Nalvadi Krishnaraja Wodeyar : Ruler Mysore Princeley State

30/05/2011

ಮರೆಯೋದುಂಟೆ ಮೈಸೂರು ದೊರೆಯ: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ

 

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಇದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ರವರ’ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿಮರ್ಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜಷರ್ಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ. ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿಜರ್ಾ ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು.

1894 ರಲ್ಲಿ ತಂದೆ ಚಾಮರಾಜ ಒಡೆಯರ್ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ್ ಆಗಿ ನೇಮಿಸಲ್ಪಟವರು ಸರ್. ಫ್ರೇಜರ್ರವರು. ಮುಂದೆ 1902 ಆಗಸ್ಟ್ 8ರಂದು ಬ್ರಿಟಿಷ್ ರಿಜೆನ್ಸಿಯಿಂದ ಅಧಿಕಾರ ಸ್ವೀಕರಿಸುತ್ತಾ, ಯುವರಾಜ ಕೃಷ್ಣರಾಜರು ತಮ್ಮ ಮುಂದಿನ ಆಳ್ವಿಕೆ ಹೇಗಿರುತ್ತದೆ ಂಬುದಕ್ಕೆ ಹೀಗೆ ನುಡಿಯುತ್ತಾರೆ, ನನ್ನ ಮೇಲೆ ಹೊರಿಸಲ್ಪಟ್ಟಿರುವ ಭಾರವು ಎಷ್ಟು ಮಹತ್ತರವಾದುದು ಎಂಬುದನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ. ಇದನ್ನು ಮಾತಿನಿಂದಲ್ಲ ಕೃತಿಯಿಂದ ಸಾಬೀತುಪಡಿಸಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ, ನನ್ನ ಪ್ರಜೆಗಳ ಸುಖ ಸಂತೋಷಗಳಿಗೆ ಎಂದೂ ಕುಂದುಂಟಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಸಂಸ್ಥಾನದ ಸ್ಥಿತಿಯು ಇನ್ನೂ ಉತ್ತಮವಾಗುವಂತೆ ಮಾಡುತ್ತೇನೆ. ಯಾರ ಭಯವಾಗಲಿ, ದಾಕ್ಷಿಣ್ಯವಾಗಲಿ ಇಲ್ಲದೇ ಯಾರ ತಂತ್ರಕ್ಕೂ ಹಿಂಜರಿಯದೇ, ಯಾವ ಮಂತ್ರಕ್ಕೂ ಒಳಗಾಗದೇ ನನ್ನ ಪ್ರಜೆಗಳ ನಿರಂತರ ಹಿತ ರಕ್ಷಣೆಗಾಗಿ ರಾಜ್ಯ ಭಾರ ನಿರ್ವಹಿಸುತ್ತೇನೆ ಎನ್ನುತ್ತಾರೆ. ಹಾಗಿದ್ದರೆ ಮಹಾರಾಜರು ನುಡಿದಂತೆ ನಡೆದರೆ? ತಮ್ಮ ಮಾತನ್ನು ಜೀವನದುದ್ದಕ್ಕೂ ಉಳಿಸಿಕೊಡರೆ? ಖಂಡಿತ 38 ವರ್ಷಗಳ ಅವರ ಭವ್ಯ ನಿದರ್ಾಕ್ಷಿಣ್ಯ ಆಡಳಿತ ಅದಕ್ಕೆ ಸಾಕ್ಷೀಭೂತವಾಗಿದೆ. ಆಡಳಿತ ಚುಕ್ಕಾಣಿ ಹಿಡಿದ ಮಹಾರಾಜರು ತಾನ್ನೊಬ್ಬ ರಾಜ ಇಡೀ ರಾಜ್ಯವೇ ನನ್ನ ಬಿಗಿ ಮುಷ್ಠಿಯಲ್ಲಿರಬೇಕು ಎಂದುಕೊಳ್ಳಲಿಲ್ಲ. ಬದಲಾಗಿ ತಾನ್ನೊಬ್ಬ ಜನ ಸೇವಕ ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಅಪ್ಪಟ ಪ್ರಜಾಪ್ರಭುತ್ವವಾದಿ ಅರಸು ಎನ್ನಿಸಿಕೊಂಡರು. ಅದಕ್ಕಾಗಿ ಪ್ರಜಾಪ್ರತಿನಿಧಿ ಸಭೆ ಯನ್ನು ಬಲಗೊಳಿಸಿ 1907ರಲ್ಲಿ ನ್ಯಾಯಾವಿಧಾಯಕ ಸಭೆಯನ್ನು ಸ್ಥಾಪಿಸಿ ಸರ್ವರಿಗೂ ಅದರಲ್ಲಿ ಪ್ರಾತಿನಿದ್ಯ ನೀಡಿ ಸಮಾನತೆ ಮೆರೆದರು. ಇಡೀ ರಾಜ್ಯವನ್ನೇ ತಮ್ಮ ಆಸ್ತಿಯೆಂದು ಪರಿಗಣಿಸದೆ ತಮ್ಮ ಸಂಸಾರಕ್ಕೆ ಎಷ್ಟು ಹಣ ಬೇಕೆಂಬುದನ್ನು ಕೂಡ ಅಯ-ವ್ಯಯದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಅನುಮೊದನೆ ಪಡೆದುಕೊಳ್ಳಲು ಪ್ರಾರಂಭಿಸಿದರು. ಪ್ರಾಯಶಃ ಮಹಾರಾಜರ ಈ ಕ್ರಮ ಇಡೀ ಭರತ ಖಂಡದಲ್ಲೆಯೇ ಅಪರೂಪದ್ದು.

 ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಮೀಸಲಾತಿ ಚಳುವಳಿಯ ಇತಿಹಾಸದಲ್ಲೆ ಸುವಣರ್ಾಕ್ಷರಗಳಲ್ಲಿ ಬರೆದಿಡುವಂತಹದ್ದು. 1902ರಲ್ಲಿ ಕೊಲ್ಲಪುರ ಸಂಸ್ಥಾನದಲ್ಲಿ ಅಲ್ಲಿಯ ಅರಸು ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ. 50 ಮೀಸಲಾತಿ ನೀಡಿದ ನಂತರ ಅದರಿಂದ ಸ್ಪೂತರ್ಿಗೊಂಡ ಅವರು 1927ರಲ್ಲಿ ಮಿಲ್ಲರ್ (Miller) ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ (Non-Brahmin Reservation in Mysore State) ಶೇ 75% ಮೀಸಲಾತಿ ನೀಡುತ್ತಾರೆ (Backward Catse Reservation in Mysore State). ತನ್ಮೂಲಕ ಸಾಮಾಜಿಕ ನ್ಯಾಯದಲ್ಲಿ ಹೊಸ ಶಕೆಗೆ ನಾಂದಿಹಾಡುತ್ತಾರೆ. ಮಹಾರಾಜರ ಈ ನಿಧರ್ಾರದ ವಿರುದ್ಧ ಅಂದಿನ ದಿವಾನರಾಗಿದ್ದ ಸರ್. ಎಂ ವೀಶ್ವೇಶ್ವರಯ್ಯನವರು (Mokshagundam Visvesvarayya) ಜಾತಿ ಆಧಾರಿತ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎನ್ನುತ್ತಾರೆ.

 

ಅಚ್ಚರಿ ಎಂದರೆ ಮಹಾರಾಜರು ಇದರಿಂದ ವಿಚಲಿತರಾಗುವುದಿಲ್ಲ. ಬದಲಿಗೆ ಬೇಸತ್ತ ವೀಶ್ವೇಶ್ವರಯ್ಯನವರು ನೀಡುವ ರಾಜೀನಾಮೆಯನ್ನು ಯಾವುದೇ ಗತ್ಯಂತರವಿಲ್ಲದೆ ಸ್ವೀಕರಿಸುತ್ತಾರೆ!. ಇರಲಿ, ತಮ್ಮ 38 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಮಹಾರಾಜರು ಸಾಧನೆಯ ಸುರಿಮಳೆಯನ್ನೆ ಸುರಿಸುತ್ತಾರೆ. ದೇವದಾಸಿ ಪದ್ದತಿಯನ್ನು ನಿಮರ್ೂಲನೆಗೊಳಿಸಿದ್ದು ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾಜರ್ಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು ಮಹಾರಾಜರ ಸಾಮಾಜಿಕ ಕಳಕಳಿಯ ಬಿಂಬಗಳಾಗಿವೆ. ಜಾತಿ ಆಧಾರದ ಮೇಲೆ ಯಾರನ್ನು ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪ್ರವೃತ್ತಿಯನ್ನು ಸಕರ್ಾರವು ಎತ್ತಿಹಿಡಿಯಲಾರದು ಎಂಬ ಗೆಜೆಟ್ ಪ್ರಕಟಣೆಯ ಮೂಲಕ ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅವರು ಶಿಕ್ಷಣವೇ ಎಲ್ಲ ಅಭಿವದ್ಧಿಗೂ ಮೂಲ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಾರೆ.

