗೊಂಡ ಸಮಗ್ರರೂಪದ ದಾಖಲೆ. ಅವುಗಳ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರು ಸೇರಿದಂತೆ ಆ ಕಾಲದ ಹಿಂದೂಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು. ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿಗಳನ್ನು ಬಲಿಕೊಡುವುದು ಮತ್ತು ಅದರ ನಂತರ ಅವುಗಳ ಮಾಂಸ ತಿನ್ನುವುದು ಸಾಮಾನ್ಯವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಸೂಪ್?) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ.

ಈ ಬಗ್ಗೆ ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ತೈತ್ತರೀಯ ಉಪನಿಷತ್, ಮನುಸ್ಮೃತಿ ಮಹಾಭಾರತ, ರಾಮಾಯಣಗಳಲ್ಲಿವೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ (‘ಹಿಂದೂಸ್ ಏಟ್ ಬೀಫ್’ ಕೃತಿ) ಅವರಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರು ವೇದಗಳಕಾಲದಲ್ಲಿನ ಗೋಮಾಂಸ ಭಕ್ಷಣೆ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ.ವಿ.ಕಾಣೆ ತಾವು ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ.ದ್ವಿಜೇಂದ್ರನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಲ್ಲಿ ವೇದ ಮತ್ತು ವೇದ ಪೂರ್ವ ಕಾಲದಲ್ಲಿ ಗೋಮಾಂಸ ಭಕ್ಷಣೆ ಹೇಗೆ ಸಾಮಾನ್ಯ ಆಹಾರ ಪದ್ಧತಿಯಾಗಿತ್ತು ಎಂಬುದನ್ನು  ಆಧಾರಸಹಿತ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ಪ್ರಿಯರಾಗಿರುವ ಸಾಹಿತಿ ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಇದನ್ನೇ ಬರೆದುದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಧುರ್ಯೋಧನನು ರಾಯಭಾರಕ್ಕೆ ಕಳುಹಿಸುವ ಸೋಮದತ್ತನೆಂಬ ಪುರೋಹಿತರು ಮಧ್ಯಾಹ್ನದ ಭೋಜನಕ್ಕೆ ಕೋಣನ ಮಾಂಸ ತಿನ್ನುವ ಚಿತ್ರ ‘ಪರ್ವ’ದಲ್ಲಿದೆ).

ವೇದಕಾಲದಲ್ಲಿ ಮಾಂಸಾಹಾರಿಗಳಾಗಿದ್ದ ಹಿಂದೂಗಳು ಸಸ್ಯಾಹಾರಿಗಳಾಗಿದ್ದು ಮತ್ತು ಇದ್ದಕ್ಕಿದ್ದಂತೆಯೇ ಗೋವುಗಳು ಪವಿತ್ರಸ್ಥಾನ ಪಡೆದು ಪೂಜನೀಯವಾಗಿದ್ದು ಬೌದ್ಧ ಧರ್ಮದ ಸ್ಥಾಪನೆಯ ನಂತರ ಎನ್ನುವುದು ಚಾರಿತ್ರಿಕವಾದ ಸತ್ಯ. ಆದರೆ ಬಹಳ ಮಂದಿ ತಿಳಿದುಕೊಂಡಂತೆ ಬುದ್ಧ ಶಾಕಾಹಾರಿಯಾಗಿರಲಿಲ್ಲ, ಆತ ಮತ್ತು ಆತನ ಅನುಯಾಯಿಗಳು ಮಾಂಸ (ಅದೂ ಹಂದಿ) ತಿನ್ನುತ್ತಿದ್ದರು. ಅಹಿಂಸಾವಾದಿಯಾಗಿದ್ದ ಬುದ್ಧ ರೈತನ ಸಂಗಾತಿಯಾದ ಗೋವುಗಳ ಹತ್ಯೆಯನ್ನು ವಿರೋಧಿಸಿದ್ದ. ಬೌದ್ಧ ಧರ್ಮದ ಉದಯದಿಂದ ಭೀತಿಗೊಳಗಾದ ಹಿಂದೂಧರ್ಮ ಅದನ್ನು ಎದುರಿಸಲೆಂದೇ ಶಾಕಾಹಾರಿಯಾಗಿದ್ದು ಮತ್ತು ಗೋವನ್ನು ಪೂಜನೀಯವಾಗಿ ಮಾಡಿದ್ದು.

ಇಂತಹ ಗೋವು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ‘ಕಾಮಧೇನು’ವಾಯಿತು. ಆಶ್ಚರ್ಯಕರ ಸಂಗತಿ ಎಂದರೆ ಈ ರಾಜಕೀಯ ಪ್ರಾರಂಭಿಸಿದ್ದೇ ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ನಿಯಂತ್ರಿತ ಗೋಹತ್ಯೆ ನಿಷೇಧ ಹೇರಿದ್ದರು.

ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಹಿಂದೂ ನಾಯಕರು ಒತ್ತಡ ಹೇರಿದ್ದರು. ಆದರೆ ಅಂಬೇಡ್ಕರ್ ಮಾತ್ರವಲ್ಲ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರೂ ಇದಕ್ಕೆ ವಿರುದ್ಧವಾಗಿದ್ದರು. ಈ ಕಾರಣದಿಂದಾಗಿಯೇ ಬಹಳ ಎಚ್ಚರಿಕೆಯಿಂದ 48ನೇ ಪರಿಚ್ಛೇದವನ್ನು ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ ನಿರ್ದೇಶನ ತತ್ವದಲ್ಲಿ ಸೇರಿಸಲಾಯಿತು. ‘ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕು. ಜಾನುವಾರಗಳ ತಳಿ ಸುಧಾರಣೆಗೆ ಕ್ರಮಕೈಗೊಳ್ಳುವುದರ ಜತೆಗೆ ಪ್ರಯೋಜನಕಾರಿ ಜಾನುವಾರುಗಳು ಮುಖ್ಯವಾಗಿ ಹಾಲು ನೀಡುವಂತಹ ಹಸು-ಎಮ್ಮೆಗಳ ಹತ್ಯೆಗೆ ನಿಷೇಧ ಹೇರಬಹುದು’ ಎಂದು 48ನೇ ಪರಿಚ್ಛೇದ ಹೇಳಿದೆ. ಇದರಂತೆ ಪಶ್ಚಿಮ ಬಂಗಾಳ, ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ನಿಯಂತ್ರಿತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.

ಕರ್ನಾಟಕದಲ್ಲಿ 1964ರಿಂದಲೂ ಗೋರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಇದರ ಪ್ರಕಾರ ಸಂಬಂಧಿತ ಅಧಿಕಾರಿಗಳಿಂದ ಲಿಖಿತ ದೃಢೀಕರಣಪತ್ರ ಪಡೆದ ನಂತರವಷ್ಟೇ ಗೋವುಗಳ ಹತ್ಯೆಮಾಡಬಹುದಾಗಿದೆ. ಈ ರೀತಿ ಹತ್ಯೆ ಮಾಡಬಹುದಾದ ಗೋವುಗಳಿಗೆ ಕನಿಷ್ಠ ಹನ್ನೆರಡು ವರ್ಷ ವಯಸ್ಸಾಗಿರಬೇಕು, ಅವುಗಳು ಹಾಲು ನೀಡುವ ಇಲ್ಲವೇ ಕರು ಹಾಕುವ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು ಹಾಗೂ ಗಾಯಗೊಂಡು ನಿರುಪಯುಕ್ತವಾಗಿರಬೇಕು. ಉಳಿದೆಲ್ಲ ಕಾಯಿದೆಗಳಂತೆ ಇದರ ಉಲ್ಲಂಘನೆ ಕೂಡಾ ನಡೆಯುತ್ತಿರುವುದು ನಿಜ. ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುವುದರಿಂದ ಕಾಯಿದೆಯ ಪಾಲನೆ ಕಡಿಮೆ.

ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಒತ್ತಾಯ ಸ್ವತಂತ್ರ ಭಾರತದಲ್ಲಿ ಜೋರಾಗಿ ಕೇಳಿಬಂದದ್ದು 1979ರಲ್ಲಿ ವಿನೋಬಾ ಭಾವೆ ಆಮರಣ ಉಪವಾಸ ಪ್ರಾರಂಭಿಸಿದಾಗ. ಇದಕ್ಕೆ ಮಣಿದ ಜನತಾ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೇ ರಾಜ್ಯಸರ್ಕಾರಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ತಿಳಿಸಿದ್ದರು. ಅಲ್ಲಿಂದೀಚೆಗೆ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. 1990ರಲ್ಲಿ ಬಿಜೆಪಿ ಸದಸ್ಯ ಜಿ.ಎಂ.ಲೋಧಾ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್ ನಾಯಕ ವಸಂತ ಸಾಠೆ ಅವರೇ ಬೆಂಬಲಿಸಿ ಅಚ್ಚರಿಸಿ ಹುಟ್ಟಿಸಿದ್ದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದವನ್ನು ಇತ್ತೀಚೆಗೆ ಕೆದಕಿದ್ದು ಎಐಸಿಸಿಯ ಈಗಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸುವಂತೆ ‘ದಿಗ್ಗಿರಾಜಾ’ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನೇ ಬಳಸಿಕೊಂಡ ಎನ್‌ಡಿಎ ಸರ್ಕಾರ 2003ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಯಿತು. ಆದರೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದ ಕಾರಣದಿಂದಾಗಿ ಆ ಪ್ರಯತ್ನ ಸಫಲವಾಗಲಿಲ್ಲ.

ಗೋಹತ್ಯೆ ನಿಷೇಧವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನರಷ್ಟೇ ವಿರೋಧಿಸುತ್ತಾರೆಂಬ ತಪ್ಪು ಕಲ್ಪನೆಯೊಂದಿದೆ. ದನದ ಮಾಂಸವನ್ನು ನಿತ್ಯದ ಆಹಾರವಾಗಿ ಬಳಸುತ್ತಿರುವವರಲ್ಲಿ ಶೂದ್ರ ಮತ್ತು ದಲಿತರ ಸಂಖ್ಯೆ ಕೂಡಾ ಗಣನೀಯವಾಗಿದೆ. ಹೀಗಿದ್ದರೂ ಗೋಹತ್ಯೆಯ ನಿಷೇಧವನ್ನು ಕೇವಲ ಆಹಾರದ ದೃಷ್ಟಿಯಿಂದಷ್ಟೇ ವಿರೋಧಿಸಬೇಕಾಗಿಲ್ಲ. ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿಹೆಚ್ಚಿನ ಜಾನುವಾರು ಸಂಪತ್ತು ಹೊಂದಿರುವ ದೇಶ ಭಾರತ. ವಿಶ್ವದ ಒಟ್ಟು ಹಸುಗಳಲ್ಲಿ ನಾಲ್ಕನೆ ಒಂದರಷ್ಟು ನಮ್ಮ ದೇಶದಲ್ಲೇ ಇವೆ. ಇಲ್ಲಿರುವ ಸುಮಾರು 20 ಕೋಟಿ ಜಾನುವಾರುಗಳಲ್ಲಿ ಹಸುಗಳು ಆರು ಕೋಟಿ, ಎಮ್ಮೆಗಳು  ಎಂಟು ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಶೇಕಡಾ 60ರಷ್ಟು ಜಾನುವಾರುಗಳಿಗೆ ಬೇಕಾದಷ್ಟು ಮಾತ್ರ ಆಹಾರ ಲಭ್ಯ ಇದೆ. ಗೋಮಾಳಗಳೆಲ್ಲ ಒತ್ತುವರಿಗೊಳಗಾಗಿ ಕಣ್ಮರೆಯಾಗುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಈವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ವರದಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಕೃಷಿಕ್ಷೇತ್ರದಲ್ಲಿನ ಕಷ್ಟ-ನಷ್ಟ ತಾಳಲಾರದೆ ರೈತರು ಈಗಲೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹವರ ಕುತ್ತಿಗೆಗೆ ಹಾಲು ಬತ್ತಿದ, ಕರು ಹಾಕದ, ರೋಗಿಷ್ಠ ಬಡಕಲು ಹಸುಗಳನ್ನು ಕಟ್ಟಿಹಾಕಿದರೆ ರೈತರ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಅಷ್ಟೇ.

ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಲು ಹೊರಟಿರುವ ಸರ್ಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದೂ ಇಂತಹ  ‘ತಪ್ಪು’ ಮಾಡುತ್ತಿರುವುದಕ್ಕೆ ಕಾರಣ ಆಡಳಿತಪಕ್ಷದೊಳಗಿನ ಗುಪ್ತ ಅಜೆಂಡಾ. ಈಗಿರುವ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳಲ್ಲಿ ಗೋಹತ್ಯೆಯ ಪತ್ತೆಗಾಗಿ ಕಲ್ಪಿಸಿರುವ ಅವಕಾಶ ಹಾಗೂ ಅಪರಾಧಕ್ಕಾಗಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವೇ ಸರ್ಕಾರದ ದುರುದ್ದೇಶಕ್ಕೆ ಸಾಕ್ಷಿ.

ಈ ತಿದ್ದುಪಡಿ ಜಾರಿಗೆ ಬಂದರೆ ಮುಸ್ಲಿಮರನ್ನು ಒಳಗೊಂಡಂತೆ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಇನ್ನೂ ಸುಲಭದ ಕೆಲಸ. ಅವರ ಮನೆಮುಂದೆ ಸತ್ತದನದ ತಲೆ ಎಸೆದರಾಯಿತು. ಒಂದು ವರ್ಷದ ಜೈಲು ಇಲ್ಲವೇ 50,000 ರೂಪಾಯಿ ದಂಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಮಂದಿಯ ಕೈ ಕಡಿಯಲು ಸಾಧ್ಯ?

__________

Courtesy: http://www.prajavani.net/Content/Feb152010/dinesh20100214170320.asp

 

 


