ಜಾತೀಯತೆಗೆ ಬುದ್ಧ ಪರಿಹಾರ: ದೇವದಾಸ್:ರಾಜ್ಯ ಮಟ್ಟದ ಬೌದ್ಧ ಸಮಾವೇಶ

13/06/2011

ಹಾಸನ, ಜೂ.12: ಗೌತಮ ಬುದ್ಧನ ತ್ಯಾಗ ಮತ್ತು ಅವನ ಪಂಚಶೀಲ ತತ್ತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಅಗತ್ಯ ಇದೆ ಎಂದು ದಲಿತ ಸಂಘರ್ಷ ಸಮತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಹೇಳಿದ್ದಾರೆ. ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧನ ತತ್ತ್ವಗಳನ್ನು ಪ್ರತಿಯೊಬ್ಬರು ಪರಿಪಾಲನೆ ಮಾಡುವುದರಿಂದ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಹಾಸನದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸುತ್ತಿರುವ ಗಣ್ಯರು.

ಹಾಸನದ ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ 2550ನೆ ಬುದ್ಧ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಬೌದ್ಧ ಸಮಾವೇಶ ಉದ್ಘಾಟಿಸುತ್ತಿರುವ ಗಣ್ಯರು. ಇಂದಿನ ಜಾತೀಯತೆ, ಅಸ್ಪಶತೆ ಸೇರಿದಂತೆ ಸಾಮಾಜಿಕ ಪಿಡುಗುಗಳಿಗೆ ಬುದ್ಧ ಪರಿಹಾರ ಎಂದು ದೇವದಾಸ್ ನುಡಿದರು.ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಬೀಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಬುದ್ಧನ ಆದರ್ಶಗಳನ್ನು ಎಲ್ಲರೂ ಪಾಲಿಸಿದ್ದರೆ ಇಂದು ಅಣ್ಣಾ ಹಝಾರೆ ಮತ್ತು ಬಾಬಾ ರಾಮ್‌ದೇವ್ ಹೋರಾಟ ಆರಂಭಿಸುವ ಅಗತ್ಯ ಉದ್ಬವಿಸುತ್ತಿರಲಿಲ್ಲ ಎಂದವರು ಹೇಳಿದರು. ಮನುಷ್ಯನಿಗೆ ಎಷ್ಟೇ ಆಸ್ತಿ-ಪಾಸ್ತಿ ಇದ್ದರೂ ನೆಮ್ಮದಿ ಅತಿಮುಖ್ಯ. ಬುದ್ಧನ ತತ್ತ್ವಾದರ್ಶ ಪಾಲಿಸುವುದರಿಂದ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ದೇವದಾಸ್ ತಿಳಿಸಿದರು. ಬೌದ್ಧ ಗುರು ಬೋದಿದತ್ತ ಬಂತೇಜಿ ಮಾತನಾಡಿ, ಗೌತಮ ಬುದ್ಧನ ತತ್ತ್ವಾದರ್ಶಗಳು ಸರಳ ಮತ್ತು ಸುಸಂಸ್ಕೃತವಾಗಿವೆ. ಹಾಗಾಗಿಯೇ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ರು ದಲಿತ ತತ್ತ್ವದಿಂದ ಬುದ್ಧತ್ವದೆಡೆಗೆ ನಡೆಯಬೇಕೆಂಬ ಆಶಯ ಹೊಂದಿದ್ದರು ಎಂದರು. ಸಮಾವೇಶದಲ್ಲಿ ಸಾವಿರಾರು ಮಂದಿ ಬೌದ್ಧ ಅನುಯಾಯಿಗಳು, ದಲಿತ ಕಾರ್ಯಕರ್ತರು ಭಾಗವಹಿಸಿದ್ದರು.

http://vbnewsonline.com/MainNews/57321/