1916 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಪ್ರಾರಂಬಿಸಿದ್ದು, ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದು, 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಿಸಿದ್ದು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿಗೊಳಿಸಿದ್ದು ಮತ್ತು ವಯಸ್ಕರಿಗಾಗಿ 7000 ವಯಸ್ಕರ ಶಾಲೆಗಳನ್ನು ಪ್ರಾರಂಭಿಸಿದ್ದು ಶಿಕ್ಷಣದ ಬಗ್ಗೆ ಮಹಾರಾಜರ ಆದ್ಯತೆಯನ್ನು ತೋರಿಸುತ್ತದೆ. ಹಾಗಂತ ಅವರು ಕೃಷಿ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ವಿಶ್ವ ವಿಖ್ಯಾತ ಕೃಷ್ಣ ರಾಜ ಸಾಗರ ನಿಮರ್ಾಣಗೊಂಡದ್ದು ಇವರ ಕಾಲದಲ್ಲೇ ಇದರ ಮೂಲಕ ಆ ಕಾಲದಲ್ಲೇ 1,20,000 ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭವಾದದ್ದು ಕೂಡ ಇವರ ಕಾಲದಲ್ಲೇ. 1902ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಅಡ್ಡಲಾಗಿ ಜಲ ವಿದ್ಯುತ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿದ್ದು, 30,000 ವೋಲ್ಟ್ ವಿದ್ಯುತ್ತನ್ನು ಕೋಲಾರ ಚಿನ್ನದ ಗಣಿಗೆ ವಗರ್ಾಯಿಸಿದ್ದು ಅಚ್ಚರಿಯೆನಿಸಿದರೂ ಸತ್ಯ ಈ ಸಂದರ್ಭದಲ್ಲಿಯೇ ಜನರು ಮಹಾರಾಜರನ್ನು ಕೃಷ್ಣ ರಾಜ ಭೂಪ ಮನೆ ಮನೆ ದೀಪ ಎಂದದ್ದು. ಏಕೆಂದರೆ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದು, ಮೈಸೂರು ಸೇರಿದಂತೆ ಇತರ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಬೆಳಗಿದ್ದು ಇವರ ಕಾಲದಲ್ಲೇ ಅದಕ್ಕೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಜ ನಾಲ್ವಡಿ ಕೃಷ್ಣ ಒಡೆಯರ್ ಸಾಧನೆ ಅನನ್ಯ. ಈ ಕಾರಣದಿಂದಲೇ ಒಂದೆಡೆ ಡಿ.ವಿ.ಜಿಯವರು ನನ್ನ ತಿಳುವಳಿಕೆಯಲ್ಲಿ 1881ರಿಂದ 1940ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ ಎಂದಿರುವುದು.

 ಹಾಗೇಯೇ 1938ರ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಭರತ ಖಂಡದಲ್ಲಿಯೇ ಮೈಸೂರು ಮಾದರಿ ಸಂಸ್ಥಾನ ಎಂದು ದಾಖಲಿಸಿರುವುದು. ಹಾಗಿದ್ದರೆ ಇಷ್ಟೆಲ್ಲ ಸಾಧನೆಗೈದ ನಾಲ್ವಡಿಯವರಿಗೆ ಸಮಸ್ಯೆಗಳು ಕಾಡಲಿಲ್ಲವೇ? ಎನ್ನುವುದಾದರೆ ಉತ್ತರ ಹೌದು. ಬ್ರಾಹ್ಮಣೇತರರಿಗೆ ಶೇ. 75 ಮಿಸಲಾತಿ ಜಾರಿ ಮಾಡಿದ್ದರಿಂದ ಕುದ್ದು ಹೋದ ಪಟ್ಟಭದ್ರರು 1938 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಮಾಡಿ ಮಹಾರಾಜರ ವಿರುದ್ಧ ಪಿತೂರಿ ನಡೆಸುತ್ತವೆ ಮತ್ತು ಇಂತಹದೇ ಮತ್ತೊಂದು ಘಟನೆಯಲ್ಲಿ ವಿಧುರಾಶ್ವಥ್ಥ ಎಂಬಲ್ಲಿ ಧ್ವಜಾರೋಹಣ ನಡೆದು ಗೋಲಿಬಾರ್ ಮಾಡಲಾಗುತ್ತದೆ. ದುರಂತವೆಂದರೆ ಈ ಗೋಲಿಬಾರ್ಗೆ ಮಹಾರಾಜರು ಮತ್ತು ದಿವಾನರು ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಮಹಾರಾಜರು ತೀವ್ರವಾಗಿ ಘಾಸಿಗೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳ ನಡುವೆ ಅವರ ಬೆನ್ನೆಲುಬಂತಿದ್ದ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ರವರು ಆಕಾಲಿಕ ಮರಣಕ್ಕೀಡಾಗುತ್ತಾರೆ. ಇದು ಮಹಾರಾಜರನ್ನು ಇನ್ನಷ್ಟು ಆಘಾತಕ್ಕೀಡುಮಾಡುತ್ತದೆ, ಇಂತಹ ಆಘಾತ ಒತ್ತಡಗಳು ಅಂತಿಮವಾಗಿ ಬಲಿತೆಗೆದುಕೊಳ್ಳುವುದು ಸ್ವತಃ ಮಹಾರಾಜರನ್ನೇ, ಜುಲೈ 31, 1940 ರಂದು ತೀವ್ರ ಹೃದಯಾಘಾತಕ್ಕೆ ಒಳಗಾದ ರಾಜಷರ್ಿ, ಪ್ರಜಾ ಚಿಂತಕ, ಸಾಮಾಜಿಕ ಪರಿವರ್ತನೆಯ ರೂವಾರಿ ನಾಲ್ವಡಿ ಕೃಷ್ಣ ರಾಜ ಒಡೆಯರ್ರ ಪವಿತ್ರ ಚೇತನವು ಆಗಸ್ಟ್ 03 1940 ರಂದು ಅವರ ದೇಹವನ್ನು ಬಿಟ್ಟು ಆಗಲುತ್ತದೆ, ತನ್ಮೂಲಕ ತನ್ನ ಲಕ್ಷಾಂತರ ದೇಶವಾಸಿಗಳನ್ನು ತಬ್ಬಲಿ ಮಾಡುತ್ತದೆ.

ಆಡಳಿತ ಪ್ರಭೃತಿಗಳಲ್ಲಿ ಭ್ರಷ್ಟಚಾರವೇ ಸದಾಚಾರವಾಗಿ, ಸಾಮಾಜಿಕ ಕಳಕಳಿ, ಜನ ಸೇವೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಾಲ್ವಡಿಯವರಂತಹ ಮಾಹಾಚೇತನಗಳ ಅಗತ್ಯ ಈಗ ತುಂಬಾ ಇದೆ. ಇಂತಹ ಮಹಾಚೇತನ ಪ್ರತಿಯೊಬ್ಬರ ಎದೆಯಲ್ಲಿ ತುಂಬಲಿ. ಅವರ ಉಜ್ವಲ ಇತಿಹಾಸ ಪ್ರತಿಯೊಬ್ಬರ ಮನದಲ್ಲಿ ಅನುರಣಿಸಲಿ ಎಂಬುದಷ್ಟೇ ಸದ್ಯದ ಕಳಕಳಿ. ಕಡೆಯದಾಗಿ ಕವಿ ಹನಸೋಗೆ ಸೋಮಶೇಖರ್ರವರ ಕವನದ ಒಂದು ಸಾಲು ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ…

ರಘೋತ್ತಮ ಹೊ.ಬ., ಚಾಮರಾಜನಗರ

Ho Ba Raghothama

ಮೊ: 9481189116


Fake Charge on Prof.Shivabasavaiah fantasm of untouchability-ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!

10/03/2011

ದಲಿತ ನೌಕರರ ವಿರುದ್ಧ ಸುಶಿಕ್ಷಿತ ಅಸ್ಪಶತಾಚರಣೆ!