ಮನುಸ್ಮೃತಿ ಮತ್ತು ಸಾಮಾಜಿಕ ಮೀಸಲಾತಿ

15/10/2010

ಮೀಸಲಾತಿ ಹಾಗೆಂದಾಕ್ಷಣ ಬಹುತೇಕರ ಕಣ್ಣು ಕೆಂಪಗಾಗುತ್ತದೆ. ಅವರ ಆ ಕೆಂಪಗಾದ ಕಣ್ಣು ಮೊದಲು ನೋಡುವುದು ದಲಿರತ್ತ. ಈ ಮೀಸಲಾತಿಯಿಂದ ದಲಿತರು ಹೆಚ್ಚಿಕೊಂಡವರೆ, ಈ  ಸಕರ್ಾರದ ಪ್ರತಿಯೊಂದು ಸವಲತ್ತು ಇವರಿಗೇನೆ. ಒಂದು ರೀತಿ ಇವರು ಗೌಮರ್ೆಂಟ್ ಬ್ರಾಹ್ಮಣರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ ಅಂತಹ ಆಕ್ರೋಶವನ್ನು ಮೀಸಲಾತಿ ವ್ಯಾಪ್ತಿಯೊಳಗೆ ಬರುವ ಒಬಿಸಿಗಳೂ ಕೂಡ ವ್ಯಕ್ತಪಡಿಸುತ್ತಾರೆ.!       ಪ್ರಶ್ನೆಯೇನೆಂದರೆ ಮೀಸಲಾತಿ ಎಂಬ ಈ ಪರಿಕಲ್ಪನೆ ಹೊಸದೆ? ದಲಿತರಿಗೆ ಹಿಂದುಳಿದವರಿಗೆ ಈಗ ಸಿಗುತ್ತಿರುವ ಅದು ಹಿಂದೆ ಯಾರಿಗೂ ಸಿಕ್ಕಿಲ್ಲವೇ? ಹಿಂದೆ ಎಂದೂ ಕೂಡ ಅದು ಜಾರಿ ಇರಲಿಲ್ಲವೇ? ಯಾವ ರೂಪದಲ್ಲಾದರೂ ಸರಿ ಅಂತಹ ಒಂದು  ಪದ್ಧತಿ ಈ ದೇಶದಲ್ಲಿ ಅಸ್ತಿತ್ವ ದಲ್ಲಿರಲಿಲ್ಲವೇ? ಹಾಗಿದ್ದರೆ ಅಂತಹ ಮೀಸಲಾತಿಯ ಜನಕ ಯಾರು? ಫಲಾನುಭವಿಗಳಾದರೂ ಯಾರು? ಅಂದು ಜಾರಿಯಾದ ಆ ಮೀಸಲಾತಿಯ ಪರಿಣಾಮವಾದರೂ ಏನು? ಇತ್ಯಾದಿ ಪ್ರಶ್ನೆಗಳು ಪುಂಖಾನು ಪುಂಖವಾಗಿ ಹುಟ್ಟಿಕೊಳ್ಳುತ್ತವೆ. ಅಕ್ಷರಶಃ ನಿಜ, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು ಮನುಸ್ಮೃತಿಯಲ್ಲಿ ಹಾಗು ಅಂತಹ ಮೀಸಲಾತಿ ಪ್ರಥಮ ಫಲಾನುಭವಿಗಳಾದ ಬ್ರಾಹ್ಮಣರಲ್ಲಿ.    ಹಾಗಿದ್ದರೆ ಮನು ಸಂವಿಧಾನ ಬರೆದನೆ? ಮತ್ತು ಅಂತಹ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು, ವಿಧಿಗಳನ್ನು ಸೇರಿಸಿದನೇ? ಮತ್ತು ಅಂತಹ ಸಂವಿಧಾನ ಜಾರಿಯಲ್ಲಿತ್ತೇ? ಯಾರ ಕಾಲದಲ್ಲಿ ಅದು ಜಾರಿಯಲ್ಲಿತ್ತು? ಹೇಗಿತ್ತು? ಯಾವರೀತಿ ಇತ್ತು? ಇತ್ಯಾದಿ ಪ್ರಶ್ನೆಗಳಿಗೆ  ಬಾಬಾಸಾಹೇಬ್ ಡಾ. ಅಂಬೇಡ್ಕರ್ರವರು ತಮ್ಮ ಕ್ರಾಂತಿ ಮತ್ತು ಪ್ರತಿಕ್ರಾಂತಿ ಎಂಬ ಕೃತಿಯಲ್ಲಿ (ಬಾಬಾಸಾಹೇಬರ ಈ ಕೃತಿಯನ್ನು ಉಲ್ಟಾ ಪಲ್ಟಾ ಖ್ಯಾತಿಯ ಚಲನಚಿತ್ರ ನಿದರ್ೇಶಕ ಎನ್.ಎಸ್.ಶಂಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ) ಉತ್ತರ ಕೊಡುತ್ತಾ ಹೋಗುತ್ತಾರೆ.  ಅಂಬೇಡ್ಕರರ ಪ್ರಕಾರ  ಈ  ದೇಶದಲ್ಲಿ ಸಾಮಾಜಿಕ ಮೀಸಲಾತಿ ಜಾರಿಗೆ ತಂದ ಮನುಸ್ಮೃತಿಎಂಬ ಅಘೋಷಿತ ಸಂವಿಧಾನ ಜಾರಿಗೆ ಬಂದದ್ದು ಬೌದ್ಧರಾಗಿದ್ದ  ಮೌರ್ಯ ವಂಶದ  ಕೊನೆಯ ದೊರೆ ಬೃಹದ್ರಥ ಮೌರ್ಯನ್ನು ಕೊಂದು ಶುಂಗವಂಶದ ಮೂಲಕ   ಬ್ರಾಹ್ಮಣರ ಆಳ್ವಿಕೆಗೆ ಅಡಿಪಾಯ ಇಟ್ಟ ಪುಷ್ಯಮಿತ್ರನ ಕಾಲದಲ್ಲಿ. ಪುಷ್ಯಮಿತ್ರನ ಈ ಬ್ರಾಹ್ಮಣ ಕ್ರಾಂತಿ ಕ್ರಿಸ್ತ ಪೂರ್ವ 185 ರಲ್ಲಿ ಜರುಗಿತ್ತೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಬ್ರಾಹ್ಮಣ ಕ್ರಾಂತಿಗೆ ಪೂರಕವಾದ ಕಾನೂನಾದ ಮನುಸ್ಮೃತಿ ರೂಪುಗೊಂಡದ್ದು ಕ್ರಿಸ್ತ ಪೂರ್ವ 170 ರಿಂದ 150 ರ ಅವಧಿಯಲ್ಲಿರಬೇಕು ಎನ್ನುತ್ತಾರೆ ಅಂಬೇಡ್ಕರ್. ಮುಂದುವರಿದು ಅವರು ಮನುಸ್ಮೃತಿ ಎಂಬ ಅಂತಹ ಕಾನೂನಿನ ಜನಕ  ಸುಮತಿಭಾರ್ಗವ ಎಂಬ ಬ್ರಾಹ್ಮಣ, ಮತ್ತದರ ಮೊದಲ ಫಲಾನುಭವಿಗಳು ಬ್ರಾಹ್ಮಣರು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ.      ಹಾಗಿದ್ದರೆ ಬ್ರಾಹ್ಮಣರಿಗೆ ಈ ಪರಿಯ ವ್ಯಾಪಕ ಸವಲತ್ತು  ಕೊಟ್ಟ ಮತ್ತು ಅಂತಹ ಕೊಡುವಿಕೆಯ ಮೂಲಕ  ಇಡೀ ದೇಶವನ್ನು ಸಾಮಾಜಿಕ ಅಸಮಾನತೆಗೆ ತಳ್ಳಿದ ಮನುಧರ್ಮಶಾಸ್ತ್ರದ ಬಗ್ಗೆ ಚಚರ್ಿಸಲು ಯಾರು ಯಾಕೆ ಪ್ರಯತ್ನಿಸಿಲ್ಲ? ಅಥವಾ ವಿಶ್ಲೇಷಿಸಲು ಹೋಗಿಲ್ಲ? ಉತ್ತರ ಸ್ಪಷ್ಟ. ಎಲ್ಲೋ ಒಂದು ಕಡೆ ಅಂತಹ ಚಚರ್ೆಯಾಗಬಾರದು, ತಾವು ಪಡೆಯುತ್ತಿರುವ ಇಂತಹ ಸವಲತ್ತುಗಳು  ಯಾರಿಗೂ ಗೊತ್ತಾಗಬಾರದು ಎಂದು ಕುತ್ಸಿತ ಮನಸ್ಸುಗಳು ತಡೆದಿವೆ. ಇದು ಹೇಗೆ ಎಂದರೆ ಮನುಸ್ಮೃತಿ ಬರೆದದ್ದು ಯಾರು ಎಂದರೆ ಅದು ದೈವ ಮೂಲದ್ದು ಎನ್ನಲಾಗಿದೆ! ಅಂದರೆ ಸಾಕ್ಷಾತ್ ದೇವರೇ ಅದನ್ನು ಬರೆದಿರುವುದರಿಂದ  ಯಾರೂ ಅದನ್ನು ಪ್ರಶ್ನಿಸಬಾರದೆಂದರ್ಥ!  ನಿಜಕ್ಕೂ ಇದು ಅಪಾಯಕಾರಿ ಹುನ್ನಾರ. ಎರಡು ಸಾವಿರ ವರ್ಷಗಳೀಂದ ಕೆಲವೊಂದು ಸಮುದಾಯಗಳು ಪಡೆಯುತ್ತಿರುವ ಅಘೋಷಿತ ಸೌಲಭ್ಯಗಳನ್ನು, ಸಾಮಾಜಿಕ ಮೀಸಲಾತಿಯನ್ನು ಪ್ರಶ್ನಿಸಬಾರದೆಂದರೆ? ಅಂತಹ ಮೀಸಲಾತಿಯಿಂದ  ಈ ದೇಶದಲ್ಲಿ ಉಂಟಾಗಿರುವ  ಸಾಮಾಜಿಕ ಏರುಪೇರುಗಳನ್ನು ಪ್ರಶ್ನಿಸಬಾರದೆಂದರೆ? Never, ಅಂತಹ ಪ್ರಶ್ನೆಗಳನ್ನು ಹೆಚ್ಚು ಹೆಚ್ಚು ಕೇಳಬೇಕು. ಇಲ್ಲದಿದ್ದರೆ ಇನ್ನು ಹತ್ತು ಲಕ್ಷ ವರ್ಷವಾದರೂ ಸರಿ  ಸಮಾಜ ಹೀಗೆಯೇ ಇರುತ್ತದೆ. ಸಾಮಾಜಿಕ ತಾರತಮ್ಯವೂ ತೊಲಗುವುದಿಲ್ಲ, ಸಮಾನತೆಯಂತೂ ಸಾಧ್ಯವೇ ಇಲ್ಲ.    ಹಾಗಿದ್ದರೆ ಇಷ್ಟೊಂದು ಅಪಾಯಕಾರಿ ಎನಿಸುವ ಮನುಸ್ಮೃತಿಯು ಬ್ರಾಹ್ಮಣರಿಗೆ ಕೊಟ್ಟಿರುವುದಾದರೂ ಏನು? ಮನುಸ್ಮೃತಿಯ ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ ಮುಖದಿಂದ ಬಂದವನಾದ್ದರಿಂದ, ಜ್ಯೇಷ್ಠನಾದ್ದರಿಂದ ಮತ್ತು ವೇದವನ್ನು ಹೊಂದಿದವನಾದ್ದರಿಂದ ಬ್ರಾಹ್ಮಣನೇ ಈ ಸೃಷ್ಟಿಯ ಪ್ರಭು, ಈ ಜಗತ್ತಿನಲ್ಲಿರುವುದೆಲ್ಲ ಬ್ರಾಹ್ಮಣನ    ಸೊತ್ತು. ತನ್ನ ಶ್ರೇಷ್ಠ ಜನ್ಮದಿಂದಲೇ ಬ್ರಾಹ್ಮಣನು ಎಲ್ಲಾ ವಸ್ತುಗಳಿಗೂ ಅರ್ಹತೆ ಪಡೆದಿದ್ದಾನೆ, ಅಧ್ಯಯನ, ಅಧ್ಯಾಪನ, ತನಗಾಗಿ ಮತ್ತು ಇತರಿಗಾಗಿ ಯಜ್ಙ ಯಾಗಾದಿಗಳನ್ನು ಮಡುವುದು. ದಾನಕೊಡುವುದು ಮತ್ತು ಸ್ವೀಕರಿಸುವುದು ಇವು ಬ್ರಾಹ್ಮಣನ ಕೆಲಸಗಳು!     ಇಷ್ಟು ಹೇಳಿದ ಮೇಲೆ ಮುಗಿದು ಹೋಯಿತು! ಮನು ಬ್ರಾಹ್ಮಣರನ್ನು ಯಾವ ಸ್ಥಾನದಲ್ಲಿಟ್ಟ ಮತ್ತು ಅವರಿಗೆ ಯಾವ ಯಾವ  ಕೆಲಸಗಳನ್ನು ಮೀಸಲಿಟ್ಟ ಎಂಬುದು ಅರ್ಥವಾಗುತ್ತದೆ. ಇನ್ನು ಬ್ರಾಹ್ಮಣರಿಗೆ ಸಲ್ಲಬೇಕಾದ ಹಣಕಾಸಿಗೆ ಸಂಬಧಪಟ್ಟಂತೆ? ಈ ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿ ಒದಗಿಸುತ್ತವೆ.      ವಿಧ್ವಾಂಸರು ಎಲ್ಲರಿಗೂ ಅಧಿಪತಿಯಾದ್ದರಿಂದ ಬ್ರಾಹ್ಮಣನ ಕಣ್ಣಿಗೆ ಬಿದ್ದ ಪುರಾತನ ನಿಧಿಯು ಆತನಿಗೇ ಸಲ್ಲುತ್ತದೆ, ಅದೇ ರಾಜನಿಗೆ ನಿಧಿ ಸಿಕ್ಕಿದರೆ ಅದರಲ್ಲಿ ಅರ್ಧವನ್ನು ಬ್ರಾಹ್ಮಣರಿಗೆ ಕೊಟ್ಟು ಉಳಿದರ್ಧವನ್ನು ರಾಜಕೋಶಕ್ಕೆ ಸೇರಿಸಬೇಕು! ಇದಿಷ್ಟು ಮನು ಬ್ರಾಹ್ಮಣರಿಗೆ ಹಣಕಾಸು ‘ನಿಧಿ’ಗೆ ಸಂಬಂಧಪಟ್ಟಂತೆ ನೀಡುವ ಹಕ್ಕುಗಳು ಮುಂದುವರಿದು ಮನು    ತನ್ನ ಕಾಲ ಸನ್ನಿಹಿತವಾದಾಗ ರಾಜನು ಎಲ್ಲಾ ಧನವನ್ನು ಬ್ರಾಹ್ಮಣರಿಗೆ ಒಪ್ಪಿಸಿ, ರಾಜ್ಯವನ್ನು ಮಗನಿಗೆ ಒಪ್ಪಿಸಿ ರಣಭೂಮಿಯಲ್ಲಿ ಸಾವು ಪಡೆಯ ಬೇಕು ಎನ್ನುತ್ತಾನೆ.  