ಶುಕ್ರವಾರ – ಮಾರ್ಚ್ -11-2011

ಮಾನ್ಯರೆ ಒಂದಂತೂ ನಿಜ, ಈ ಪ್ರಪಂಚದಲ್ಲಿ ದಲಿತನಾಗಿ ಹುಟ್ಟಬಾರದು. ಅದೇ ಹುಟ್ಟಿ ಸಣ್ಣ ಪುಟ್ಟ ತಪ್ಪುಮಾಡಿ ದರಂತೂ ಅಥವಾ ಆರೋಪ ಬಂದರಂತೂ ಅವನ ಕಥೆ ಮುಗಿದಂತೆಯೆ. ಮೈಸೂರು ವಿ.ವಿ. ಪ್ರಾಧ್ಯಾಪಕ ಶಿವಬಸವಯ್ಯನವರ ವಿಷಯದಲ್ಲಿ ಆಗುತ್ತಿರುವುದು ಇದೇ. ಅಂದಹಾಗೆ ಇದು ಶಿವಬಸವಯ್ಯನವರೊಬ್ಬರ ಕಥೆಯಲ್ಲ. ದಲಿತರ ವಿಷಯದಲ್ಲಿ ಹಿಂದೆ ಇಂತಹದ್ದು ಹಲವಾರು ನಡೆದಿವೆ. ಉದಾಹರಣೆಗೆ ಹೇಳುವುದಾದರೆ ಬೂಸಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದಿ.ಬಿ. ಬಸವಲಿಂಗಪ್ಪನವರ ರಾಜೀನಾಮೆ ಪಡೆದದ್ದು, ಕಾಪಿ ಹಗರಣದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್‌ರವರ ರಾಜೀನಾಮೆ ಪಡೆದದ್ದು, ಇತ್ತೀಚಿನ 2ಜಿ ಸ್ಪೆಕ್ಟ್ರಂ ಪ್ರಕರಣ. 

ಅಬ್ಬಾ ಹೇಳುತ್ತಾ ಹೋದರೆ ಅದೆಷ್ಟು ದಲಿತ ಮಂತ್ರಿಗಳು, ಆಧಿಕಾರಿಗಳು, ಪ್ರಾಧ್ಯಾಪಕರು, ಶಿಕ್ಷಕರು, ನೌಕರರು ಇಂತಹ ವ್ಯವಸ್ಥಿತ ಕುತಂತ್ರಿ ಅಸ್ಪಶತಾಚರಣೆಗೆ ಒಳಪಟ್ಟಿದ್ದಾರೆಯೋ? ಒಂದಂತು ನಿಜ . ಇವರೆಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಬಂಧಿಸಿ ಜೈಲಿಗೆ ಅಟ್ಟಲಾಗಿದೆ! ಆದರೆ? ಮಾಜಿ ಪ್ರದಾನಿ ದಿ. ರಾಜೀವ್ ಗಾಂಧಿ ಮತ್ತವರ ಕುಟುಂಬ ಬೋಫೋರ್ಸ್‌ನಂತಹ ಬೃಹತ್ ಹಗರಣದಲ್ಲಿ ಪಾಲ್ಗೊಂಡರೂ ಅವರಿಗೆ ಶಿಕ್ಷೆಯಾ ಗಲೇ ಇಲ್ಲ! ಶಿಕ್ಷೆ ಇರಲಿ ಪ್ರಕರಣವನ್ನೇ ಮುಚ್ಚಿಹಾಕಲಾ ಯಿತು! ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣಅಡ್ವಾಣಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾ ದರೂ ಅವರು ಆಧಿಕಾರದ ಮೇಲೆ ಅಧಿಕಾರ ಪಡೆ ಯುತ್ತಾ ಮನ್ನುಗ್ಗಿದರು. ಅದೇ ದಲಿತ ವರ್ಗಕ್ಕೆ ಸೇರಿದ ಬಂಗಾರು ಲಕ್ಷ್ಮಣ್? ಲಂಚ ಪ್ರಕರಣದಲ್ಲಿ ನೇಪಥ್ಯಕ್ಕೆ ಸರಿದರು!

ಒಂದು ದಾಖಲೆಯ ಪ್ರಕಾರ ಲೋಕಾಯುಕ್ತರ ಬಲೆಗೆ ಬಹುತೇಕ ಬೀಳುವವರು ಅಥವಾ ಬೀಳಿಸಲ್ಪಡುವವರು ದಲಿತ ನೌಕರರು! ಹಾಗಂತ ಸ್ವತಃ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮನವರೇ ಹೇಳಿ ದ್ದಾರೆ. ಹಾಗಿದ್ದರೆ ದಲಿತರು ಮಾತ್ರ ಭ್ರಷ್ಟರೇ? ದಲಿತರು ಮಾತ್ರ ವಿಷಯ ಲಂಪಟರೇ? ದಲಿತರು ಮಾಡಿದ್ದು ಮಾತ್ರ ಅಪರಾಧವೇ? ಇತ್ತೀಚಿನ ಬೆಳವಣಿ ಗೆಗಳನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.

ಯಾಕೆಂದರೆ 1.7 ಲಕ್ಷ ಕೋಟಿಯಂತಹ ಬೃಹತ್ ಹಗರಣದಲ್ಲಿ ಯಕಶ್ಚಿತ್ ಒಬ್ಬ ಮಂತ್ರಿ ದಲಿತ ವರ್ಗಕ್ಕೆ ಸೇರಿದೆ. ಎ.ರಾಜ ಬಲಿಯಾಗುತ್ತಾರೆ. ಆದರೆ ಅರುಣ್ ಶೌರಿ, ಧಯಾನಿಧಿ ಮಾರನ್, ನೀರಾ ರಾಡಿಯಾ, ಅನಂತ್ ಕುಮಾರ್ ಇವರೆಲ್ಲ? ರಾಜಾರೋಷವಾಗಿ ಓಡಾಡುತ್ತಾರೆ! ರೇಣುಕಾಚಾರ್ಯರಂತಹವರು ಲಜ್ಜೆಗೆಟ್ಟು ಬಹಿರಂಗವಾಗಿ ಮುತ್ತುಕೊಡುವಂತಹ ಹಗರಣದಲ್ಲಿ ಸಿಕ್ಕಿಬಿದ್ದರೂ ಮಂತ್ರಿಗಳಾಗುತ್ತಾರೆ! ವಾಸ್ತವ ಹೀಗಿರಬೇಕಾ ದರೆ ಶಿವಬಸವಯ್ಯನಂತಹವರು ಮಾಡಿದ ತಪ್ಪಾದರೂ ಏನು? ದಲಿತರಾಗಿ ಹುಟ್ಟಿದ್ದು! ಅಕಸ್ಮಾತ್ ಇವರೇನಾ ದರೂ ಮೇಲ್ವರ್ಗದಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗಾಗಲೇ ಅವರನ್ನು ರಕ್ಷಿಸುವ ಕಾರ್ಯ ಭರದಿಂದ ನಡೆದಿರುತಿತ್ತು! ಆದರೆ ಈಗ? ದಲಿತ ವರ್ಗಕ್ಕೆ ಸೇರಿದ ಶಿವಬಸವಯ್ಯ ನವರನ್ನು ಹಿಂದು ಮುಂದು ನೋಡದೆ ತಕ್ಷಣ ಅಮಾನತು ಮಾಡಲಾಗಿದೆ. ಜೈಲಿಗೆ ಅಟ್ಟಲಾಗಿದೆ! ದಲಿತ ನೌಕರರ ವಿರುದ್ಧ ವ್ಯವಸ್ಥಿತ ಮತ್ತು ಸುಶಿಕ್ಷಿತ ಅಸ್ಪಶತಾಚರಣೆ ಎಂದರೆ ಇದೇ ಅಲ್ಲವೇ?