ಅಂದಹಾಗೆ ಮನು ಬ್ರಾಹ್ಮಣರಿಗೆ ಹಣಕಾಸು ಹಕ್ಕು ನೀಡಿದ.  ಆದರೆ ಈ ಹಣಕಾಸಿನ ಹಕ್ಕಿಗೆ ಕಳಸವಿಟ್ಟಂತೆ ಮನು ಬ್ರಾಹ್ಮಣರಿಗೆ ನೀಡಿದ್ದು ದಕ್ಷಿಣೆ ಮತ್ತು ದಾನದ ಹಕ್ಕು. ಇದು ಹೇಗೆ ಎಂದರೆ ಮನು  ಉದಾರ ದಕ್ಷಿಣೆಗಳನ್ನು ಕೊಟ್ಟು ರಾಜನು ಯಾಗವನ್ನು ಮಾಡಬೇಕು. ಧಮರ್ಾರ್ಥವಾಗಿ ಬ್ರಾಹ್ಮಣರಿಗೆ ಧನ ಭೋಗಾದಿಗಳನ್ನು ಕೊಡಬೇಕು ಎನ್ನುತ್ತಾನೆ . ಮುಂದುವರಿದು ಮನು ಬ್ರಾಹ್ಮಣೇತರರಿಗೆ ಕೊಟ್ಟ ದಾನ ಸಾಮಾನ್ಯ, ಬ್ರಾಹ್ಮಣನಿಗೆ ಕೊಟ್ಟದ್ದು ದುಪ್ಪಟ್ಟು ಫಲಕಾರಿ, ಅಧ್ಯಯನ ಶೀಲ ಬ್ರಾಹ್ಮಣನಿಗೆ ಕೊಟ್ಟ ದಾನ ಶತ ಸಹಸ್ರಫಲವುಳ್ಳದ್ದು, ಅದೇ ವೇದಪಾರಂಗತ ಬ್ರಾಹ್ಮಣನಿಗೆ  ಮಾಡಿದ ದಾನ ಅನಂತ ಫಲಕಾರಿ  ಎಂದು ದಾನವನ್ನು ಶಾಸನಬದ್ಧಗೊಳಿಸುತ್ತಾನೆ. ಇದು ಹೇಗೆ ಎಂದರೆ ಸ್ವತಃ ಅಂಬೇಡ್ಕರ್ರವರೆ ಮನು ಬ್ರಾಹ್ಮಣರಿಗೆ ದಾನದ ಹಕ್ಕು ಕೊಟ್ಟಿದ್ದ.  ಆ ದಾನ ಯಾವಾಗಲೂ ಹಣ ಅಥವಾ ಚಿರಾಸ್ತಿಯಾಗಿರಬೇಕಿತ್ತು. ಆದರೆ ಕಾಲಾಂತರದಲ್ಲಿ, ಬ್ರಾಹ್ಮಣನಿಗೆ ಉಪಪತ್ನಿಯಾಗಿ ಇರಿಸಿಕೊಳ್ಳಲು ಹೆಣ್ಣಿನ ಉಡುಗೊರೆ  ಅಥವಾ ಹಣ ಕೊಟ್ಟು ಬಿಡಿಸಿಕೊಳ್ಳಬಹುದಾದ ಹೆಣ್ಣನ್ನು ಒತ್ತೆಯಾಗಿಡುವ ಕ್ರಿಯೆ ಸಹ ‘ದಾನದ ಕಲ್ಪನೆ’ಗೆ ಸೇರಿತು!  ಎನ್ನುತ್ತಾರೆ.     ಒಟ್ಟಾರೆ ಮನು ನೀಡಿದ ಈ ದಾನದ ಹಕ್ಕಿನಿಂದಾಗಿ ಬ್ರಾಹ್ಮಣರಿಗೆ ಧನ ಧಾನ್ಯವಲ್ಲದೆ ಬೇರೆಯವರ ಮನೆಯ ಹೆಣ್ಣು ಕೂಡ ಧಕ್ಕಿತು! ಹೀಗಿರುವಾಗ ಇದನ್ನು (ಮನುಧರ್ಮಶಾಸ್ತ್ರ) ನಾಗರೀಕ ಕಾನೂನು ಎನ್ನಬೇಕೆ? ಮತ್ತು ಅಂತಹ ಕಾನೂನು ಈಗಲೂ ಅನೌಪಚಾರಿಕವಾಗಿ ಜಾರಿಯಲ್ಲಿರುವುದನ್ನು ಖಂಡಿಸದೆ ಇರಬೇಕೆ?    ಇರಲಿ ಬ್ರಾಹ್ಮಣರಿಗೆ ಶಿಕ್ಷಣ ಮತ್ತು ಆಥರ್ಿಕ ‘ಮೀಸಲಾತಿ’ ನೀಡಿದ ಮನು ಅವರ ರಕ್ಷಣೆಗಾಗಿ ಯಾವ ರೀತಿಯ ‘ಕಾನೂನು’ ರೂಪಿಸಿದ ಎಂದು ಚಚರ್ಿಸೋಣ. ಏಕೆಂದರೆ ಎಲ್ಲರೂ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಯನ್ನು ಟೀಕಿಸುತ್ತಾರೆ. ಅಂತಹ ಕಾಯ್ದೆಯನ್ನು ಆಗಲೇ ಮನು ಬ್ರಾಹ್ಮಣರಿಗೆ ನೀಡಿದ್ದ ಎಂಬುದನ್ನು ಬಹುತೇಕರು ಗಮನಿಸಲು ಹೋಗಿಲ್ಲ! ಅದಕ್ಕೆ ಅವನ ಒಂದೆರಡು ಸಾಲುಗಳನ್ನು ಇಲ್ಲಿ ಹೇಳುವುದಾದರೆ ತನಗೆ ಹಾನಿ ಮಾಡಿದವರ ವಿರುದ್ಧ ಬ್ರಾಹ್ಮಣನು ರಾಜನಿಗೆ ದೂರು ಒಯ್ಯಬೇಕಿಲ್ಲ. ತನ್ನ ಸ್ವಂತ ಬಲದಿಂದಲೇ ಅವರನ್ನು ಶಿಕ್ಷಿಸಬಲ್ಲನು. ಹಾಗೆಯೇ ಮನು  ವಣರ್ಾಶ್ರಮ ಧರ್ಮಕ್ಕೆ ಚ್ಯುತಿಬಂದಾಗ ಅಥವಾ ವಿಪ್ಲವಕಾಲದಲ್ಲಿ ದ್ವಿಜರು ಆತ್ಮ ರಕ್ಷಣೆಗಾಗಿ ಶಸ್ತ್ರ ಹಿಡಿಯಬಲ್ಲರು ಎನ್ನುತ್ತಾನೆ.  ಇವಿಷ್ಟರಿಂದಲೇ ಅರ್ಥವಾಗುತ್ತದೆ, ಬ್ರಾಹ್ಮಣರ ಮೇಲಿನ ದೌರ್ಜನ್ಯಕ್ಕೆ ಬ್ರಾಹ್ಮಣರು ಯಾವ ಕ್ರಮವನ್ನಾದರೂ  ಕೈಗೊಳ್ಳ ಬಹುದಿತ್ತು! ಅಂದಹಾಗೆ ಬ್ರಾಹ್ಮಣರಿಗೆ ನೀಡಲಾದ ಈ ಪರಿಯ ಸ್ವರಕ್ಷಣೆಯ ಹಕ್ಕು  ಯಾವ ಮಟ್ಟದಲ್ಲಿತ್ತೆಂದರೆ ಆತ್ಮ ರಕ್ಷಣೆಗಾಗಿ ಅಥವಾ ದಕ್ಷಿಣೆಗಾಗಿ ಉಂಟಾದ ವ್ಯಾಜ್ಯದಲ್ಲಿ, ಸ್ತ್ರೀಯರು ಮತ್ತು ಬ್ರಾಹ್ಮಣರ ರಕ್ಷಣೆಗಾಗಿ ಬ್ರಾಹ್ಮಣನು ಕೊಲೆ ಮಾಡಿದರೂ ಅಪರಾಧವಲ್ಲ!     