-ರಘೋತ್ತಮ ಹೊ.ಬ

ಚಾಮರಾಜನಗರ

 


ಜಾತಿ ನಿರ್ಮೂಲನೆಯ ಹಾದಿಯಲಿ ಮಾಯಾವತಿ-ರಘೋತ್ತಮ ಹೊ.ಬ

16/01/2011

ಒಂದಾನೊಂದು ಕಾಲವಿತ್ತು. ಆ ಕಾಲದಲ್ಲಿ ದಲಿತರು ಊರ ಗೌಡರ, ಮತ್ತಿತರ ಮೇಲ್ವರ್ಗದವರ ಮನೆಯ ಮುಂದೆ ಕೂಲಿಗಾಗಿ, ಒಂದೊತ್ತಿನ ತುತ್ತಿಗಾಗಿ ಅಮ್ಮಾ ತಾಯಿ ಎಂದು ಭಿಕ್ಷೆ ಬೇಡಬೇಕಾಗಿತ್ತು. ಅಂದ ಹಾಗೆ ಅಂತಹ ಕಾಲ ಈಗಲೂ ಇದೆ. ಆದರೆ ತುಸು ಬದಲಾಗಿದೆ. ಈ ಬದಲಾದ ಕಾಲಘಟ್ಟದಲ್ಲಿ ದಲಿತರು ಖುರ್ಚಿಯ ಮೇಲೆ ಕುಳಿತಿರುತ್ತಾರೆ. ಇತರರು ಅವರ ಕಾಲು ಸ್ಪರ್ಶಿಸಲು, ಅವರು ನೀಡುವ ಆಜ್ಞೆಯನ್ನು ಪಾಲಿಸಲು ಕ್ಯೂನಲ್ಲಿ ನಿಂತಿರುತ್ತಾರೆ. ಒಟ್ಟಿನಲ್ಲಿ ಎಲ್ಲವೂ ಉಲ್ಟಾ ಪಲ್ಟಾ!. ಅಂದಹಾಗೆ ಅಂತಹ ಉಲ್ಪಾಪಲ್ಟಾ ವ್ಯವಸ್ಥೆಯ ಅಧುನಿಕ ಯುಗದ ಪ್ರತಿನಿಧಿಯಾಗಿ, ಮೇಲ್ವರ್ಗದವರು ಬನ್ನಿ ನನ್ನ ಕಾಲನ್ನು ಸ್ಪರ್ಶಿಸಿ ನಿಮ್ಮ ಪಾಪಗಳಿಗೆ (ಅಸ್ಪಶ್ಯತಾಚರಣೆ) ಪ್ರಾಯಶ್ಚಿತ ಪಡೆದುಕೊಳ್ಳಿ ಎಂದು ರಾಜ ಗಾಂಭೀರ್ಯದಿಂದ ಖುರ್ಚಿಯ ಮೇಲೆ ಕುಳಿತ ವ್ಯಕ್ತಿ ಬೇರಾರು ಅಲ್ಲ. 

ಬೆಹನ್ ಕುಮಾರಿ ಮಾಯಾವತಿ. ಕನ್ನಡದಲ್ಲಿ ಪ್ರೀತಿಯಿಂದ ಹೇಳುವುದಾದರೆ ಅಕ್ಕ ಮಾಯಾವತಿ. ಮಾಯಾವತಿಯವರು ಹುಟ್ಟಿದ್ದು 1956ರ ಜನವರಿ 15ರಂದು. ತಂದೆ ಪ್ರಭುದಾಸ್ ದಯಾಳ್, ತಾಯಿ ರಾಮರತಿ, ಕಾಕತಾಳೀಯವೆಂದರೆ 1956ರ ಆ ವರ್ಷದ ಅಂತ್ಯದಲ್ಲೇ ಅಂದರೆ ಡಿಸೆಂಬರ್ 6ರಂದು ಬಾಬಾಸಾಹೇಬ್ ಅಂಬೇಡ್ಕರ್‌ರವರು ಈ ದೇಶ ವಾಸಿಗಳನ್ನು ಬಿಟ್ಟು ಹೋದದ್ದು, ಆದರೆ ಅವರು ಹೋಗುವುದಕ್ಕೆ ಮುನ್ನವೇ ಓರ್ವ ಧೀರ ಹೆಣ್ಣು ಮಗಳನ್ನು ತಮ್ಮ ಹೋರಾಟದ ರಥವನ್ನು ಎಳೆಯಲು ಈ ದೇಶದ ಮಡಿಲಿಗೆ ಇಟ್ಟು ಹೊರಟು ಹೋಗಿದ್ದರು!. ನಿಶ್ಚಿಂತೆ ಯಿಂದ ಹೇಳಬಹುದು; ಆ ಧೀರ ಹೆಣ್ಣು ಮಗಳು ಮಾಯಾವತಿಯವರಲ್ಲದೆ ಬೇರಾರು ಅಲ್ಲ ಎಂಬುದನ್ನು.

ಯಾಕೆಂದರೆ ಅಂಬೇಡ್ಕರರ ತತ್ವವನ್ನು, ಅವರ ಆಸೆ ಆಕಾಂಕ್ಷೆಗಳನ್ನು ಕ್ಷಣಕ್ಷಣಕ್ಕೂ ಹೆಜ್ಜೆ ಹೆಜ್ಜೆಗೂ ಉತ್ತರ ಪ್ರದೇಶದಲ್ಲಿ ಬಿತ್ತುತ್ತಿರುವ ಅವರು ಒಂದರ್ಥದಲ್ಲಿ ಅದನ್ನು ಅಂಬೇಡ್ಕರ್ ರಾಜ್ಯವನ್ನಾಗಿ ಮಾಡಿದ್ದಾರೆ. ಬಹುಶಃ ಅಂತಹ ದಿನವೊಂದು ಬರುತ್ತದೆ, ನನ್ನ ಚಿಂತನೆಗಳಿಗೆ ಈ ಪರಿಯ ಬೆಲೆ ಸಿಗುತ್ತದೆ, ಎಂದು ಸ್ವತಃ ಬಾಬಾಸಾಹೇಬರು ಕೂಡ ಕನಸು ಕಂಡಿರಲಿಲ್ಲವೋ ಏನೊ? ಮಾಯಾವತಿಯವರು ಆ ಪರಿಯಲ್ಲಿ ಅಂಬೇಡ್ಕರ್‌ರನ್ನು ಉತ್ತರಪ್ರದೇಶದಲ್ಲಿ ಪ್ರತಿಷ್ಠಾಪಿಸಿ ದ್ದಾರೆ. ತನ್ಮೂಲಕ ಇಡೀ ರಾಷ್ಟ್ರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಎಂದರೆ ಏನು ಎಂದು ತೋರಿಸಿ ಕೊಡುತ್ತಿದ್ದಾರೆ.

ಹಾಗಿದ್ದರೆ ಮಾಯಾವತಿಯವರು ಇಂತಹ ಕೆಲಸವನ್ನು ಯಾವುದೋ ಕಚೇರಿಯಲ್ಲಿ ಕ್ಲರ್ಕ್ ಆಗಿ ಅಥವಾ ಆಫೀಸರ್ ಆಗಿ ಮಾಡಿದರೆ ? ಊಹೂಂ, Infact ಅವರು I.A.S  ಆಫೀಸರ್ ಆಗಬೇಕೆಂದೇ ಗುರಿ ಇಟ್ಟುಕೊಂಡವರು! ಆದರೆ ಆದದ್ದು ಮಾತ್ರ ಸಮಸ್ತ ಒಟ್ಟಾರೆ ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ಮುಖ್ಯಮಂತ್ರಿ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಬಾರಿ! ಅದರಲ್ಲೂ ನಾಲ್ಕನೇ ಬಾರಿಯಂತೂ ಪೂರ್ಣ ಬಹುಮತದೊಂದಿಗೆ. undisputed queen  ಅಂಥಾರಲ್ಲ ಹಾಗೆ. ಆಶ್ಚರ್ಯ, ಯಾವ ಮುಖ್ಯಮಂತ್ರಿ ಪದವಿ ಪಡೆಯಲು ದಲಿತರು ಮೇಲ್ಜಾತಿ ಪಕ್ಷಗಳ ಮುಂದೆ ಕೈ ಕಟ್ಟಿ ನಿಲ್ಲುತ್ತಾರೋ, ಮೇಲ್ವರ್ಗದವರ ಬೂಟು ನೆಕ್ಕುತ್ತಾರೋ ಅಂತಹ ಮುಖ್ಯಮಂತ್ರಿ ಪದವಿಯನ್ನು ದಲಿತ ಹೆಣ್ಣು ಮಗಳೋರ್ವಳು ನಾಲ್ಕು ಬಾರಿ ಪಡೆಯುತ್ತಾಳೆಂದರೆ! ಹಾಗಿದ್ದರೆ ಮಾಯಾವತಿಯವರು ಮೇಲ್ಜಾತಿ ಪಕ್ಷಗಳ ಮುಂದೆ ತಲೆ ಬಗ್ಗಿಸಿ, ಕೈ ಕಟ್ಟಿ ನಿಂತು ಅಂತಹ ಪದವಿ ಪಡೆದರೆ? ಅಥವಾ ಅವರ ಚಮಚಾಗಿರಿ ಮಾಡಲು ತಮ್ಮ ಜೀವನವನ್ನೇ ಸಮರ್ಪಿಸಿದರೇ? ಖಂಡಿತ ಇಲ್ಲ.