ಆಶ್ಚರ್ಯ! ಈ ಜಗತ್ತಿನಲ್ಲಿ ಕೊಲೆ ಮಾಡಿದರೂ ಕೂಡ ಅಪರಾಧವಲ್ಲ! ಮನು ಅಂತಹ ಮಹತ್ತರ ಹಕ್ಕನ್ನು ಬ್ರಾಹ್ಮಣರಿಗೆ ಕೊಟ್ಟಿದ್ದಾನೆ! ಇಂತಹ ಒಂದು ಹಕ್ಕನ್ನು ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರಶ್ನೆ ಎಂದರೆ ಸ್ವರಕ್ಷಣೆಗಾಗಿ ಇಷ್ಟೆಲ್ಲಾ ಹಕ್ಕುಗಳನ್ನು ಕೊಟ್ಟಮೇಲೆ ಅಂತಹ ಸಮುದಾದದ ಮೆಲೆ ದೌರ್ಜನ್ಯವಾದರೂ ಎಲ್ಲಿ ನಡೆಯುತ್ತದೆ? ಹೀಗಿರುವಾಗ ಇಂತಹ ಅನೌಪಚಾರಿಕ ಹಕ್ಕನ್ನು ಪ್ರಶ್ನಿಸದ  ಕುತ್ಸಿತ ಮನಸ್ಸುಗಳು ಎಸ್.ಸಿ./ ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಕೊಂಕು ಮಾತನಾಡುವುದೇಕೆ?   ಒಂದಂತು ನಿಜ ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸುವ ಮೂಲಕ, ಕ್ಷತ್ರಿಯರನ್ನು ಕ್ಷಾತ್ರಕ್ಷೇತ್ರಕ್ಕೆ ಕಳುಹಿಸುವ ಮೂಲಕ, ವೈಶ್ಯರನ್ನು ಕೃಷಿ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಮೀಸಲಿರಿಸುವ ಮೂಲಕ, ಶಿಕ್ಷಣವನ್ನು ತಮಗೆ ಮಾತ್ರ ಮೀಸಲಿರಿಸಿಕೊಳ್ಳುವುದರ ಮೂಲಕ ಬ್ರಾಹ್ಮಣರು ಸಮಾಜದ ದಿಕ್ಕು ತಪ್ಪಿಸಲು ಮತ್ತು ತಪ್ಪು ಮಾರ್ಗದರ್ಶನ ನೀಡಲು ಸ್ವಂತಂತ್ರವಾದ ಏಕೈಕ ಶಿಕ್ಷಿತ ವರ್ಗವಾದರು. ಏಕೆಂದರೆ ಭಾರತೀಯ ಸಮಾಜದಲ್ಲಿ ಇಂತಿಂತಹವರಿಗೆ ಇಂತಹದ್ದೆ ಕೆಲಸ, ಮತ್ತು ಆ ಕೆಲಸ ಮಾಡುವವರು ಇಂತಹದ್ದೆ ಜಾತಿ ಎಂದು ಮಾರ್ಗದರ್ಶನ ನೀಡಿದ್ದು ಅವರೇ ಅಲ್ಲವೆ. ಏಕೆಂದರೆ ಮನು ಎಂದು ಕರೆಸಿಕೊಳ್ಳುವ ಸುಮತಿ ಭಾರ್ಗವನೆಂಬ ಆತ ಬ್ರಾಹ್ಮಣನೇ ಅಲ್ಲವೇ? ಮತ್ತು ಆತ ಬರೆದ ಮನು ಧರ್ಮಶಾಸ್ತ್ರ ಬ್ರಾಹ್ಮಣರ ಏಳ್ಗೆಗಾಗಿಯೇ ಅಲ್ಲವೇ? ಹೀಗಿರುವಾಗ ಮನುಸ್ಮೃತಿಎಂಬ ಪ್ರಾಚೀನ ಕಾಲದ ಕಾನೂನಿನ ಮೂಲಕ ಪಡೆದಿರುವ ಆ ಅಮೂಲ್ಯ ಮೀಸಲಾತಿ ಇರುವಾಗ ಅವರು ಸಮಾಜದಲ್ಲಿ ಉನ್ನತವರ್ಗದವರಾಗಿರದೆ ಇನ್ನೇನಾಗಿರಲು ಸಾಧ್ಯ? ಉನ್ನತವರ್ಗದವರಾಗಿರಲಿ, ಅಭ್ಯಂತರವೇನಿಲ್ಲ. ಅದು ಅವರ ಹಕ್ಕು. ಪ್ರಶ್ನೆ ಏನೆಂದರೆ ಹಿಂದುಳಿದವರ್ಗದವರಿಗೆ ಮತ್ತು ದಲಿತರಿಗೆ ಪ್ರಸ್ತುತ ಸಂವಿಧಾನಬದ್ಧವಾಗಿ ನೀಡಲ್ಪಡುತ್ತಿರುವ ಅದೇ ಹಕ್ಕುಗಳನ್ನು ವಿರೋಧಿಸುವುದೇಕೆ? ಎನ್ನುವುದು. ಮಾತೆತ್ತಿದರೆ ಪ್ರತಿಭೆ, ಪ್ರತಿಭೆ ಎನ್ನುತ್ತಾರೆ. Merit? My foot! D meritಅಥವಾ ಪ್ರತಿಭೆ ಅವರ ವ್ಯಕ್ತಿಗತವಾಗಿ ಬಂದದ್ದಲ್ಲ. ಅದು ಮನುಸ್ಮೃತಿ ಮೂಲಕ ಅವರು ಪಡೆದ ಸಾಮಾಜಿಕ ಮೀಸಲಾತಿಯಿಂದ ಪಡೆದದ್ದು. ಹೀಗಿರುವಾಗ ಅಂತಹದ್ದೆ ಮೀಸಲಾತಿಯನ್ನು, ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಈ ದೇಶದ ಶೋಷಿತ ವರ್ಗಗಳು ಪಡೆದರೆ ಕರುಬುವುದೇಕೆ?   ಒಂದಂತು ನಿಜ, ಮನುಸ್ಮೃತಿ ಸ್ವಯಂಭೂ (ದೈವ ಸ್ವರೂಪಿ) ಇರಬಹುದು. ಆದರೆ ಭಾರತದ ಸಂವಿಧಾನ ಮತ್ತು ಶೋಷಿತರಿಗೆ ಅದು ನೀಡಿರುವ ಹಕ್ಕುಗಳು? ಮಹಾಮಾನವ ಅಂಬೇಡ್ಕರ್ ಸ್ವರೂಪಿ. ಹಾಗಿದ್ದರೆ ಇಲ್ಲಿ ಯಾರು ಗ್ರೇಟ್? ದೈವ ಅಥವಾ ಮಾನವ? Man is always great. Because he is the creator of god!

ರಘೋತ್ತಮ ಹೊ.ಬ

ಚಾಮರಾಜನಗರ 571313

ಮೊ:9481189116


ಗಾಂಧೀಜಿ ಬಗ್ಗೆ ತಿಳಿಯಲು ಅಂಬೇಡ್ಕರ್ರವರ ಬರಹಗಳನ್ನು ಓದುವ ಪ್ರಯತ್ನ ಮಾಡಿ !

08/07/2010

Reply to ಡಾ|| ಪಾಟೀಲ ಪುಟ್ಟಪ್ಪ’ article (ಗಾಂಧೀಜಿಯನ್ನು ತಿಳಿಯುವ ತೊಂದರೆ ತೆಗೆದುಕೊಳ್ಳಿ!) 21 June 2010, Prajavani Daily.

ಡಾ||ಪಾಟೀಲ ಪುಟ್ಟಪ್ಪ ನವರು ಅಂಬೇಡ್ಕರ್ ರವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಲು ಗಾಂಧಿ ಕಾರಣರಲ್ಲ ವೆಂಬ ನನ್ನ ಮಾತಿಗೆ ತುಂಬಾ ವ್ಯಾಕುಲಗೊಂಡಂತೆ ಕಾಣುತ್ತದೆ. ಇದಕ್ಕಾಗಿ ‘ಗಾಂಧೀಜಿಯನ್ನು ತಿಳಿಯುವ ತೊಂದರೆ ತೆಗೆದುಕೊಳ್ಳಿ ಎಂದವರು ಆದೇಶ ನೀಡಿದ್ದಾರೆ. ಆ ಕಾಲದ ವಿದ್ಯಮಾನಗಳನ್ನು ತಿಳಿದವರಂತೆ ಮಾತನಾಡಿದ್ದಾರೆ. ಆ ಕಾಲದಲ್ಲಿ ಏನು ನಡೆಯಿತು ಎನ್ನುವುದು ಅವರಿಗೇನು ಗೊತ್ತು? ಎಂದವರು ಸಿಡಿದಿದ್ದಾರೆ. ಇದೇ ಮಾತುಗಳು ಪುಟ್ಟಪ್ಪನವರಿಗೂ ಅನ್ವಯಿಸುತ್ತದೆಂಬ ಅಂಶವನ್ನು ಅವರು ಅರಿಯುವುದು ಸೂಕ್ತ. ಐತಿಹಾಸಿಕ ಪ್ರಜ್ಞೆ ಬಗ್ಗೆ ಗೌರವ ಇರುವ ಯಾವುದೇ ವ್ಯಕ್ತಿ ಇಂತಹ ಮಾತನ್ನು ಆಡಲಾರರು.