ಅವರದೇ ಸ್ವಂತ ಮನೆ ಕಟ್ಟಿಕೊಂಡರು.  ’’Scheduled Caste Federation”  ಎಂಬ ಯಾವ ಸ್ವಂತ ಮನೆಯನ್ನು (ಪಕ್ಷ) ಕಟ್ಟಿ 1950ರ ದಶಕದಲ್ಲಿ ಅಂಬೇಡ್ಕರ್ ‘ಈ ಮನೆಯನ್ನು ನಿಮಗೋಸ್ಕರ ಕಟ್ಟಿದ್ದೇನೆ. ಇದು ಹಾಳಾಗದಂತೆ ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ಕರೆ ಇತ್ತರೋ, ಕಾನ್ಷೀರಾಂರವರು ಕಟ್ಟಿದ ಅಂತಹದ್ದೇ ಮನೆಯ (ಬಿಎಸ್‌ಪಿ) ಅಧಿಪತಿಯಾಗಿ ಮಾಯಾವತಿ ಉತ್ತರ ಪ್ರದೇಶವೆಂಬ ಈ ದೇಶದ ಬೃಹತ್ ರಾಜ್ಯಕ್ಕೆ ನಾಲ್ಕುಬಾರಿ ಮುಖ್ಯಮಂತ್ರಿ ಯಾದರು. “Political power is the master key” ಎಂಬ ಅಂಬೇಡ್ಕರ್‌ರ ಸುಪ್ರಸಿದ್ಧ ನಾಣ್ನುಡಿಯಂತೆ ರಾಜಕೀಯ ಶಕ್ತಿ ಎಂಬ ಆ ಮಾಸ್ಟರ್‌ಕೀಯನ್ನು ಮಾಯಾವತಿ ನಾಲ್ಕು ಬಾರಿ ಪಡೆದುಕೊಂಡರು. ಅಂದಹಾಗೆ ಮುಂದೊಂದು ದಿನ ಅವರು ಈ ದೇಶದ ಸಂಸತ್ತಿನ ಮಾಸ್ಟರ್ ಕೀ ಯನ್ನು (ಪ್ರಧಾನಿ ಪಟ್ಟ) ಪಡೆದುಕೊಂಡರೂ ಅಚ್ಚರಿ ಏನಿಲ್ಲ.

ಹಾಗಂತ ಮಾಯಾವತಿಯವರಿಗೆ ಅಧಿಕಾರ ಎಂಬ ಮಾಸ್ಟರ್ ಕೀ ದಿಢೀರನೆ ಒಲಿಯಿತೆ? ಅಥವಾ ವಂಶಪಾರಂಪರ್ಯವಾಗಿ ಅವರಿಗೆ ಹಸ್ತಾಂತರ ವಾಯಿತೆ? ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹ ರಾವ್ ಹೇಳಿದ ಹಾಗೆ ಅದು ಪ್ರಜಾಪ್ರಭುತ್ವದ ಅದ್ಭುತ!. “It is a miracle of democracy” ಹೌದು, ಮಾಯಾವತಿ ಯವರು ರಾಷ್ಟ್ರ ರಾಜಕಾರಣದಲ್ಲಿ ಈ ಪರಿಯ ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಅದ್ಬುತವೇ. ಏಕೆಂದರೆ 1977ರಲ್ಲಿ I.A.S ಗೆ ತಯಾರಿ ನಡೆಸುತ್ತಿದ್ದ ಮಾಯಾವತಿಯವರನ್ನು ಕಾನ್ಷೀರಾಂ ಭೇಟಿ ಮಾಡಿದಾಗ ಅವರಿಗೆ ಕೇವಲ 21 ವರ್ಷ. ಹಾಗಂತ ಮಾಯಾವತಿ ದೊಡ್ಡ ಶ್ರೀಮಂತರ ಮಗಳು, ಅವರಿಂದ ನನ್ನ ಹೋರಾಟಕ್ಕೆ ಆರ್ಥಿಕ ಬಲ ಬರುತ್ತದೆ ಎಂದು ಕಾನ್ಷೀರಾಂರವರು ಮಾಯಾವತಿಯವರನ್ನು ಭೇಟಿ ಯಾಗಲಿಲ್ಲ. ಬದಲಿಗೆ ದೆಹಲಿಯಲ್ಲಿ ನಡೆದ ರ್ಯಾಲಿ ಯೊಂದರಲ್ಲಿ ಆಗಿನ ಕೇಂದ್ರ ಮಂತ್ರಿ ರಾಜ್ ನಾರಾಯಣ್‌ರವರು ದಲಿತರನ್ನು ಹರಿಜನರೆಂದು ಸಂಬೋಧಿಸಿದ್ದಕ್ಕೆ ಪ್ರತಿಯಾಗಿ 21ವರ್ಷದ ಮಾಯಾವತಿ ಎಂಬ ಆ ಶಾಲಾ ಶಿಕ್ಷಕಿ ಉಗ್ರವಾಗಿ ಪ್ರತಿಭಟಿಸಿದ್ದನ್ನು ಕೇಳಿ ಕುತೂಹಲಗೊಂಡು ಕಾನ್ಷೀರಾಂರವರು ಅವರನ್ನು ಭೇಟಿಯಾದರು.

ಕಾನ್ಷೀರಾಂರ BAMCEF (Backward and Minority Community Employees Federation)ನ ಸಕ್ರಿಯ ಸದಸ್ಯರಾಗಿ, 1981ರಲ್ಲಿ ಅವರು ಸ್ಥಾಪಿಸಿದ DS4  (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ)ಯ ಕಾರ್ಯಕರ್ತರಾಗಿ ಕಾನ್ಷಿರಾಂರ ಜೊತೆ ಸೈಕಲ್‌ನಲ್ಲಿ ಇಡೀ ದೇಶವನ್ನೇ ಸುತ್ತಿದ ಮಾಯಾವತಿಯವರು ಕಾನ್ಷಿರಾಂರ ನೆರಳಾಗಿ, “DRDOದ ಮಾಜಿ ವಿಜ್ಞಾನಿ ನಡೆಸುತ್ತಿದ್ದ ಸಾಮಾಜಿಕ ರಾಜಕೀಯ ಸಂಶೋಧನೆಯ ಸಹಾಯಕರಾಗಿ ಸೇರಿಕೊಂಡರು.

ಮುಂದೆ BAMCEF ಮತ್ತು DS4 mock ಚಳವಳಿಗಳ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಷೀರಾಂ 1984ರ ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಬಹುಜನ ಸಮಾಜ ಪಕ್ಷವನ್ನು (ಬಿಎಸ್‌ಪಿ) ಸ್ಥಾಪಿಸಿದಾಗ ಮಾಯಾವತಿಯವರು ಕಾನ್ಷೀರಾಂರ ಪಕ್ಕ ನಿಂತಿದ್ದರು. ನಿಜ, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಈ ದೇಶದ ಶೇ 85ರಷ್ಟಿದ್ದಾರೆ. ಅವರು ಬಹುಜನರು. ಉಳಿದ ಮೇಲ್ವರ್ಗದವರು ಶೇ.15ರಷ್ಟಿದ್ದಾರೆ ಅವರು ಮನುವಾದಿಗಳು. ಆದ್ದುದರಿಂದ ನನ್ನದು ಬಹುಜನರನ್ನು ಪ್ರತಿನಿಧಿಸುವ ಪಕ್ಷ ಎಂಬ ಕಾನ್ಷಿರಾಂರ ವೈಜ್ಞಾನಿಕ ರಾಜಕೀಯ ಸಿದ್ಧಾಂತವನ್ನು ಆ ಸಂದರ್ಭದಲ್ಲಿ ಬಹುತೇಕರು ಮಾಡಿರಬಹುದು. ಆದರೆ ಅದು mock ಅಲ್ಲ. Truth ಎಂಬುದನ್ನು ಹೆಜ್ಜೆ ಹೆಜ್ಜೆಗೆ ಸಾಧಿಸುತ್ತಾ ಹೋದವರು ಮಾಯಾವತಿ!

ಅಂತಹ ಸಾಧನೆಯ ಹಾದಿಯಲ್ಲಿ ಅವರು 1984ರ ಡಿಸೆಂಬರ್‌ನಲ್ಲಿ ಪ್ರಪ್ರಥಮವಾಗಿ ಲೋಕಸಭಾ ಚುನಾವಣೆಗೆ ಧುಮುಕಿದಾಗ ಪಡೆದದ್ದು 44,445 ಮತಗಳನ್ನು. ನಂತರ 1985ರ ಬಿಜ್ನೂರ್ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಪಡೆದದ್ದು 61,504 ಮತಗಳನ್ನು. 1987ರ ಮೇ ತಿಂಗಳಿನಲ್ಲಿ ಹರಿದ್ವಾರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಭ್ಯರ್ಥಿಯಾದ ಮಾಯಾವತಿ 1,25,399 ಮತಗಳನ್ನು ಪಡೆದರು. ಹಾಗೆಯೇ ಆ ಚುನಾವಣೆಯಲ್ಲಿ 2ನೆ ಸ್ಥಾನ ಪಡೆದು ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿದ ಅವರು, ಅಂತಹ ನಡುಕವನ್ನು ಕಾಂಗ್ರೆಸ್ ನಿರಂತರ ಅನುಭವಿಸುವಂತೆ ಮಾಡಿದ್ದು ಪ್ರಜಾಪ್ರಭುತ್ವದ ವ್ಯಂಗ್ಯವೆನ್ನದೆ ವಿಧಿಯಿಲ್ಲ!