ಅಂಬೇಡ್ಕರ್ರವರು ನೆಹರೂ ಸಂಪುಟದಲ್ಲಿ ಕಾನೂನು ಮಂತ್ರಿಗಳಾಗಿದ್ದ ಕಾರಣದಿಂದಲೇ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದರೆನ್ನುವ ಅಂಶ ತೀರಾ ಬಾಲಿಷವಾಗಿದೆ. ಅದೇ ರೀತಿ ಶ್ರೀಶಿವಸುಂದರ್ ರವರ ಕಾಂಗ್ರೆಸ್ಗೆ ಅಂಬೇಡ್ಕರ್ರವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದು ಒಂದು ತಂತ್ರವಾಗಿತ್ತೆ ಎಂಬ ಅಭಿಪ್ರಾಯವೂ ಸಹ ಅಮಾನವೀಯ ಮನುಸ್ಮೃತಿಗೆ ಕೊನೆ ಹಾಡಿ ಮಾನವತಾವಾದದ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿಯ ಚಾರಿತ್ರಿಕ ಸಾಧನೆ ಮತ್ತು ದಾಖಲೆಗೆ ಅಗೌರವ ತೋರಿಸಿದಂತಾಗಿದೆ.
ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. ಜುಲೈ 1946 ರಲ್ಲಿ ರಾಜ್ಯಾಂಗ ರಚನಾ ಸಭೆಗೆ ನಡೆದ ಚುನಾವಣೆಯಲ್ಲಿ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ ರವರು South Bombay ಯಿಂದ ಸ್ಪಧರ್ಿಸಿದಾಗ ಕಾಂಗ್ರೆಸ್ ಮತ್ತು ಎಡ ಪಂಥೀಯರು ಅವರ ವಿರುದ್ಧ ಅಂಬೇಡ್ಕರ್ರವರ ಆಪ್ತ ಸಹಾಯಕರಾಗಿದ್ದ ಕಜ್ರೋಳಕರ್ರವರನ್ನು ಒಮ್ಮತದ ಅಭ್ಯಥರ್ಿಯಾಗಿ ನಿಲ್ಲಿಸಿ ಅಂಬೇಡ್ಕರ್ ರವರನ್ನು ಸೋಲಿಸುತ್ತಾರೆ. ಇದರಿಂದ ದಿಗಿಲುಗೊಂಡ ಪಶ್ಚಿಮ ಬಂಗಾಳದ ಚಂಡಾಲರು ಮತ್ತು ಮುಸ್ಲಿಂರು ಅಂಬೇಡ್ಕರ್ರವರನ್ನು ಸಂವಿಧಾನ ರಚನಾ ಸಮಿತಿಗೆ ಕಳುಹಿಸಲೇಬೇಕೆಂಬ ಹಠದಿಂದ ಜೈಸೂರ್ ಮತ್ತು ಖುಲ್ನಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶ್ರೀ.ಜೋಗೇಂದ್ರಾಥ್ ಮಂಡಲ್ರವರಿಂದ ರಾಜೀನಾಮೆ ಕೊಡಿಸಿ ಬಾಬಾ ಸಾಹೇಬ್ ಡಾ||ಅಂಬೇಡ್ಕರ್ರವರನ್ನುನಿಲ್ಲಿಸಿ ಗೆಲ್ಲಿಸುತ್ತಾರೆ. ನಂತರ 1947ರ ಜುಲೈ 2 ರಂದು ದೇಶ ವಿಭಜನೆ ಸಂದರ್ಭದಲ್ಲಿ ಅಂಬೇಡ್ಕರ್ರವರು ಪ್ರತಿನಿಧಿಸಿದ್ದ ಜೈಸೂರ್ ಮತ್ತು ಖುಲ್ನಾ ಪ್ರದೇಶವನ್ನು ಪೂರ್ವ ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಗುತ್ತದೆ. ಇದರಿಂದ ಅಂಬೇಡ್ಕರ್ರವರು ಪಾಕಿಸ್ತಾನದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ವಾಸ್ತವವಾಗಿ ವಿಭಜನಾ ಸಿದ್ದಾಂತವು ಶೇ. 50 ಕ್ಕಿಂತ ಹೆಚ್ಚು ಮುಸ್ಲಿಂರಿರುವ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂಬುದಾಗಿತ್ತು. ಆದರೆ ಜೈಸೂರ್ ಮತ್ತು ಖುಲ್ನಾದಲ್ಲಿ ಮುಸ್ಲಿಂರ ಜನಸಂಖ್ಯೆ ಶೇ. 48 ರಷ್ಟು, ಅಸ್ಪೃಶ್ಯರು ಮತ್ತು ಹಿಂದೂಗಳ ಸಂಖ್ಯೆ 52% ರಷ್ಟಿತ್ತು. ಆದರೂ ಸಹ ಅಂಬೇಡ್ಕರ್ರವರನ್ನು ರಾಜ್ಯಾಂಗ ರಚನಾ ಸಭೆಯಿಂದ ಹೊರಗಿಡಬೇಕೆಂಬ ಕುತಂತ್ರದಿಂದ ವಿಭಜನಾ ಸಿದ್ಧಾಂತವನ್ನು ಕಡೆಗಣಿಸಿ ಜೈಸೂರ್ ಮತ್ತು ಖುಲ್ನಾ ವನ್ನು ಪೂರ್ವ ಪಾಕಿಸ್ತಾನಕ್ಕೆ ಬಿಟ್ಟು ಕೊಡಲಾಗುತ್ತದೆ. ನನ್ನ ಜನ ಭಾರತದಲ್ಲಿರುವುದರಿಂದ ಪಾಕಿಸ್ತಾನದ ಸಂವಿಧಾನ ರಚನಾ ಸಭೆಯಲ್ಲಿ ನಾನೇನು ಮಾಡಲಿ ಎಂದು ಡಾ||ಅಂಬೇಡ್ಕರ್ರವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ಇಂಗ್ಲೆಂಡ್ಗೆ ತೆರಳಿದ ಅಂಬೇಡ್ಕರ್ರವರು ಜುಲೈ 7 ಮತ್ತು 8 ರಂದು ಬ್ರಿಟನ್ ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಚಚರ್ಿಸಿ ತಮಗಾಗಿರುವ ಅನ್ಯಾಯವನ್ನು ಮನದಟ್ಟುಮಾಡಿಕೊಡುತ್ತಾರೆ. ಅಂಬೇಡ್ಕರ್ರವರಿಗೆ ಆಗಿದ್ದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟೀಷ್ ಸಕರ್ಾರ ಜೈಸೂರ್ ಮತ್ತು ಖುಲ್ನಾವನ್ನು ಭಾರತದಲ್ಲೇ ಉಳಿಸುವಂತೆ ಇಲ್ಲದಿದ್ದರೆ ಬೇರಾವುದಾದರೂ ಕ್ಷೇತ್ರದಿಂದ ಅಂಬೇಡ್ಕರ್ರವನ್ನು ರಾಜ್ಯಾಂಗ ಸಭೆಗೆ ಆಯ್ಕೆ ಮಾಡುವಂತೆ ನೆಹರೂರವರಿಗೆ ಸೂಚಿಸುತ್ತದೆ. ಇಲ್ಲದಿದ್ದರೆ ಸ್ವಾತಂತ್ರ್ಯವನ್ನು ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತದೆ. ಇದರಿಂದ ಗಾಬರಿ ಬಿದ್ದ ಕಾಂಗ್ರೆಸ್ನವರು ಪೂನಾದಿಂದ ಆಯ್ಕೆಯಾಗಿದ್ದ ಬ್ಯಾರಿಸ್ಟರ್ ಜಯಕರ್ರವರಿಂದ ರಾಜೀನಾಮೆ ಕೊಡಿಸಿ ಜುಲೈ 9, 1947 ರಂದು ಬಾಬಾ ಸಾಹೇಬ್ ಅಂಬೇಡ್ಕರ್ರವರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ.
ರಾಜ್ಯಾಂಗ ರಚನಾ ಸಭೆಗೆ ಸದಸ್ಯರಾಗದಂತೆ ಬಾಬಾ ಸಾಹೇಬರಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕಿದ ಜನ ಅವರನ್ನೇ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲು ಬ್ರಿಟೀಷರು ಮತ್ತು ಬಾಬಾ ಸಾಹೇಬರಿಗಿದ್ದ ಸಂವಿಧಾನಾತ್ಮಕ ಪ್ರಚಂಡ ಜ್ಞಾನವೇ ಕಾರಣವಾಗಿತ್ತು. ಅಲ್ಲದೆ ಅಂದು ಸಂವಿಧಾನದ ಕರಡು ಸಿದ್ಧಪಡಿಸ ಬಲ್ಲವರಾರಿದ್ದರು? ಶ್ರೀ.ಟಿ.ಟಿ.ಕೃಷ್ಣಮೂತರ್ಿರವರು ದಿನಾಂಕ 4-11-1949 ರಂದು ರಾಜ್ಯಾಂಗ ರಚನಾ ಸಭೆಯಲ್ಲಿ ಹೇಳಿದ ಮಾತನ್ನು ಗಮನಿಸಿ ಸಂವಿಧಾನದ ಕರಡು ಸಮಿತಿಗೆ 7 ಜನ ಸದಸ್ಯರನ್ನು ನೇಮಿಸಲಾಗಿತ್ತು. ಇವರಲ್ಲಿ ಒಬ್ಬರು ಮೃತರಾದರು, ಮತ್ತೊಬ್ಬರು ವಿದೇಶಕ್ಕೆ ಹೋದವರು ಹಿಂದಿರುಗಿ ಬರಲೇ ಇಲ್ಲ, ಇನ್ನೊಬ್ಬರು ಅನಾರೋಗ್ಯದ ಕಾರಣದಿಂದ ಸಮಿತಿಯ ಕಾರ್ಯಕಲಾಪಗಳಿಂದ ಹೊರಗೇ ಉಳಿದರು, ಇನ್ನಿಬ್ಬರು ವಿವಿಧ ಕಾರಣಗಳಿಂದ ಭಾಗವಹಿಸಲಿಲ್ಲ. ಅಂತಿಮವಾಗಿ ಈ ಜವಾಬ್ದಾರಿ ಸಂಪೂರ್ಣವಾಗಿ ಡಾ||ಅಂಬೇಡ್ಕರ್ರವರ ಮೇಲೇಯೇ ಬಿತ್ತು. ಅದನ್ನವರು ನಮ್ಮೆಲ್ಲರ ನಿರೀಕ್ಷೆ ಮೀರಿ ನಿಭಾಯಿಸಿ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ರಚನೆಯಂತಹ ಶ್ರೇಷ್ಠವಾದ ಕೆಲಸದ ಬಗ್ಗೆ ನೇಮಕಗೊಂಡಿದ್ದ ಸದಸ್ಯರು ಎಂಥಹ ಕಾಳಜಿ ಇಟ್ಟುಕೊಂಡಿದ್ದರೆಂಬ ಹಿನ್ನೆಲೆಯಲ್ಲಿ ಬಾಬಾ ಸಾಹೇಬರ ಶ್ರಮವನ್ನು ನೋಡಬೇಕು.
ಡಾ||ಅಂಬೇಡ್ಕರ್ರವರು 1946ರಲ್ಲಿ ರಾಜ್ಯಾಂಗ ರಚನಾ ಸಭೆಗೆ ಸಲ್ಲಿಸುವುದಕ್ಕಾಗಿ ಬರೆದ States and Minorites ಕೃತಿಯೇ ಇಂದಿನ ಸಂವಿಧಾನದ ಮೂಲವಾಗಿದೆ. ಈ ಪ್ರಸ್ತಾವನೆಯನ್ನು ಸಂವಿಧಾನ ರಚನಾ ಸಭೆಗೆ ಸಲ್ಲಿಸುವುದಕ್ಕೆ ಮೊದಲೇ ಅಂಬೇಡ್ಕರ್ರವರ ಕೆಲವು ಹಿಂದೂ ಸ್ನೇಹಿತರ ಒತ್ತಾಯದ ಮೇರೆಗೆ ಪುಸ್ತಕ ರೂಪದಲ್ಲಿ ಹೊರಬಂದು ಎಲ್ಲಾ ಸದಸ್ಯರ ಕೈ ಸೇರಿತ್ತು. ಸಂವಿಧಾನದ ಕರಡು ಸಿದ್ಧಪಡಿಸಿಕೊಡುವಂತೆ ಹೊರದೇಶಗಳತ್ತ ನೋಡುತ್ತಿದ್ದ ನೆಹರೂ ಮತ್ತವರ ಮಿತ್ರರು ಅಂತಿಮವಾಗಿ ಅಂಬೇಡ್ಕರ್ರವರನ್ನು ಅಧ್ಯಕ್ಷರಾಗಿ ನೇಮಿಸಲು ಈ ಕೃತಿಯೂ ಒಂದು ಕಾರಣವಾಗಿದೆ.
ಪಾಪು ರವರ ಗಾಂಧೀಜಿ ಇಲ್ಲದಿದ್ದರೆ ನಾನು ಮನುಷ್ಯನಾಗುತ್ತಿರಲಿಲ್ಲ ಎಂಬ ಮಾತು ಅವರ ಆದರ್ಶ ಪುರುಷ ಅಣ್ಣ ಬಸವಣ್ಣನಿಗೆ ಮಾಡಿದ ಅವಮಾನವೇ ಸರಿ. ಎಲ್ಲಾ ಜಾತಿಗಳನ್ನೊಳಗೊಂಡ ಅನುಭವ ಮಂಟಪ ಕಟ್ಟಿದ ಬಸವಣ್ಣನೆಲ್ಲಿ? ಮನುಧರ್ಮ ಶಾಸ್ತ್ರವನ್ನು ಕೊಂಡಾಡಿ ವರ್ಣ ವ್ಯವಸ್ಥೆಯನ್ನು ಸಮಥರ್ಿಸಿದ ಗಾಂಧೀಜಿ ಎಲ್ಲಿ?
ಗಾಂಧೀಜಿ ಬಗ್ಗೆ ತಿಳಿಯಬೇಕಾದರೆ ಪಾಟೀಲ್ ಪುಟ್ಟಪ್ಪನವರು ಬಾಬಾ ಸಾಹೇಬರ ಬರಹಗಳು ಮತ್ತು ಭಾಷಣಗಳನ್ನು ಓದುವ ಪ್ರಯತ್ನ ಮಾಡಲಿ.

-ರಾಜಶೇಖರಮೂರ್ತಿ

ವ್ಯವಸ್ಥಾಪಕರು
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಜಿಲ್ಲಾಡಳಿತ ಭವನ, ಚಾಮರಾಜನಗರ