1989 ಬಿಜ್ನೂರ್ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಶ್ರಮವಹಿಸಿದ ಮಾಯಾವತಿ 1,83,189 ಮತಗಳನ್ನು ಪಡೆದು ದಿಗ್ವಿಜಯಿಯಾದರು. ತನ್ಮೂಲಕ ತಾವು ಪ್ರಜಾಪ್ರಭುತ್ವದ ಅದ್ಭುತ ಎಂಬ ವಿಶೇಷಣಕ್ಕೆ ಸಾಕ್ಷಿಯಾದರು. ಒಂದಂತು ನಿಜ, ಮಾಯಾವತಿ ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತೆ ಕಾಂಗ್ರೆಸ್ ಎಂಬ ಹುಸಿ ಜಾತ್ಯಾತೀತ ವಾದಿಯ ಬುಡ ಅಲುಗಾಡುತ್ತಾ ಹೋಯಿತು.

ರಾಜಕೀಯ ಅಧಿಕಾರದ ಮಹತ್ವ ಗೊತ್ತಿಲ್ಲದ ಜನಸಮೂಹವನ್ನು ಯಾವ ಕಾಂಗ್ರೆಸ್ ದಶಕಗಳಿಂದ ಮೋಸಗೊಳಿಸಿತ್ತೋ ಅಂತಹ ಮೋಸವನ್ನು ಬಯಲುಗೊಳಿಸುತ್ತಾ ಮಾಯಾವತಿ ಮುನ್ನುಗ್ಗ ತೊಡಗಿದರು. ನಡುವೆ ಅವರ ಈ ಮುನ್ನುಗುವಿಕೆಗೆ ಯಾರೂ ತಡೆಯೊಡ್ಡಲಿಲ್ಲವೆ ? ಅಥವಾ ಪುರುಷ ಪ್ರಧಾನ ರಾಜಕಾರಣದಲ್ಲಿ ಮಹಿಳೆಯೋರ್ವಳನ್ನು ಹೀಗೆ ಬೆಳೆಯಲು ಎಲ್ಲರೂ ಬಿಟ್ಟರೆ ? ಬಿಡುವುದೆಂತು ಬಂತು. 1984ರಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಹೇಗೆ ಅವರ ಸ್ವಂತ ಅಂಗರಕ್ಷಕ ಪಡೆಯವರೆ ಹೊಡೆದುಕೊಂದರೋ ಅದೇ ರೀತಿ ಜೂನ್ 2, 1995ರಂದು ಮಾಯಾವತಿಯನ್ನು ಕೊಲ್ಲುವ ಕ್ರೂರ ಪ್ರಯತ್ನ ನಡೆಯಿತು.

ಲಕ್ನೋ ಗೆಸ್ಟ್ ಹೌಸ್ ಪ್ರಕರಣ ಎಂಬ ಕುಪ್ರಸಿದ್ಧ ಆ ಪ್ರಕರಣದಲ್ಲಿ ಮಾಯಾವತಿ ಬದುಕಿದ್ದೇ ಹೆಚ್ಚು ! ಏಕೆಂದರೆ ಸುಮಾರು 200ಕ್ಕೂ ಹೆಚ್ಚಿದ್ದ ಶಸ್ತ್ರ ಸಜ್ಜಿತ ಗೂಂಡಾಗಳು ಲಕ್ನೋ ಗೆಸ್ಟ್ ಹೌಸ್‌ನತ್ತ ನುಗ್ಗಿ, ಶಾಸಕರ ಸಭೆ ನಡೆಸುತ್ತಿದ್ದ ಮಾಯಾವತಿ ಮತ್ತವರ ಬೆಂಬಲಿಗರ ಮೇಲೆ ಮುಗಿ ಬಿದ್ದಿತು. ಚಮ್ಮಾರರಿಗೆ ಕೊಬ್ಬುಬಂದಿದೆ. ಅವರಿಗೆ ಇಂದು ಪಾಠಕಲಿಸುತ್ತೇವೆ ಎಂದು ಚಾಕು, ಚೂರಿ, ಇತ್ಯಾದಿ ಹರಿತವಾದ ಆಯುಧಗಳೊಂದಿಗೆ ನುಗ್ಗಿದ ಆ ಗುಂಪು.

ಮಾಯಾವತಿಯವರನ್ನು ಹೊರಗೆಳೆಯಿರೋ.. .. . ಕೊಲ್ಲಿರೋ. .. . ಎಂದು ಅಬ್ಬರಿಸುತ್ತಾ ಅಶ್ಲೀಲ ಪದಗಳಿಂದ ಅವರನ್ನು ನಿಂದಿಸುತ್ತಾ ಹಲ್ಲೆ ಮಾಡಲು ಮುಂದಾಯಿತು. ವಿಜಯ್ ಭೂಷಣ್ ಮತ್ತು ಸುಭಾಷ್‌ಸಿಂಗ್ ಬಾದಲ್ ಎಂಬ ಇಬ್ಬರು ಕಿರಿಯ ಪೊಲೀಸ್ ಅಧಿಕಾರಿಗಳು ಧೈರ್ಯ ಹಾಗೂ ಸಾಹಸದಿಂದ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಆ ದಿನ ಆ ವಿಚ್ಛಿದ್ರಕಾರಿ ಗುಂಪನ್ನು ಚದುರಿಸದೇ ಹೋಗಿದ್ದರೆ ಮಾಯಾವತಿ ಎಂಬ ಪ್ರಜಾಪ್ರಭುತ್ವದ ಆ ಅದ್ಭುತ ಖಂಡಿತ ಇಂದು ನಮ್ಮ ಮುಂದೆ ಇರುತ್ತಿರಲಿಲ್ಲ… ಈ ದೇಶದ ಕೋಟ್ಯಂತರ ಶೋಷಿತರ ಆಶೀರ್ವಾದ, ಸಂಕಷ್ಟದ ಕ್ಷಣಗಳನ್ನು ಮೆಟ್ಟಿ ನಿಲ್ಲುವ ತಮ್ಮ will power  ನಿಂದಾಗಿ ಮಾಯಾವತಿ ಬದುಕುಳಿದರು. ಅವರ ಜೀವನವನ್ನೇ ಪರೀಕ್ಷೆಗೆ ಒಡ್ಡಿದ ಆ ಘಟನೆ ಅವರನ್ನು ಒಂದರ್ಥದಲ್ಲಿ ಉಕ್ಕಿನ ಮಹಿಳೆಯನ್ನಾಗಿಸಿತು.

ಘಟನೆಯ ನಂತರ ತಮ್ಮ ಜೀವನದಲ್ಲಿ ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. ಏಕೆಂದರೆ ಘಟನೆಯ ಮಾರನೆಯ ದಿನವೇ ಅಂದರೆ ಜೂನ್ 3, 1995ರಂದು ಈ ದೇಶದ ಕೋಟ್ಯಂತರ ಬಹುಜನರು ಶತ ಶತಮಾನಗಳಿಂದ ಏನು ಬಯಸಿದ್ದರೊ ಅದು ನಡೆದು ಹೋಗಿತ್ತು ! ಮಾಯಾವತಿ ಎಂಬ ದಲಿತ ಹೆಣ್ಣು ಮಗಳು ಉತ್ತರ ಪ್ರದೇಶ ಎಂಬ ಆ ಬೃಹತ್ ರಾಜ್ಯದ, ತನ್ಮೂಲಕ ಈ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಯಾವ political power ಅನ್ನು ಅಂಬೇಡ್ಕರ್ Master key  ಎಂದಿದ್ದರೋ ಅಂತಹ ಮಾಸ್ಟರ್‌ಕೀಯನ್ನು ಮಾಯಾವತಿ ತಮ್ಮ ಕೈಗೆ ತೆಗೆದುಕೊಂಡಿದ್ದರು.

 

ಹಾಗಿದ್ದರೆ ತಮ್ಮ ಪ್ರಥಮ ಅವಧಿಯಲ್ಲಿ ಮಾಯವತಿಯವರು ಏನು ಮಾಡಿದರು? ಒಂದಷ್ಟನ್ನು ಉಲ್ಲೇಖಿಸುವುದಾದರೆ, ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ 1,45,000 ರೌಡಿಗಳನ್ನು ಬಂಧಿಸಿದರು. ಮುಸಲ್ಮಾನರಿಗೆ ಉದ್ಯೋಗದಲ್ಲಿ ಶೇ.8.44ರಷ್ಟು ಮೀಸಲಾತಿ ನೀಡಿ ಅವರನ್ನು ಓಬಿಸಿ ಪಟ್ಟಿಗೆ ಸೇರಿಸಿದರು. ಮಥುರಾದ ಶ್ರೀಕೃಷ್ಣನ ದೇವಸ್ಥಾನದ ಪಕ್ಕದಲ್ಲಿದ್ದ ಮಸೀದಿಯನ್ನು ಒಡೆಯುವ ವಿಶ್ವಹಿಂದೂಪರಿಷತ್ತಿನ ಪ್ರಯತ್ನವನ್ನು ನಿರ್ದಾಕ್ಷಿಣ್ಯ ವಾಗಿ ವಿಫಲಗೊಳಿಸಿದ ಅವರು ಹಿಂದೂ ಧರ್ಮದ ವಿರುದ್ಧ ತಮ್ಮ ಜೀವನದುದ್ದಕ್ಕೂ ಕತ್ತಿ ಝಳಪಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯಕರ್‌ರ ನೆನಪಿನಲ್ಲಿ ಒಂದು ವಾರಗಳ ಕಾಲ ರಾಜ್ಯಾದ್ಯಂತ ಪೆರಿಯಾರ್ ಮೇಳ ನಡೆಸಿದರು. 

ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು. ಆಶ್ಚರ್ಯ ಬೇಡ, ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು. ಅದು 6 ತಿಂಗಳ ಮಟ್ಟಿಗೆ. ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು. ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ. ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7.5ಲಕ್ಷ ಎಕರೆ ಭೂಮಿ ವಿತರಿಸಿದರು. ದಲಿತರ 60,000 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು. ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15,000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು.

ತಮ್ಮ ಆರು ತಿಂಗಳ 2ನೇ ಅವಧಿಯ ಆಡಳಿತದ ನಂತರ ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾದುದ್ದು 2002 ಮಾರ್ಚ್ ತಿಂಗಳಿನಲ್ಲಿ; ಮತ್ತೆ ಅದೇ ಬಿಜೆಪಿಯ ಬೆಂಬಲ ದೊಂದಿಗೆ. ಈ ಬಾರಿಯ ಅವರ ಭವ್ಯ ಸಾಧನೆ ಎಂದರೆ ಪ್ರತಾಪಗಢದ ಸ್ವಘೋಷಿತ ರಾಜ, ರಾಜಾಬೈಯ ಅಲಿಯಾಸ್ ರಘುರಾಜ್ ಪ್ರತಾಪ್‌ಸಿಂಗ್‌ನನ್ನು ಮಟ್ಟಹಾಕಿದ್ದು. ಥೇಟ್ ಹಿಂದೀ ಸಿನಿಮಾಗಳ ಶೈಲಿಯಲ್ಲಿ ಕೊಲೆ, ಸುಲಿಗೆ, ದರೋಡೆಯನ್ನೇ  ಮಾಡಿಕೊಂಡಿದ್ದ, ಇಡೀ ಪ್ರತಾಪಗಡ ಜಿಲ್ಲ್ಲೆಯನ್ನೇ ಭಯದ ಕೂಪಕ್ಕೆ ತಳ್ಳಿದ್ದ ರಾಜಾಬೈಯನನ್ನು ಕೆಣಕುವ ಸಹಾಸಕ್ಕೆ ಹಿಂದಿನ ಯಾವ ಮುಖ್ಯಮಂತ್ರಿಗಳು ಕೈ ಹಾಕಿರಲಿಲ್ಲ. ಅದರೆ ಅವನನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಿದ ಮಾಯಾವತಿಯವರು ಅವನ 11,000 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ ಆತ ಸ್ವತಃ ನಿರ್ಮಿಸಿಕೊಂಡಿದ್ದ ಬೃಹತ್ ಸರೋವರ ಮಾದರಿಯ ಉದ್ಯಾನವನವನ್ನು ವಶಪಡಿಸಿಕೊಂಡು ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪಕ್ಷಿಧಾಮ ಎಂದು ಹೆಸರಿಟ್ಟರು! ಈ ಘಟನೆಯ ಮೂಲಕ ಉಕ್ಕಿನ ಮಹಿಳೆ ಇಡೀ ಜಗತ್ತಿಗೆ ತನ್ನ ನೈಜ ಉಗ್ರ ರೂಪ ತೋರಿದ್ದರು.

ದೌರ್ಜನ್ಯಕೋರರಿಗೆ ತನ್ನ ರಾಜ್ಯದಲ್ಲಿ ಯಾವ ರೀತಿ ಮರ್ಯಾದೆ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ಸಾರಿದ್ದರು. ಅಂದಹಾಗೆ ಒಬ್ಬ ರಾಜಬೈಯನನ್ನು ಹೀಗೆ ಮಟ್ಟ ಹಾಕಿದ ಮೇಲೆ ಅದೆಷ್ಟು ಶೋಷಕ ಪುಡಿ ರಾಜಬೈಯಗಳ ತೊಡೆ ನಡುಗಿರಬೇಡ? ಮಾಯಾವತಿಯವರನ್ನು ಎನ್ನುವುದು ಈ ಕಾರಣಕ್ಕೇ!

formulasocial engineering   formula ನಡುವೆ ತಾಜ್ ಕಾರಿಡಾರ್ ಹಗರಣದ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡರೂ ಮಾಯಾವತಿ ಒದಗಿ ಬಂದ ಕಷ್ಟಗಳಿಗೆ ಎದೆಗುಂದಲಿಲ್ಲ. ಇಂತಹ ಕಷ್ಟಕಾಲದಲ್ಲಿಯೇ ತಮ್ಮ ಪ್ರೀತಿಯ ಗುರು ಮಾರ್ಗದಾತ, ಬಾಬಾಸಾಹೇಬ್ ಅಂಬೇಡ್ಕರ್ ರವರ ನಂತರ ಶೋಷಿತರ ಅಶಾಕಿರಣವಾಗಿ ಮೂಡಿಬಂದಿದ್ದ ದಾದಾಸಾಹೇಬ್ ಕಾನ್ಷಿರಾಂರ ಕಳೆದುಕೊಂಡ ಮಾಯವತಿ ಒಂದರ್ಥದಲ್ಲಿ ಅನಾಥರಾದರು. ಆದರೆ ಮಾಯಾವತಿ ಆ ಅನಾಥ ಮನಸ್ಥಿತಿಯಲ್ಲಿ ಹೆಚ್ಚು ದಿನ ಇರುವ ಹಾಗಿರಲಿಲ್ಲ. ಏಕೆಂದರೆ ಕಾನ್ಷಿರಾಂ ಅವರ ಮೇಲೆ ಹೊರಿಸಿದ್ದ ಜವಾಬ್ದಾರಿ ಅಂತಹದ್ದಾಗಿತ್ತು. ಪದೇ ಪದೇ ಅಲ್ಪಮತ ಪಡೆದು ಬಿಜೆಪಿ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದರ ಬಗ್ಗೆ ರೋಸಿ ಹೋಗಿದ್ದ ಅವರು ಪೂರ್ಣ ಬಹುಮತ ಪಡೆಯುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಬಹುಕಾಲದ ಬಹುಜನ ಸಮಾಜ ಸಿದ್ಧಾಂತವನ್ನು ಬದಲಿಸಿ ಸರ್ವಜನ ಸಮಾಜ ಸಿದ್ದಾಂತವನ್ನು ಚಾಲನೆಗೆ ತಂದರು.

ಈ ಸಂದರ್ಭದಲ್ಲಿ ಅವರ ಜೊತೆಯಾದರವರೆಂದರೆ ನಿವೃತ್ತ ನ್ಯಾಯಾಧೀಶರೋರ್ವರ ಮಗನಾದ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸತೀಶ್ ಚಂದ್ರ ಮಿಶ್ರ. ಯಾವ ಎರಡು ಧ್ರುವಗಳು ಸಮಾಜದಲ್ಲಿ ಪರಸ್ಪರ ವಿರುದ್ದ ದಿಕ್ಕಿನಲ್ಲಿವೆಯೋ ಅಂತಹ ಎರಡು ಧ್ರುವಗಳನ್ನು ಅಂದರೆ ದಲಿತರು ಮತ್ತು ಬ್ರಾಹ್ಮಣರನ್ನು ರಾಜಕೀಯವಾಗಿ ಒಂದು ಗೂಡಿಸುವ, ಆ ಮೂಲಕ ಬಹುಮತ ಪಡೆಯುವ ವಿಚಿತ್ರ ವನ್ನು ಪ್ರಯೋಗಿಸಿತು ಮಾಯಾ-ಮಿಶ್ರ ಜೋಡಿ. ಇದಕ್ಕೆ ಅವರು ಕರೆದಿದ್ದು ಎಂದು! ಆಶ್ಚರ್ಯ! ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರರ ಈ ಫಲನೀಡಿತ್ತು.

social engineering ದಲಿತ, ಬ್ರಾಹ್ಮಣರ ಜೊತೆ ನಸೀಮುದ್ದೀನ್ ಸಿದ್ದೀಕಿಯವರ ನೇತೃತ್ವದಲ್ಲಿ ಮುಸ್ಲಿಂ ಜನರ ಬೆಂಬಲ ಪಡೆದ ಮಾಯಾವತಿಯವರು 2007ರ ಮೇ ತಿಂಗಳಿನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಪಡೆದು ಪೂರ್ಣ ಬಹುಮತ ಪಡೆದರು! ಕಾನ್ಷೀರಾಂ ಎಂಬ ಸಾಮಾಜಿಕ ವಿಜ್ಞಾನಿಯ ಶಿಷ್ಯೆ ನಡೆಸಿದ ಈ ನ ಪ್ರಯೋಗ ಅದ್ಭುತ ಫಲನೀಡಿತ್ತು. 206 ಸದಸ್ಯರ ಸರಳ ಬಹುಮತದೊಂದಿಗೆ ಮಾಯಾವತಿ ಯವರು ನಾಲ್ಕನೇ ಬಾರಿಗೆ ಉತತಿರ ಪ್ರದೇಶದ ಮುಖ್ಯಮಂತ್ರಿಯಾದರು. ಒಂದಂತೂ ನಿಜ. ಯಾವ ರಾಜಕೀಯ ಅಧಿಕಾರಕ್ಕಾಗಿ ಶೋಷಿತರು ಅನ್ಯ ಪಕ್ಷಗಳ ಬಾಗಿಲಲ್ಲಿ ನಿಂತು ಗುಲಾಮಗಿರಿ ಮಾಡು ತ್ತಾರೋ, ಹಲ್ಲುಗಿಂಜಿ ನೆಲಕೆರೆಯುತ್ತಾರೋ ಅಂತಹ ಸ್ವಾಭೀಮಾನ ರಹಿತ ದಲಿತ ರಾಜಕಾರಣಿಗಳಿಗೆ ಮಾಯಾವತಿಯವರು ಅಂಬೇಡ್ಕರ್‌ರವರ ಮಾರ್ಗದಲ್ಲಿ ಸ್ವಾಭಿಮಾನ ಪೂರ್ವಕವಾಗಿ ಅಧಿಕಾರ ಪಡೆಯುವುದು ಹೇಗೆಂದು ತೋರಿಸಿಕೊಟ್ಟರು. ಶೋಷಕ ಸಮುದಾಯಗಳನ್ನು ಮಟ್ಟಹಾಕುವುದು ಹೇಗೆ ಅಥವಾ ಆ ಶೋಷಕ ಸಮುದಾಯಗಳನ್ನು ನಮ್ಮ ದಾರಿಗೆ ತರುವುದು ಹೇಗೆ ಎಂಬುದರ ಬಗ್ಗೆ ಇಡೀ ದಲಿತ ಸಮುದಾಯಕ್ಕೆ ಪಾಠ ಹೇಳಿಕೊಟ್ಟರು.

intermediate ಇಂದು ಉತ್ತರ ಪ್ರದೇಶದಲ್ಲಿ ಶೇ.10ರಷ್ಟಿರುವ ಬ್ರಾಹ್ಮಣರು ಮಾಯಾವತಿಯವರಲ್ಲಿ ರಕ್ಷಣೆ ಪಡೆದಿದ್ದಾರೆ. ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಅಂತಹದ್ದೇ ಘಟನೆ ದೇಶಾದ್ಯಂತ ನಡೆದರೆ? ಬ್ರಾಹ್ಮಣರೇ ದಲಿತರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶ ಇಡೀ ದೇಶಕ್ಕೆ ಸಾರಲ್ಪಟ್ಟರೆ? ಖಂಡಿತ ಅಲ್ಲಿ ಸಡಿಲವಾಗುವುದು ಜಾತಿ ವ್ಯವಸ್ಥೆ. ಜಾತಿ ವ್ಯವಸ್ಥೆಯ ಸೃಷ್ಟಿಕರ್ತರು ಮತ್ತು ಜಾತಿ ವ್ಯವಸ್ಥೆಯ ಬಲಿ ಪಶುಗಳು ಒಂದಾಗಿದ್ದಾರೆ ಇನ್ನು ನಮಗೇನು ಕೆಲಸ ಎಂದು ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಬರುವ ಇತರ ಜಾತಿಗಳಿಗೆ ಖಂಡಿತ ಅನಿಸೇ ಅನಿಸುತ್ತದೆಯಲ್ಲವೆ? ಹಾಗಾದಾಗ ಇಡೀ ದೇಶದಲ್ಲಿ ಜಾತೀಯತೆ ಮುಕ್ತ ಸಮಸಮಾಜ ನಿರ್ಮಾಣ ಖಂಡಿತ ಆಗುತ್ತದೆ.

ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಜಾತಿ ನಿರ್ಮೂಲನೆ ಎಂಬ ಕೃತಿ ಬರೆದು ಅದನ್ನು ನಿರ್ಮೂಲನೆ ಮಾಡುವುದು ಹೇಗೆಂದು ಕನಸು ಕಂಡರು. ಕಾನ್ಷೀರಾಂರವರು ಅಂಬೇಡ್ಕರ್ ರವರ ಅ ಕೃತಿಯನ್ನು ಓದಿ ಬಹುಜನ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಚಿಂತಿಸಿದರು. ಅಂಬೇಡ್ಕರ್ ಮತ್ತು ಕಾನ್ಷೀರಾಂರವರ ಚೇತನವನ್ನು ತಮ್ಮ ಹೃದಯದಲ್ಲಿ ಮನಸ್ಸಿನಲ್ಲಿ ತುಂಬಿಕೊಂಡಿರುವ ಮಾಯವತಿಯವರು ಜಾತಿ ನಿರ್ಮೂಲನೆಯ ಈ ನಿಟ್ಟಿನಲ್ಲಿ ಸರ್ವಜನ ಸಮಾಜ, ಆ ಮೂಲಕ ಸಮಸಮಾಜ ನಿರ್ಮಾಣದತ್ತ ಹೊರಟಿದ್ದಾರೆ. ಅಕಸ್ಮಾತ್ ಮಾಯಾವತಿಯವರು ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ? ಖಂಡಿತ ಈ ದೇಶದಲ್ಲಿ ಅತ್ಯಂತ ಅದ್ಭುತವಾದ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ. ಅಂತಹ ಅದ್ಭುತ ವ್ಯವಸ್ಥೆಯಲ್ಲಿ ಸಮಬಾಳು, ಸಮಪಾಲು ಎಂಬ ಸಿದ್ದಾಂತ ರಾರಾಜಿಸುತ್ತಿರುತ್ತದೆ. ಅಂಬೇಡ್ಕರರ ಜಾತಿ ನಿರ್ಮೂಲನೆಯ ಕನಸು ನನಸಾಗಿರುತ್ತದೆ.
ಜಾತಿ ನಿರ್ಮೂಲನೆಯ, ಸಮಸಮಾಜ ನಿರ್ಮಾಣದ ಈ ದಿಶೆಯಲ್ಲಿ ಮಾಯಾವತಿಯವರ ಈ ನಡೆ ನಿಜಕ್ಕೂ ಅಪ್ಯಾಯಮಾನವಾದುದಲ್ಲವೆ? ಬನ್ನಿ ಈ ನಿಟ್ಟಿನಲ್ಲಿ ಮಾಯಾವತಿಯವರನ್ನು ಬೆಂಬಲಿಸೋಣ. ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ. ಅವರಿಗೆ ಶುಭಾಶಯ ತಿಳಿಸೋಣ.
Wish you happy birthday ಬೆಹನ್ ಜೀ …

:-ರಘೋತ್ತಮ

_____________

http://vbnewsonline.com/JanaJanitha/40613/